ಕಪ್ಪು, ಬಿಳಿ ಆಯ್ತು..ಈಗ ಹಳದಿ ಫಂಗಸ್, ಇದೆಷ್ಟು ಮಾರಕ ಗೊತ್ತಾ? ದೆಹಲಿಯಲ್ಲಿ ಮೊದಲ ಪ್ರಕರಣ
ಅತೀಯಾದ ತೇವಾಂಶ ಕೂಡಾ ಈ ಬ್ಯಾಕ್ಟೀರಿಯಾ ಹರಡಲು ಕಾರಣವಾಗಬಹುದು.
Team Udayavani, May 24, 2021, 3:07 PM IST
ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಭೀತಿಯ ನಡುವೆಯೇ ಕಪ್ಪು ಮತ್ತು ಬಿಳಿ ಫಂಗಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆಯೇ ಗಾಜಿಯಾಬಾದ್ ನಲ್ಲಿ ಈಗ ಹಳದಿ ಫಂಗಸ್ ನ ಮೊದಲ ಪ್ರಕರಣ ಸೋಮವಾರ (ಮೇ 24) ವರದಿಯಾಗಿದೆ.
ಇದನ್ನೂ ಓದಿ:ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ: ಗೋಣಿಬೀಡು ಠಾಣೆಗೆ ಐಜಿಪಿ ಭೇಟಿ
ರಾಷ್ಟ್ರರಾಜಧಾನಿ ಎನ್ ಸಿಆರ್ ಪ್ರದೇಶವಾದ ಗಾಜಿಯಾಬಾದ್ ನಲ್ಲಿ ಕಪ್ಪು ಮತ್ತು ಬಿಳಿ ಫಂಗಸ್ ನಂತರ ಹಳದಿ ಫಂಗಸ್ ನ ಮೊದಲ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.ಈ ರೋಗಿಗೆ ಪ್ರಸ್ತುತ ಇಎನ್ ಟಿ ಶಸ್ತ್ರಚಿಕಿತ್ಸಕ ಡಾ.ಬ್ರಿಜ್ ಪಾಲ್ ತ್ಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಹಳದಿ ಫಂಗಸ್?
ಕಪ್ಪು, ಬಿಳಿ ಶೀಲಿಂಧ್ರದಂತೆ ಹಳದಿ ಶಿಲೀಂಧ್ರದ ಸೋಂಕು ಪೀಡಿತರಲ್ಲಿ ಆಲಸ್ಯ, ತೂಕ ಇಳಿಕೆ, ಕಡಿಮೆ ಹಸಿವಿನ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಹಳದಿ ಫಂಗಸ್ ಹೆಚ್ಚು ತೀವ್ರವಾದ ನಂತರ ಕೀವು ಸೋರಿಕೆಯಾಗಬಹುದು ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ ಇದು ಗಾಯಗಳ ಗುಣಪಡಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ. ಕಣ್ಣು, ಕಿವಿ ಮತ್ತು ಅಂಗಾಂಗಳ ವೈಫಲ್ಯಕ್ಕೆ ಕಾರಣವಾಗುವ ಮೂಲಕ ಕೊನೆಗೆ ಸಾವಿಗೆ ಕಾರಣವಾಗಬಹುದು ಎಂದು ತಿಳಿಸಿದೆ.
ಹಳದಿ ಶಿಲೀಂಧ್ರವು ಮಾರಣಾಂತಿಕ ಕಾಯಿಲೆಯಾಗಿದೆ. ಯಾಕೆಂದರೆ ಇದು ಆಂತರಿಕವಾಗಿ ಪ್ರಾರಂಭವಾಗಿ ನಂತರ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗೆ ಈ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವರದಿ ವಿವರಿಸಿದೆ.
ಕೊಳಚೆ ನೈರ್ಮಲ್ಯವು ಹೆಚ್ಚಾಗಿ ಹಳದಿ ಶಿಲೀಂಧ್ರ ಸೋಂಕನ್ನು ಉಂಟುಮಾಡುತ್ತದೆ. ಅಲ್ಲದೇ ಹಾಳಾದ ಆಹಾರ ಮತ್ತು ಮಲದ ಮೂಲಕ ಈ ಸೋಂಕು ಹರಡುತ್ತದೆ. ಅಲ್ಲದೇ ಅತೀಯಾದ ತೇವಾಂಶ ಕೂಡಾ ಈ ಬ್ಯಾಕ್ಟೀರಿಯಾ ಹರಡಲು ಕಾರಣವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.