ಇನ್ನು 15 ದಿನದೊಳಗೆ ಹೊಸ ಮರಳು ನೀತಿ ಜಾರಿ
Team Udayavani, May 23, 2021, 5:44 PM IST
ಚಾಮರಾಜನಗರ: ಹೊಸ ಮರಳು ನೀತಿಹಾಗೂ ಗಣಿ ನೀತಿಯು ಇನ್ನು 15ದಿನದೊಳಗೆ ಜಾರಿಗೆ ಬರಲಿದೆ ಎಂದು ಗಣಿಮತ್ತು ಭೂವಿಜ್ಞಾನ ಇಲಾಖೆಯ ಸಚಿವಮುರುಗೇಶ ಆರ್. ನಿರಾಣಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಗಣಿಹಾಗೂ ಭೂವಿಜ್ಞಾನ ಇಲಾಖೆಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ.ತ್ವರಿತ ಕಾರ್ಯನಿರ್ವಹಣೆ ಹಾಗೂ ಸರಳೀಕರಣಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
ಇಲಾಖೆಯ ಅಧಿಕಾರಿಗಳಿಗೆಪೊಲೀಸರಂತೆ ಸಮವಸ್ತ್ರ, ಪ್ರತ್ಯೇಕ ವಾಹನ,ಮೈನಿಂಗ್‌ಗಳಿಗೆ ತೆರಳುವಾಗ ಸೆಕ್ಯೂರಿಟಿ ಗಾರ್ಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಮರಳನ್ನುದ್ವಿಚಕ್ರವಾಹನ, ತ್ರಿಚಕ್ರ ವಾಹನ,ಎತ್ತಿನ ಗಾಡಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸ್ವಂತಬಳಕೆಗೆ ಸಾಗಿಸುವವರ ವಿರುದ್ಧ ಎಫ್ಐಆರ್‌ದಾಖಲಿಸಬಾರದೆಂದು ಸೂಚಿಸಲಾಗಿದೆ.
ಕೊಳ್ಳೇಗಾಲ ಭಾಗದಲ್ಲಿ ಇಂತಹ ಪ್ರಕರಣಗಳುದಾಖಲಾಗಿರುವ ಬಗ್ಗೆ ಶಾಸಕರು ಗಮನಕ್ಕೆತಂದಿದ್ದಾರೆ. ಸ್ವಂತ ಬಳಕೆಗಾಗಿ ಸಣ್ಣ ಪ್ರಮಾಣದಲ್ಲಿ ಮರಳು ಸಾಗಿಸುವವರ ವಿರುದ್ಧ ಕ್ರಮವಹಿಸದಂತೆ ತಿಳಿಸಲಾಗಿದೆ ಎಂದರು.
ತಾಲೂಕಿನ ಮಲ್ಲಯ್ಯನಪುರದ ಬಳಿಸ್ವಾಭಾವಿಕ ಭೂವಿಜ್ಞಾನ ಸಂಗ್ರಹಾಲಯಸ್ಥಾಪನೆಗೆ ಯೋಗ್ಯವಾಗಿದ್ದು, ಈ ಸಂಬಂಧಶಾಸಕರು, ಜಿಲ್ಲಾಧಿಕಾರಿ ಹಾಗೂ ಇಲಾಖೆಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ.ಮುಂದಿನ ಪೀಳಿಗೆಗೆ ಇಲ್ಲಿನ ಗ್ರಾನೈಟ್ ಹಾಗೂಶಿಲೆಗಳ ವಿಶೇಷತೆಯ ಅಧ್ಯಯನ ಹಾಗೂಮಾಹಿತಿ ನೀಡುವ ಉದ್ದೇಶಕ್ಕಾಗಿ ಸ್ವಾಭಾವಿಕಭೂವಿಜ್ಞಾನ ಸಂಗ್ರಹಾಲಯ ಸ್ಥಾಪಿಸಲುಮುಂದಾಗಿದ್ದು, ಈ ಸಂಭಂಧ ಮೌಖೀಕವಾಗಿಒಪ್ಪಿಗೆ ನೀಡಲಾಗಿದೆ.
ಈ ಕುರಿತು ವಿವರ ಕಳುಹಿಸಿಕೊಡಲು ಸೂಚಿಸಲಾಗಿದೆ ಎಂದರು.ಕೋವಿಡ್ ಚಿಕಿತ್ಸೆಗಾಗಿ ನಮ್ಮ ಇಲಾಖೆಯಿಂದ ಪ್ರತಿ ವಿಭಾಗದಲ್ಲಿ 2 ಆಕ್ಸಿಜನ್‌ಟ್ಯಾಂಕರ್, 1 ಸಾವಿರ ಆಕ್ಸಿಜನ್ ಸಿಲಿಂಡರ್‌ತುಂಬುವ 2 ಆಕ್ಸಿಜನ್ ಜನರೇಟರ್ ಮತ್ತುಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಒದಗಿಸಲಾಗುವುದು.
ಪ್ರತಿ ಜಿಲ್ಲೆಗೂ ಒಂದೊಂದು ಮೊಬೈಲ್‌ಆಕ್ಸಿಜನ್ ಜನರೇಟರ್ ನೀಡುವ ಚಿಂತನೆ ಇದೆ.ಜಿಲ್ಲಾ ಖನಿಜ ಪ್ರತಿಷ್ಠಾನದಲ್ಲಿ 14ಕೋಟಿ ರೂ.ಲಭ್ಯವಿದ್ದು, ಈ ಪೈಕಿ 5 ಕೋಟಿ ರೂ. ನೆರವುಕಾರ್ಯಗಳಿಗೆ ಬಳಸಲು ಅನುಮತಿಸಲಾಗಿದೆ ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಿ.ಎಸ್. ನಿರಂಜನಕುಮಾರ್,ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹಾಂತೇಶ್, ಬೆಂಗಳೂರುಕೇಂದ್ರಕಚೇರಿಯ ಖನಿಜ ಆಡಳಿತಉಪನಿರ್ದೇಶಕಿ ಡಾ. ಲಕ್ಷ ¾ಮ್ಮ, ಗಣಿ ಮತ್ತುಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕನಾಗಭೂಷಣ್ ಸಭೆಯಲ್ಲಿ ಹಾಜರಿದ್ದರು.ಸಭೆಯ ಬಳಿಕ ಸಚಿವರು ಮಲ್ಲಯ್ಯನಪುರದ ಬಳಿ ಸ್ವಾಭಾವಿಕ ಭೂವಿಜ್ಞಾನಸಂಗ್ರಹಾಲಯ ಸ್ಥಾಪಿಸಲು ಉದ್ದೇಶಿಸಿರುವಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.