ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಶುಭವಾರ್ತಾ ಶ್ರವಣ ಯೋಗ


Team Udayavani, May 23, 2021, 7:05 AM IST

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಶುಭವಾರ್ತಾ ಶ್ರವಣ ಯೋಗ

23-05-2021

ಮೇಷ: ಗೃಹಕೃತ್ಯ ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಗೋಚರಿಸಲಿದೆ. ಕಾರ್ಯಕ್ಷೇತ್ರದಲ್ಲಿ ಉದ್ವೇಗ, ಹಸ್ತಕ್ಷೇಪಕ್ಕೆ ಎಡೆಯಾಗುವುದು. ನೀಚ ಜನರ ಸಹವಾಸ ಬೇಡ.

ವೃಷಭ: ಇದ್ದ ಆರ್ಥಿಕ ಸ್ಥಿತಿಯಲ್ಲಿ ನೀವು ಸುಧಾರಿಸುವುದು ಅವಶ್ಯಕವಾಗಿದೆ. ಖರ್ಚುವೆಚ್ಚವನ್ನು ಜಾಗ್ರತೆಯಿಂದ ಮಾಡಿರಿ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿಬಂದು ದೇವತಾ, ಮಂಗಲಕಾರ್ಯಗಳಿಗೆ ಅನುಕೂಲ.

ಮಿಥುನ: ಹೆಚ್ಚಿನ ದುಡಿಮೆ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಗೆ ಕೊಂಡೊಯ್ಯಲಿದೆ. ಬಂದ ಉತ್ತಮ ಅವಕಾಶಗಳನ್ನು ಅನುಕೂಲ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಬಂದ ಹೆಚ್ಚಿನ ಕಷ್ಟನಷ್ಟಗಳು ಉಪಶಮನವಾಗಲಿದೆ.

ಕರ್ಕ: ಅವಿವಾಹಿತರಿಗೆ ಕಂಕಣಬಲದ ಯೋಗವಿದ್ದರೂ ಪ್ರಯತ್ನಬಲಕ್ಕೆ ಹೆಚ್ಚಿನ ಗಮನಹರಿಸಬೇಕಾದೀತು. ಆರ್ಥಿಕ ವಿಚಾರದಲ್ಲಿ ಮಾತ್ರ ಲೆಕ್ಕಾಚಾರ ಸರಿ ಇದ್ದಲ್ಲಿ ಸಮಾಧಾನವಾದೀತು. ಗುರುಗಳ ಭೇಟಿಯ ಸಂದರ್ಭ ಬರಬಹುದು.

ಸಿಂಹ: ಹಲವಾರು ಸಮಸ್ಯೆಗಳಿಂದ ಮಾನಸಿಕ ಸಮತೋಲನ ಕಳೆದುಕೊಂಡ ನಿಮಗೆ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಆತ್ಮವಿಶ್ವಾಸ, ಪ್ರಯತ್ನಬಲ, ಸಹಕಾರ ಸದ್ಯದಲ್ಲೇ ಸಿಗಲಿದೆ. ವಿಶ್ವಾಸ ಹಾಗೂ ತಾಳ್ಮೆ ಅಗತ್ಯವಿದೆ.

ಕನ್ಯಾ: ಹಲವಾರು ಸಮಸ್ಯೆಗಳಿದ್ದರೂ ನಿಮಗೆ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಆತ್ಮವಿಶ್ವಾಸ, ಸಹಕಾರ ಮತ್ತು ಪ್ರಯತ್ನಬಲ ಸದ್ಯದಲ್ಲೇ ಸಿಗಲಿದೆ. ಶುಭವಾರ್ತಾ ಶ್ರವಣ ಯೋಗ.

