ನಿಯಮ ಉಲ್ಲಂಘಿಸಿ ಮದುವೆ:ಅಧಿಕಾರಿಗಳನ್ನು ಕಂಡು ವೇದಿಕೆಯಲ್ಲೇ ವಧುವನ್ನು ಬಿಟ್ಟು ವರ ಎಸ್ಕೇಪ್!
Team Udayavani, May 25, 2021, 4:39 PM IST
ಚಿಕ್ಕಮಗಳೂರು: ಕೋವಿಡ್ ಕಾರಣದಿಂದ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಕಡಿಮೆ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಬೇಕಿದೆ. ನಿಯಮ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ ನಡೆಸಿದವರ ವಿರುದ್ಧ ಪ್ರಕರಣಗಳು ದಾಖಲಾದ ಉದಾಹರಣೆಯೂ ಇದೆ. ಆದರೆ ಇಲ್ಲೊಬ್ಬ ವರ ಮಹಾಶಯ ಮದುವೆ ಮಂಟಪಕ್ಕೆ ಬಂದ ಅಧಿಕಾರಿಗಳನ್ನು ಕಂಡು, ವಧುವನ್ನು ವೇದಿಕೆಯಲ್ಲೇ ಬಿಟ್ಟು ಕಾಲ್ಕಿತ್ತಿದ್ದಾನೆ!
ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ. ಮದುವೆ ಕಾರ್ಯಕ್ರಮಕ್ಕೆ ಮನೆಯವರು ಸ್ಥಳೀಯವಾಗಿ ಪರವಾನಗಿ ಪಡೆದಿದ್ದರು. ಕೇವಲ ಹತ್ತು ಜನರನ್ನು ಮಾತ್ರ ಸೇರಿಸಲು ಅನುಮತಿ ಸಿಕ್ಕಿತ್ತು. ಆದರೆ ಮದುವೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು.
ಇದನ್ನೂ ಓದಿ:ಹತ್ತು ವರ್ಷವಾದರೂ ಬಾಕಿ ಹಣ ಕೊಟ್ಟಿಲ್ಲ ಕೊಚ್ಚಿ ಟಸ್ಕರ್ಸ್ ತಂಡ: ಬ್ರಾಡ್ ಹಾಗ್ ಆರೋಪ
ಈ ವಿಚಾರ ತಿಳಿದು ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಮದುವೆಗೆ ಬಂದ ಅಧಿಕಾರಿಗಳನ್ನು ಕಂಡು ವಧುವನ್ನು ವೇದಿಕೆಯಲ್ಲೇ ಬಿಟ್ಟು ವರ ಓಡಿ ಹೋಗಿದ್ದಾನೆ.
ಇತ್ತ ಅಧಿಕಾರಿಗಳನ್ನು ಕಂಡ ಜನರು ಕಾಲ್ಕಿತ್ತಿದ್ದಾರೆ. ಊಟಕ್ಕೆ ಕುಳಿತಿದ್ದರು ಕೂಡಾ ಭರ್ಜರಿ ಭೋಜನವನ್ನೂ ಬಿಟ್ಟು ಕಾಲಿಗೆ ಬುದ್ದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.