ಬ್ಲ್ಯಾಕ್ ಫಂಗಸ್ 7000 ಕೋವಿಡ್ ಸೋಂಕಿತರನ್ನು ಬಲಿ ತೆಗೆದುಕೊಂಡಿದೆ : ಡಾ. ರಣದೀಪ್ ಗುಲೇರಿಯಾ
ಬ್ಲ್ಯಾಕ್ ಫಂಗಸ್ ಕೋವಿಡ್ ಗಿಂತ ಮಾರಕವಾಗಿ ಕಾಣಿಸಿಕೊಳ್ಳುತ್ತಿದೆ : ಡಾ. ರಣದೀಪ್ ಗುಲೇರಿಯಾ
ಶ್ರೀರಾಜ್ ವಕ್ವಾಡಿ, May 23, 2021, 3:31 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ಭಾರತದಲ್ಲಿ ಕೋವಿಡ್ ಸೋಂಕಿನ ಅಲೆ ಎರಡನೇ ಅಲೆ ದೇಶದಲ್ಲಿ ಆತಂಕವನ್ನು ಹುಟ್ಟಿ ಹಾಕಿದ ಬೆನ್ನಿಗೆ ಬ್ಯಾಕ್ ಫಂಗಸ್ ಭೀತಿ ಹುಟ್ಟಿಸಿದೆ.
“ಬ್ಲ್ಯಾಕ್ ಫಂಗಸ್ ದೇಶದಲ್ಲಿ ಸುಮಾರು 7,000 ಕ್ಕೂ ಹೆಚ್ಚು ಕೋವಿಡ್ 19 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ.” ಎಂದು ಏಮ್ಸ್ ದೆಹಲಿಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ನೀಡಿರುವ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎ ಎನ್ ಐ ವರದಿ ಮಾಡಿದೆ.
ದೇಶದಲ್ಲಿ ಸಧ್ಯದ ಮಟ್ಟಿಗೆ ಸುಮಾರು 8,848 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಇವೆ ಎಂದು ಇಂಡೋ‑ಏಷ್ಯನ್ ನ್ಯೂಸ್ ಸರ್ವಿಸ್ ಹೇಳಿದೆ.
ಇದನ್ನೂ ಓದಿ : ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೊಬ್ಬ ಶಿಕ್ಷಕಿ ಕೋವಿಡ್ ಸೋಂಕಿನಿಂದ ಸಾವು
ಇನ್ನು, ಸದ್ಯಕ್ಕೆ ಗುಜರಾತ್‌ನಲ್ಲಿ ಗರಿಷ್ಠ 2,281 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 2,000, ಆಂಧ್ರಪ್ರದೇಶದಲ್ಲಿ 910, ಮಧ್ಯಪ್ರದೇಶದಲ್ಲಿ 720, ರಾಜಸ್ಥಾನದಲ್ಲಿ 700, ಕರ್ನಾಟಕದಲ್ಲಿ 5,00, ಹರಿಯಾಣದಲ್ಲಿ 250, ದೆಹಲಿಯಲ್ಲಿ 197, ಪಂಜಾಬ್ ನಲ್ಲಿ 95, ಛತ್ತೀಸ್ ಘಡದಲ್ಲಿ 87, ಬಿಹಾರದಲ್ಲಿ 56, ತಮಿಳುನಾಡಿನಲ್ಲಿ 40, ಕೇರಳದಲ್ಲಿ 36, ಜಾರ್ಖಂಡ್ ನಲ್ಲಿ 27, ಒಡಿಶಾದಲ್ಲಿ 15, ಗೋವಾದಲ್ಲಿ 12 ಮತ್ತು ಚಂಡೀಗಡ 8 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಪತ್ತೆಯಾಗಿವೆ.
ಏತನ್ಮಧ್ಯೆ, ದೇಶದಲ್ಲಿ ಕನಿಷ್ಠ 219 ಮಂದಿ ಈವರೆಗೆ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೇ, ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪಿದವರ ಬಗ್ಗೆ ಇನ್ನೂ ಅಧಿಕೃತ ಅಂಕಿ ಅಂಶಗಳಿಲ್ಲ.
