‘ಒಪ್ಪೋ ರೆನೋ 5ಎ ಜಪಾನ್ ನಲ್ಲಿ ಬಿಡುಗಡೆ..! ಭಾರತದಲ್ಲಿ ಯಾವಾಗ..?
Team Udayavani, May 25, 2021, 3:11 PM IST
ನವ ದೆಹಲಿ : ಒಪ್ಪೋ ಹೊಸ ಸ್ಮಾರ್ಟ್ ಫೋನ್ ‘ಒಪ್ಪೋ ರೆನೋ 5 ಎ ನನ್ನು ಜಪಾನ್ ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ವಾಟರ್ ಪ್ರೂಫ್ ಆಗಿದ್ದು, ಐಪಿ 68 ರೇಟಿಂಗ್ ಹೊಂದಿದ್ದು ಅತ್ಯಾಕರ್ಷಕವಾಗಿದೆ.
ಒಪ್ಪೋ ಈ ಸ್ಮಾರ್ಟ್ ಫೋನ್ ನನ್ನು ಸದ್ಯಕ್ಕೆ ಜಪಾನ್ ನಲ್ಲಿ ಬಿಡುಗಡೆ ಮಾಡಿದ್ದು, ಸದ್ಯಕ್ಕೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : ಪಡುಅಲೆವೂರಿಗೆ ಲಸಿಕೆ ಕೇಂದ್ರ ಶಿಫ್ಟ್ : ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಕಾರಣದಿಂದಾಗಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದೆಂಬ ದೃಷ್ಟಿಯಿಂದ ಮೂರರಿಂದ ಆರು ತಿಂಗಳುಗಳ ಬಳಿಕ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ.
ಒಪ್ಪೋ ಜಪಾನ್ ನಲ್ಲಿ ಬಿಡಗಡೆ ಮಾಡಿರುವ ಈ ಸ್ಮಾರ್ಟ್ ಫೋನ್ ನಾಲ್ಕು ಹಿಂದಿನ ಕ್ಯಾಮೆರಾಗಳನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹೊಂದಿ ನೋಡಲು ಅತ್ಯಾಕರ್ಷಕವಾಗಿದೆ.
ಒಪ್ಪೋ ರೆನೋ 5 ಎ ಬೆಲೆ ಮತ್ತು ಲಭ್ಯತೆ :
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765 ಜಿ ಪ್ರೊಸೆಸರ್ನಲ್ಲಿ ಒಪ್ಪೊ ರೆನೋ 5 ಎ ನನ್ನು ಪರಿಚಯಿಸಲಾಗಿದ್ದು, 128 ಜಿಬಿ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಹಾಗೂ ಭಾರತದಲ್ಲಿ ಬಿಡುಗಡೆಯಾದರೇ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎನ್ನುವ ಸುಳಿವನ್ನೂ ಕೂಡ ಬಿಟ್ಟುಕೊಡಲಿಲ್ಲ. ಒಪ್ಪೋ ರೆನೋ 5 ಎ ನ ಮಾರಾಟ ಮುಂದಿನ ತಿಂಗಳು ಅಂದರೇ, ಜೂನ್ ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಸ್ಮಾರ್ಟ್ ಫೋನ್ ನನ್ನು ಐಸ್ ಬ್ಲೂ ಮತ್ತು ಸಿಲ್ವರ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಒಪ್ಪೋ ತನ್ನ ಗ್ರಾಹಕರಿಗೆ ನೀಡುಯತ್ತಿದೆ. ಒಪ್ಪೋ ರೆನೋ 5 ಎ ಕಳೆದ ವರ್ಷ ಬಿಡುಗಡೆಯಾದ ಒಪ್ಪೋ ರೆನೋ 3 ಎ ಯ ಯಶಸ್ವಿ ರೂಪಾಂತರವಾಗಿದ್ದು, ಇದರ ಬೆಲೆ ಜೆಪಿವೈ 39,800 ಅಂದರೆ ಸುಮಾರು 26,600 ರೂಪಾಯಿಗಳು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಒಪ್ಪೋ ರೆನೋ 5 ಎ ಯ ವಿಶೇಷತೆಗಳೇನು..?
ಒಪ್ಪೋ ರೆನೋ 5 ಎ ಆಂಡ್ರಾಯ್ಡ್ 11 ಆಧಾರಿತ ColorOS 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.5-ಇಂಚಿನ ಫುಲ್ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, 1,080 × 2,400 ಪಿಕ್ಸೆಲ್ ಗಳ ಸ್ಕ್ರೀನ್ ರೆಸಲ್ಯೂಶನ್ ಮತ್ತು 20: 9 ಆಕಾರ ಅನುಪಾತವನ್ನು ಹೊಂದಿದೆ.
ಪವರ್ ಬ್ಯಾಕಪ್ ಗಾಗಿ ಫೋನ್ 4,000mAh ಬ್ಯಾಟರಿಯನ್ನು ಹೊಂದಿದೆ, ಇದು 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗುತ್ತದೆ.
ಈ ಫೋನಿನ ಕ್ಯಾಮರಾ ಬಗ್ಗೆ ಹೇಳುವುದಾದರೆ, ಒಪ್ಪೊ ರೆನೋ 5 ಎ (Oppo Reno 5A) ನಲ್ಲಿ ಛಾಯಾಗ್ರಹಣಕ್ಕಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ.
ಇದನ್ನೂ ಓದಿ : 2ನೇ ಡೋಸ್ ಗೆ ಮುಂದುವರಿದ ಅಲೆದಾಟ; ವಾರದ ನಂತರವೂ ಎಲ್ಲರಿಗೂ ಸಿಗುವುದು ಅನುಮಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.