ಚಾಂದಿವಲಿಯಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭ
Team Udayavani, May 23, 2021, 12:50 PM IST
ಮುಂಬಯಿ: ನಗರದ ಕೆ -ವೆಸ್ಟ್ ವಾರ್ಡ್ ಕೋವಿಡ್ ಮೂರನೇ ಅಲೆ ಎದುರಿಸಲು ತಯಾರಿ ಪ್ರಾರಂಭಿಸಿದ್ದು, ಮಕ್ಕಳಿಗೆ ಸಾಕಷ್ಟು ಹಾಸಿಗೆಗಳು ಲಭ್ಯವಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಕ್ಕಳನ್ನು ಪಾಲಕರಿಲ್ಲದೆ ದೀರ್ಘಕಾಲ ಪ್ರತ್ಯೇಕವಾಗಿರಿಸುವುದು ಕಷ್ಟವಾಗುವುದರಿಂದ ವಾರ್ಡ್ ಅಧಿಕಾರಿಗಳು ಎನ್‌ಜಿಒ ಡಾಕ್ಟರ್ಸ್ ಫಾರ್ ಯು ಸಂಸ್ಥೆಯ ಜತೆಗೆ ಮಕ್ಕಳಿಗೆ ಆಟದ ಪ್ರದೇಶಗಳು ಮತ್ತು ಪೋಷಕರಿಗೆ ಹಾಸಿಗೆಗಳನ್ನು ಸ್ಥಾಪಿಸಿದ್ದಾರೆ.
ಕೆ-ವೆಸ್ಟ್ ವಾರ್ಡ್ ತನ್ನ ಕೋವಿಡ್ ಕೇರ್ ಸೆಂಟರ್ 2 ಅನ್ನು ಚಾಂದಿವಲಿಯ ಎಸ್‌ಆರ್‌ಎ ಕಟ್ಟಡವೊಂದರಲ್ಲಿ ಪ್ರಾರಂಭಿಸಿದೆ. ಇದು 700 ಹಾಸಿಗೆಗಳೊಂದಿಗೆ 280 ಕೊಠಡಿಗಳನ್ನು ಹೊಂದಿದೆ. ಆರಂಭದಲ್ಲಿ ಕೇಂದ್ರವು ಪ್ರತ್ಯೇಕತೆ ಮತ್ತು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಮಾತ್ರ ವ್ಯವಸ್ಥೆಗೊಳಿಸಿದ್ದು, ಇದು ಯಾವುದೇ ಆಮ್ಲಜನಕ ಸೌಲಭ್ಯವನ್ನು ಹೊಂದಿರಲಿಲ್ಲ, ಆದರೆ 2ನೇ ಅಲೆ ಸಮಯದಲ್ಲಿ ನಾವು ಆಮ್ಲಜನಕ ಹಾಸಿಗೆಗಳನ್ನು ಸೇರಿಸಿದ್ದೇವೆ. ನಾವು ಈಗಾಗಲೇ ಮೂರನೇ ಅಲೆಗೆ ತಯಾರಿ ಪ್ರಾರಂಭಿಸಿದ್ದೇವೆ. ಮಕ್ಕಳ ಕೊಠಡಿಗಳತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಕೆ-ವೆಸ್ಟ್ ವಾ ರ್ಡ್‌ನ ಸಹಾಯಕ ಆಯುಕ್ತ ವಿಶ್ವಾಸ್ ಮೋಟೆ ಹೇಳಿದರು.
ನಾವು 140 ಹಾಸಿಗೆಗಳನ್ನು ಮಕ್ಕಳಿಗಾಗಿ ಪರಿವರ್ತಿಸಿದ್ದೇವೆ. ಈ ಪೈಕಿ 40 ಅನ್ನು ಈಗಾಗಲೇ ತೆರೆಯಲಾಗಿದೆ, ಉಳಿದವುಗಳು ಅಗತ್ಯವಿದ್ದಾಗ ಮತ್ತು ಕಾರ್ಯನಿರ್ವಹಿಸಲಿವೆ ಎಂದು ಮೋಟೆ ಹೇಳಿದ್ದಾರೆ. ಇಲ್ಲಿಯವರೆಗೆ ದೇಶಾದ್ಯಂತ 10,000 ಕ್ಕೂ ಹೆಚ್ಚು ವೈದ್ಯರು ಮತ್ತು ಅರೆವೈದ್ಯಕೀಯ ಸಿಬಂದಿಯನ್ನು ಸಂಸ್ಥೆ ಒದಗಿಸಿದ್ದು, ಮುಂಬಯಿಯಲ್ಲಿ ವೈದ್ಯರ ಕೊರತೆ ಇರುವುದರಿಂದ, ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ನಮಗೆ ಸಿಬಂದಿ ಸಿಕ್ಕಿದ್ದಾರೆ ಎಂದು ಆಯುಕ್ತ ವಿಶ್ವಾಸ್ ಮೋಟೆ ಹೇಳಿದರು.
ಕೆ-ವೆಸ್ಟ್ ವಾರ್ಡ್‌ನಲ್ಲಿ 21 ವೈದ್ಯರು, 57 ಅರೆವೈದ್ಯಕೀಯ ಸಿಬಂದಿ ಮತ್ತು 12 ನೈರ್ಮಲ್ಯ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಡಾಕ್ಟರ್ಸ್ ಫಾರ್ ಯು ಕಾರ್ಯದರ್ಶಿ ಡಾ| ಸಂಕೇತ್ ಶಾ ಹೇಳಿದರು. ಮಕ್ಕಳಿಗೆ ವಿಶೇಷ ಗಮನ ಬೇಕು, ಅವರ ಪೋಷಕರು ಇಲ್ಲದೆ ನಾವು ಅವರನ್ನು ದೀರ್ಘಕಾಲ ಪ್ರತ್ಯೇಕವಾಗಿಡಲು ಸಾಧ್ಯವಿಲ್ಲ, ಆದ್ದರಿಂದ ನಾವು ಪೋಷಕರಿಗೆ ಆಟದ ಪ್ರದೇಶಗಳು ಮತ್ತು ಹಾಸಿಗೆಗಳನ್ನು ಸ್ಥಾಪಿಸಿದ್ದೇವೆ ಎಂದು ಶಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.