ಇದನ್ನೂ ಓದಿ : ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ : ಮಾರ್ಗಸೂಚಿ ಸರಿಯಾಗಿ ಪಾಲಿಸಿದರೇ ಅನ್ಲಾಕ್ : ಕೇಜ್ರಿವಾಲ್
ಕಪ್ಪು ಶಿಲೀಂಧ್ರ ಎಂದರೇನು?
‘ಕಪ್ಪು ಶಿಲೀಂಧ್ರ’ ಅಥವಾ ‘ಮ್ಯೂಕೋರ್ಮೈಕೋಸಿಸ್’ ಎಂಬುದು ಅಪರೂಪದ ಶಿಲೀಂಧ್ರಗಳ ಸೋಂಕು, ಇದು ಮ್ಯೂಕರ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಆರ್ದ್ರ ಮೇಲ್ಮೈಗಳಲ್ಲಿ ಕಂಡುಬರುತ್ತದೆ. ಸಣ್ಣ ಕರುಳಿನ ಮ್ಯೂಕಾರ್ಮೈಕೋಸಿಸ್ ನ ಅಪರೂಪದ ಪ್ರಕರಣಗಳು ಇತ್ತೀಚೆಗೆ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ವರದಿಯಾಗಿವೆ.
ಕಪ್ಪು ಶಿಲೀಂಧ್ರವನ್ನು ಸಾಮಾನ್ಯ ಲಕ್ಚಣಗಳು ಯಾವುವು..?
ಮೂಗಿನ ರಕ್ತಸ್ರಾವ, ಕಪ್ಪ ಬಣ್ಣದ ಅಸಹಜ ಸ್ರಾವ, ಮೂಗಿನ ದಟ್ಟಣೆ, ತಲೆ ಮತ್ತು ಕಣ್ಣಿನ ನೋವು, ಕಣ್ಣುಗಳ ಬಳಿ ಬೆವರುವುದು, ದೃಷ್ಟಿ ಮಂದವಾಗುವುದು, ಕೆಂಪು ಕಣ್ಣುಗಳು, ಕಡಿಮೆ ಗೋಚರತೆ, ಕಣ್ಣು ತೆರೆಯಲು ಮತ್ತು ಮುಚ್ಚಲು ತೊಂದರೆಯಾಗುವುದು, ಮುಖದ ಮೇಲೆ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಭಾವನೆ, ಬಾಯಿ ತೆರೆಯುವಲ್ಲಿ ಅಥವಾ ಏನನ್ನಾದರೂ ಅಗಿಯುವಲ್ಲಿ ತೊಂದರೆ, ಹಲ್ಲುನೋವು ಉಂಟಾಗುವುದು ಇತ್ಯಾದಿ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ನ ಪ್ರಮುಖ ಲಕ್ಷಣಗಳು.
ಸ್ಟೀರಾಯ್ಡ್ ಗಳನ್ನು ಚಿಕಿತ್ಸೆಗೆಂದು ನೀಡುತ್ತಿದ್ದ ಕೋವಿಡ್ 19 ಸೋಂಕಿತರಲ್ಲಿ ಮತ್ತು ವಿಶೇಷವಾಗಿ ಮಧುಮೇಹ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಕಂಡುಬರುತ್ತಿವೆ ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.
ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿ..?
ಬ್ಲ್ಯಾಕ್ ಫಂಗಸ್ ಗೆ ಆಂಫೊಟೆರಿಸಿನ್ ಬಿ ಅಥವಾ “ಆಂಫೊ-ಬಿ” ಎಂಬ ಆ್ಯಂಟಿ ಫಂಗಸ್ ಇಂಟ್ರಾವೆನಸ್ ಇಂಜೆಕ್ಷನ್ ನನ್ನು ಚಿಕಿತ್ಸೆಗೆ ನೀಡಲಾಗುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇನ್ನು, ಆಂಫೊಟೆರಿಸಿನ್-ಬಿ ಲಭ್ಯತೆಯನ್ನು ಹೆಚ್ಚಿಸಲಾಗುತ್ತಿದೆ. ಹೆಚ್ಚುವರಿ ಇಂಜೆಕ್ಶನ್ ಗಳ ಲಭ‍್ಯತೆಗಾಗಿ ಉತ್ಪಾದಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉತ್ತಮ: ಸುರೇಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.