ಶುದ್ಧ ಕುಡಿಯುವ ನೀರಿನ ಘಟಕ ಬಂದ್‌- ಆಕ್ರೋಶ


Team Udayavani, May 24, 2021, 9:24 PM IST

24-18

ಕಡೂರು: ಸೋಮವಾರದಿಂದ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ದಿನಸಿ ಪದಾರ್ಥ ಹಾಗೂ ತರಕಾರಿಯನ್ನು ಹೋಂ ಡೆಲಿವರಿ ಮೂಲಕ ಪೂರೈಸುವ ಬಗ್ಗೆ ಅಧಿ ಕಾರಿಗಳು ಸೂಚಿಸಿರುವುದು ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆಗೆ ಗ್ರಾಸವಾಗಿದೆ.

ಭಾನುವಾರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿದಿನಸಿ, ತರಕಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರನ್ನೊಳಗೊಂಡ ಸಭೆಯನ್ನು ತಹಶೀಲ್ದಾರ್‌, ವೃತ್ತ ನಿರೀಕ್ಷಕರು, ಠಾಣಾಧಿ ಕಾರಿ ಅವರ ಸಮ್ಮುಖದಲ್ಲಿ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಯಿತು ಎಂಬ ಅಂಶ ಬೆಳಕಿಗೆ ಬಂದಿದೆ.

ಸಭೆಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ದಿನಸಿ ಪದಾರ್ಥ, ತರಕಾರಿ ಮತ್ತು ಶುದ್ಧ ಕುಡಿಯುವ ನೀರನ್ನು ದೂರವಾಣಿ ಮೂಲಕ ಬೇಡಿಕೆ ಸಲ್ಲಿಸಿದ ಜನರ ಮನೆಗಳಿಗೆ ಸಂಬಂಧಪಟ್ಟ ಮಾಲೀಕರು ತಲುಪಿಸುವಂತೆ ಅ ಧಿಕಾರಿಗಳು ಸೂಚಿಸಿದ್ದು ಇದು ಎಷ್ಟರ ಮಟ್ಟಿಗೆ ಕಾರ್ಯಸಾಧುವಾಗುತ್ತದೆ ಎಂಬ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿಯೇ ಗೊಂದಲ ಮೂಡಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಪಟ್ಟಣದಲ್ಲಿ ಅಂದಾಜು 14 ಘಟಕಗಳಿದ್ದು 200 ರಿಂದ 500 ಕ್ಯಾನ್‌ ವರೆಗೆ ಒಂದೊಂದು ಘಟಕವು ನೀರನ್ನು ಪ್ರತಿದಿನ ಒದಗಿಸುತ್ತಿದೆ.

ಸರಾಸರಿ ಸುಮಾರು 4 ಸಾವಿರ ಕ್ಯಾನ್‌ ಗಳ ಶುದ್ಧ ನೀರು ಮಾರಾಟವಾಗುತ್ತಿದೆ. ಈ ವ್ಯವಸ್ಥೆಗೆ ಸೋಮವಾರದಿಂದ ಬಹುದೊಡ್ಡ ಪೆಟ್ಟು ಬೀಳಲಿದೆ. ಪಟ್ಟಣದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಜನಜಂಗುಳಿ ಇರುವುದಿಲ್ಲ. ನೀರನ್ನು ಪಡೆಯುವ ಗ್ರಾಹಕರು ಬೆಳಗ್ಗೆ 6 ರಿಂದ ಸಂಜೆಯವರೆಗೆ ಯಾವುದಾದರೂ ಸಮಯದಲ್ಲಿ ನೀರು ಪಡೆದು ಹೋಗುತ್ತಿರುತ್ತಾರೆ.

