ಟಾಟಾ ಸ್ಟೀಲ್ : ಕೋವಿಡ್ ಗೆ ಮೃತಪಟ್ಟ ನೌಕರನ ಕುಟುಂಬಕ್ಕೆ 60 ವರ್ಷದ ತನಕ ಸಂಬಳ !
Team Udayavani, May 25, 2021, 4:33 PM IST
ನವ ದೆಹಲಿ : ಕೋವಿಡ್ ಸೋಂಕಿನಿಂದ ಮೃತಪಟ್ಟ ತನ್ನ ನೌಕರರ ಕುಟುಂಬಕ್ಕೆ ಅವರು ದುಡಿಯುತ್ತಿದ್ದ ಸಂಬಳವನ್ನು 60 ವರ್ಷದ ತನಕ ನೀಡುವುದಾಗಿ ಟಾಟಾ ಸ್ಟೀಲ್ ಕಂಪೆನಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಭಾರಿ ಆತಂಕವನ್ನು ಸೃಷ್ಟಿ ಮಾಡಿದ್ದು, ಲಕ್ಷಾಂತರ ಮಂದಿ ಸೋಂಕಿತಾಗುತ್ತಿರುವುದು ಮಾತ್ರವಲ್ಲದೇ, ನಿತ್ಯ ದೇಶದಾದ್ಯಂತ ನಾಲ್ಕು ಸಾವಿರದ ಆಸು ಪಾಸಿನಲ್ಲಿ ಕೋವಿಡ್ ಸೋಂಕಿನಿಂದ ಮೃತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷತೆಗಾಗಿ ಈ ನಿರ್ಧಾರವನ್ನು ಕೈಗೊಂಡಿದೆ.
ಇದನ್ನೂ ಓದಿ : ಸಮಾಜಸೇವೆ ಹೆಸರಿನಲ್ಲಿ ಸ್ವಜಾತಿ ಮೆರೆಯುವುದು ಸರಿಯಲ್ಲ : ಉಪ್ಪಿ ವಿರುದ್ದ ನಟ ಚೇತನ್ ಟೀಕೆ
ಕೋವಿಡ್ ಸೋಂಕಿನಿಂದ ಮೃತಪಟ್ಟ ಕಂಪೆನಿಯ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ಆತನ ಸಂಬಳವನ್ನು ಆತನ ಕುಟುಂಬಕ್ಕೆ ಸುರಕ್ಷತೆಯ ದೃಷ್ಟಿಯಿಂದ ನೀಡುವ ಉದ್ದೇಶದಿಂದ ಸಂಸ್ಥೆ ಸುತ್ತೋಲೆ ಹೊರಡಿಸಿದೆ.
ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ್ದು, ಕೋವಿಡ್ ಸೋಂಕಿನಿಂದ ತನ್ನ ನೌಕರ ಮೃತಪಟ್ಟರೆ ಆ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಮಾತ್ರವಲ್ಲದೇ, ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯಗಳು, ಹೌಸಿಂಗ್ ಫೆಸಿಲಿಟಿ ಮತ್ತು ನೌಕರರ ಮಕ್ಕಳ ಪದವಿ ಕಲಿಕೆಯ ತನಕದ ವೆಚ್ಚವನ್ನೂ ಕಂಪನಿ ಭರಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಕೋವಿಡ್ ಹೆಚ್ಚಳ ಹಿನ್ನೆಲೆ : ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಿದ್ದಾಪುರಕ್ಕೆ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.