ಸೋಂಕು ಸರಪಳಿ ಕಡಿಯಲು ಜನರ ಸಹಕಾರ ಅತ್ಯಂತ ಅವಶ್ಯ
Team Udayavani, May 24, 2021, 7:10 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರಬೇಕಿದೆ. ಕಳೆದ ಎರಡು ತಿಂಗಳಿಗೆ ಹೋಲಿಸಿ ದರೆ ಪಾಸಿಟಿವಿಟಿ ಪ್ರಮಾಣ ಏರು ತ್ತಿರುವುದು ಕೊಂಚ ಆತಂಕ ಸೃಷ್ಟಿಸಿದೆ. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕಾಗಿ ಸರ್ವ ಪ್ರಯತ್ನ ನಡೆಸುತ್ತಿದೆ. ಜನ ಪ್ರತಿನಿಧಿಗಳು ಕೂಡ ಸಾಥ್ ನೀಡುತ್ತಿದ್ದಾರೆ. ಈ ಕೊರೊನಾ ಸೋಲಿಸುವ ಅಭಿಯಾನದಲ್ಲಿ ನಾಗ ರಿಕರೂ ಜತೆಗೂಡಬೇಕಿದೆ.
ಜನರೂ ಸಹಕರಿಸಿದರೆ ಸೋಂಕು ನಿಯಂತ್ರಣ ಕಷ್ಟದ ಕೆಲಸವಲ್ಲ. ಸ್ಥಳೀಯ ಸಂಸ್ಥೆಗಳಿಂದ ಆರಂಭಿಸಿ ಶೈಕ್ಷಣಿಕ ಸಂಸ್ಥೆಗಳವರೆಗೂ ಸಹಕಾರ ಸಂಘಗಳಿಂದ ಹಿಡಿದು ಸಮುದಾಯ ಸಂಘಟನೆಗಳ ವರೆಗೆ ಎಲ್ಲರೂ ಈ ಅಭಿಯಾನದಲ್ಲಿ
ಪಾಲ್ಗೊಳ್ಳಬೇಕಿದೆ.
ಇವಿಷ್ಟು ನಾವು ಮಾಡೋಣ
– ಸೋಂಕಿನ ಲಕ್ಷಣ ಕಂಡುಬಂದ ದಿನವೇ ಪರೀಕ್ಷೆಗೆ ಒಳಪಟ್ಟು ಐಸೊಲೇಶನ್‌ಗೆ ಒಳಗಾಗಬೇಕು. ಮನೆ ಐಸೊಲೇಶನ್ ಕಷ್ಟವೆಂದಿದ್ದರೆ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಪ್ರಾಥಮಿಕ ಸಂಪರ್ಕಿತರನ್ನು ತಪಾಸಣೆಗೆ ಒಳಪಡಲು ಸೂಚಿಸಬೇಕು.
– ಆರು ಅಡಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವುದು ಸದ್ಯದ ನಿಯಮ. ಆದರೆ ಈಗಾಗಲೇ ವೈರಾಣುವಿನ ನಾಲ್ಕು ರೂಪಾಂತರಿಗಳಿದ್ದು, ಇವುಗಳ ಅಧ್ಯಯನ ಪೂರ್ಣಗೊಂಡಿಲ್ಲ. ಹಾಗಾಗಿ ಇನ್ನೂ ದೂರ ಕಾಪಾಡಿಕೊಂಡರೆ ಒಳ್ಳೆಯದು.
– ಸಾರ್ವಜನಿಕ ಸ್ಥಳಗಳಿಗೆ ಹೋಗಿ ಬಂದ ಕೂಡಲೇ ಸ್ನಾನ ಮಾಡುವುದು, ಕೈ ತೊಳೆದುಕೊಳ್ಳುವುದು, ಬಟ್ಟೆಗಳನ್ನು ತೊಳೆದುಕೊಂಡ ಅನಂತರವೇ ಉಳಿದ ಚಟುವಟಿಕೆಗಳನ್ನು ಮಾಡೋಣ. ಇದರಿಂದ ಸೋಂಕು ಪ್ರಸರಣ ನಿಲ್ಲುತ್ತದೆ.
– ಲಾಕ್‌ಡೌನ್ ಎಂದರೆ ಸೋಂಕು ಸರಪಳಿ ಕಡಿಯಲು ಅನುಸರಿಸುವ ತಂತ್ರ. ಹಾಗಾಗಿ ನಗರದ ಬಡಾವಣೆಗಳಲ್ಲಿ, ಹಳ್ಳಿಗಳಲ್ಲಿ ಗುಂಪು ಗುಂಪಾಗಿ ಇರುವುದು, ಆಟವಾಡುವುದು ಸಲ್ಲದು. ಒಟ್ಟು ಸೇರಿ ಸಂಭ್ರಮಾಚರಣೆ ಮಾಡದಿರೋಣ.
– ಮೊದಲು ಮೆಡಿಕಲ್ ಶಾಪ್‌ಗ್ಳಿಂದ ಔಷಧ ತರಿಸಿ ಕೊನೇ ಹಂತ ದಲ್ಲಿ ಆಸ್ಪತ್ರೆಗೆ ಧಾವಿಸುವುದರಿಂದ ಪರಿಸ್ಥಿತಿ ಉಲ್ಬಣಿಸುತ್ತದೆ. ಇಷ್ಟರಲ್ಲಿ ಕನಿಷ್ಠ 40 ಜನರಿಗೆ ಸೋಂಕು ಪ್ರಸಾರವಾಗಿರುತ್ತದೆ. ಲಕ್ಷಣ ಗೊತ್ತಾದ ಕೂಡಲೇ ಪರೀಕ್ಷೆಗೆ ಮುಂದಾಗೋಣ.
**
ಇವುಗಳನ್ನು ಜಿಲ್ಲಾಡಳಿತ ಮಾಡಬೇಕು
1. ಪರೀಕ್ಷೆ ಹೆಚ್ಚಿಸಿದರೆ ಮಾತ್ರ ಸೋಂಕಿನ ಸರಪಣಿ ಕಡಿಯಲು ಸಾಧ್ಯ. ಅದಕ್ಕೆ ಹೆಚ್ಚು ಒತ್ತು ನೀಡಬೇಕು.
2. ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು. ನಿರ್ದೇಶಿತ ವಯಸ್ಸಿನವರಿಗೆ ಲಸಿಕೆಯನ್ನು ಆದ್ಯತೆಯಿಂದ ಒದಗಿಸಬೇಕು. ಪರಿಸ್ಥಿತಿಯನ್ನು ರಾಜ್ಯ, ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಿ ಹೆಚ್ಚು ಲಸಿಕೆ ತರಿಸಿಕೊಳ್ಳಬೇಕು.
3. ಮತ್ತಷ್ಟು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದು.
4. ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇರಿಸುವುದು.
5. ಗ್ರಾ.ಪಂ. ಮಟ್ಟದಲ್ಲೇ ಕೊರೊನಾ ನಿಯಂತ್ರಣಕ್ಕೆ ಪ್ರತ್ಯೇಕ ತಂಡ, ಕಾರ್ಯಪಡೆ ಸಬಲಗೊಳಿಸುವುದು. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆಯುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.