ತುಲಾ: ಸ್ವಜನ ಬಂಧುಗಳಿಂದಲೂ, ಸ್ನೇಹಿತ ವರ್ಗದವರಿಂದಲೂ ಮಾನಸಿಕ ಒತ್ತಡ, ಮನಸ್ತಾಪದ ಸಂಭವ ತೋರಿಬಂದರೂ ನಿಮ್ಮ ಸಂಯಮ ನಿಮ್ಮನ್ನು ಕಾಪಾಡಲಿದೆ. ಮುನ್ನಡೆಗೆ ಬೇರೆ ದಾರಿಯನ್ನು ಕಂಡುಕೊಳ್ಳಿರಿ.

ವೃಶ್ಚಿಕ: ದೈವಬಲ ಉತ್ತಮವಿದ್ದು ಹಿಂದಿನ ತಪ್ಪುಗಳ ಪುನರಾವರ್ತನೆಯಾಗದಂತೆ ಹೆಚ್ಚಿನ ಜಾಗ್ರತೆಯಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿದ್ದಲ್ಲಿ ಜವಾಬ್ದಾರಿ ತೋರಿದಲ್ಲಿ ಯಶಸ್ಸು ದೊರೆಯಲಿದೆ. ತಾಳ್ಮೆ ಇರಲಿ.

ಧನು: ಧಾರ್ಮಿಕ ವಿಚಾರದಲ್ಲಿ ಗಮನಹರಿಸಿದಲ್ಲಿ ಶಾಂತಿ, ಸಮಾಧಾನ ತೋರಿಬರುತ್ತದೆ. ಕುಟುಂಬದಲ್ಲಿ ಮಂಗಲಕಾರ್ಯ, ದೇವತಾ ಕಾರ್ಯಗಳಿಗೆ ಸಕಾಲವಾದ ಕಾರಣ ಆಸಕ್ತಿ ವಹಿಸಿದಲ್ಲಿ ಅನುಗ್ರಹ ಕಂಡುಬರಲಿದೆ.

ಮಕರ: ಗ್ರಹಗಳ ಪ್ರತಿಕೂಲತೆಯಿಂದ ವ್ಯವಹಾರಿಕವಾಗಿ, ಸಾಮಾಜಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಆಗಾಗ ವಾದ ವಿವಾದ ಅನಾವಶ್ಯಕ ಭಾವೋದ್ವೇಗಗಳಿಗೆ ಬಲಿ ಬೀಳದಂತೆ ಜಾಗ್ರತೆ ಇರಲಿ. ಸಂಚಾರದಲ್ಲಿ ಆಸಕ್ತಿ ವಹಿಸದಿರಿ.

ಕುಂಭ: ಅನಿರೀಕ್ಷಿತ ಆರೋಗ್ಯ ಹಾನಿ ತೋರಿ ಬರುವುದರಿಂದ ಆದಷ್ಟು ಗಮನ ಇರಲಿ. ಕಾರ್ಯಕ್ಷೇತ್ರದಲ್ಲಿ ಅಸಹಕಾರ, ವಿಳಂಬದಿಂದ ಕಿರಿಕಿರಿ ಇರುತ್ತದೆ. ವಿರೋಧಿಗಳ ಉಪಟಳವಿದ್ದರೂ ಕಾರ್ಯಕ್ಷೇತ್ರದಲ್ಲಿ ಮುನ್ನಡೆ.

ಮೀನ: ಕುಟುಂಬ ಸ್ಥಾನದಲ್ಲಿ ಪ್ರೀತಿ ವಿಶ್ವಾಸ, ಸಹಕಾರ ತೋರಿಬರುತ್ತದೆ. ಸುಖೋಪಕರಣಗಳ ಖರೀದಿ, ಕೋರ್ಟುಕಚೇರಿ ಕಾರ್ಯದಲ್ಲಿ ಯಶಸ್ಸು. ಮಂಗಲ ಕಾರ್ಯಗಳಲ್ಲಿ ಆಸಕ್ತಿ ತೋರಿಬರಲಿದೆ. ಶುಭವಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.