ಒಟ್ಟಾರೆ ಯಾವ ಘಟಕದಲ್ಲಿಯೂ ನೀರಿಗಾಗಿ ಕ್ಯೂ ನಿಂತು ಪಡೆಯುವ ನಿದರ್ಶನಗಳಿಲ್ಲ. ಹೀಗಿದ್ದಾಗ ಕೊರೊನಾ ಹೇಗೆ ಹರಡುತ್ತದೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಖ್ಯವಾದ ಅಂಶವೆಂದರೆ ಪಟ್ಟಣದ ಕೊಳವೆ ಬಾವಿಗಳು ಮತ್ತು ಪುರಸಭೆ ಪೂರೈಕೆ ಮಾಡುವ ನೀರಿನಲ್ಲಿ 1200 ರಿಂದ 1800 ವರೆವಿಗೆ ಟಿಡಿಎಸ್‌ ಇದ್ದು ಈ ನೀರನ್ನು ಸೇವಿಸುವುದರಿಂದ ಕೈಕಾಲುಗಳ ಕೀಲು ನೋವು, ನರನಾಡಿಗಳ ತೊಂದರೆ, ಕೆಮ್ಮು ನೆಗಡಿ, ಅತಿಸಾರದಂತಹ ಕಾಯಿಲೆಗಳು ಬಾಧಿಸುತ್ತವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರುವುದರಿಂದ ಎಲ್ಲಾ ಕಾಯಿಲೆಗಳು ಹತೋಟಿಯಲ್ಲಿವೆ ಎಂಬುದು ನಿಸ್ಸಂಶಯ. ಅಧಿ ಕಾರಿಗಳ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದಂತೆ 2 ರಿಂದ 5 ರೂ.ಗಳಿಗೆ ಸಿಗುತ್ತಿದ್ದ ಕ್ಯಾನ್‌ ನೀರು 15 ರಿಂದ 30 ರೂ. ಗಳಿಗೆ ಮುಟ್ಟಿದರೂ ಆಶ್ಚರ್ಯವಿಲ್ಲ.

ಕೂಲಿ- ನಾಲಿ ಮಾಡುವ ಜನರಂತೂ ಇದರಿಂದ ಹೈರಾಣಾಗುತ್ತಾರೆ. ದಿನಸಿ ಪದಾರ್ಥ ಮತ್ತು ತರಕಾರಿಗೂ ಇದೇ ಸೂತ್ರ ಅಳವಡಿಕೆಯಾಗಿದ್ದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವವರಿಗೆ ಅನುಕೂಲವಾಗುತ್ತದೆ. ಆದರೆ ಸಣ್ಣ ಪ್ರಮಾಣದಲ್ಲಿ 100 ರಿಂದ 200 ರೂ. ಒಳಗೆ ವ್ಯಾಪಾರ ಮಾಡುವ ಜನರ ಮನೆ ಬಾಗಿಲಿಗೆ ಈ ಪದಾರ್ಥಗಳನ್ನು ತಲುಪಿಸುವಲ್ಲಿ ಅಂಗಡಿ ಮಾಲೀಕರೇ ಹಿಂದೇಟು ಹಾಕುತ್ತಾರೆ. ಹೋಂ ಡೆಲಿವರಿ ಪದ್ಧತಿ ಕಡೂರು ಪಟ್ಟಣಕ್ಕೆ ಸೂಕ್ತವಾಗಿಲ್ಲ.

40 ಸಾವಿರ ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಶೇ 80 ಭಾಗ ಬಡವರು ಮತ್ತು ಮದ್ಯಮ ವರ್ಗದವರೇ ಇದ್ದಾರೆ. ಅಂದಿನ ಅಡಿಗೆ ಪದಾರ್ಥಗಳನ್ನು ಅಂದೇ ಕೊಳ್ಳುವ ಸ್ಥಿತಿಯಲ್ಲಿರುವವರೆ ಹೆಚ್ಚು. ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಕಡೂರು ಪಟ್ಟಣವು ಸೇರಿದಂತೆ ತಾಲೂಕಿನಲ್ಲಿಯೇ ಒಟ್ಟಾರೆ ಪ್ರಕರಣಗಳು ಎರಡಂಕಿ ದಾಟಿರಲಿಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮೂರಂಕಿಗೆ ಮುಟ್ಟಿದೆ. ಪ್ರತಿದಿನ ಪಾಸಿಟಿವ್‌ ಪ್ರಕರಣಗಳ ಪಟ್ಟಿಯನ್ನು ಅವಲೋಕಿಸಿದರೆ ಪಟ್ಟಣದಲ್ಲಿ 19 ಪ್ರಕರಣಗಳಿಗಿಂತ ಹೆಚ್ಚು ದಾಟಿಲ್ಲ. ಗ್ರಾಮಾಂತರ ಭಾಗದಲ್ಲಿಯೇ ಪ್ರಕರಣಗಳು ಹೆಚ್ಚಾಗಿವೆ.

ಟಾಪ್ ನ್ಯೂಸ್

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.