ಸಿದ್ಧಾರ್ಥ ಮೆಡಿಕಲ್ ಕಾಲೇಜಲ್ಲಿ ಸುಸಜ್ಜಿತ ಮಕ್ಕಳ ತೀವ್ರ ನಿಗಾ ಘಟಕ
Team Udayavani, May 25, 2021, 10:44 PM IST
ತುಮಕೂರು: 18 ವರ್ಷದೊಳಗಿನವರಿಗೆ ಲಸಿಕೆಇನ್ನೂ ಪ್ರಯೋಗ ಹಂತದಲ್ಲಿರುವುದರಿಂದ ಮತ್ತುಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವ ಮಕ್ಕಳ ಮೇಲೆಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ತಜ್ಞರವರದಿಯನ್ನು ಗಂಭೀರವಾಗಿ ಪರಿಗಣಿಸಿ ನಗರದಶ್ರೀ ಸಿದ್ಧಾರ್ಥ ವೈದ್ಯಕೀಯಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಧುನಿಕ ಉನ್ನತ ಗುಣಮಟ್ಟದ ವೈದ್ಯಕೀಯಸೌಲಭ್ಯ ಮತ್ತು ವೆಂಟಿಲೇಟರ್ ಒಳಗೊಂಡ ಸುಸಜ್ಜಿತ ಮಕ್ಕಳ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತೀವ್ರ ಜಾಗ್ರತೆ:ಈ ಸಂಬಂಧ ಸೋಮವಾರ ತಜ್ಞವೈದ್ಯರ ಜೊತೆ ನಿಗಾ ಘಟಕದಲ್ಲಿನ ವ್ಯವಸ್ಥೆ ಪರಿಶೀಲಿಸಿ ನಂತರ ವೈದ್ಯರ ಸಭೆ ನಡೆಸಿ ಮಾತನಾಡಿದಅವರು, ಮಕ್ಕಳಿಗೆಕೋವಿಡ್-19ರ3ನೇ ಸೋಂಕುತಗುಲಬಹುದಾದರೂ, ಅವರು ತೀವ್ರವಾದ ರೋಗಲಕ್ಷಣ ಹೊಂದುವ ಸಾಧ್ಯತೆ ಕಡಿಮೆ ಇರುತ್ತದೆ.
ಆದರೆ, ಹೃದಯ ತೊಂದರೆ, ಉಸಿರಾಟದ ಸಮಸ್ಯೆಇರುವ ಮಕ್ಕಳಲ್ಲಿ ಗಂಭೀರ ಸ್ವರೂಪದ ಸಮಸ್ಯೆಮತ್ತು ತೊಂದರೆಗಳಾಗಬಹುದು. ಆ ವರ್ಗದಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ಎಂದು ಪೋಷಕರಲ್ಲಿವೈದ್ಯರು ಈಗಾಗಲೇ ಎಚ್ಚರಿಸಿರುವ ಹಿನ್ನೆಲೆ ತಮ್ಮಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.ವಿಶೇಷ ಘಟಕದಲ್ಲಿ ಅಳವಡಿಸಲಾಗಿರುವಸೌಲಭ್ಯ ಮತ್ತು ಮುಂದಿನ ಸಿದ್ಧತೆ ಪರಿಶೀಲಿಸಿದಡಾ. ಪರಮೇಶ್ವರ್ ಅವರು, ಮಕ್ಕಳ ವಿಶೇಷಘಟಕದಲ್ಲಿ ಆರಂಭಿಕ ಹಂತದಲ್ಲಿ 30 ಆಕ್ಸಿಜನ್ ಬೆಡ್‌ಕಲ್ಪಿಸಲಾಗಿದೆ. ಇಲ್ಲಿ ಪಿಐಸಿಯು ಮತ್ತು ಐಸಿಯುತೀವ್ರ ನಿಗಾ ಘಟಕ ಮಾಡಿದ್ದು, ಕೊರೊನಾಸೋಂಕಿನ ಮಕ್ಕಳಿಗೆ ಕಾಯ್ದಿರಿಸಲಾಗಿದೆ. ಚಿಕಿತ್ಸೆಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಸಹಜವಾಗಿಯೇಉಂಟಾಗುವ ಸಂಭವ ಹೆಚ್ಚಾಗಿರುತ್ತದೆ.
ಅದಕ್ಕಾಗಿಆಸ್ಪತ್ರೆಯಲ್ಲಿಯೇ 13ಕೆಎಲ್ ಆಕ್ಸಿಜನ್ ಟಂಕರ್‌ಸಹ ಅಳವಡಿಸಿ ಆಕ್ಸಿಜನ್ ಉತ್ಪಾದನೆಗೆ ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.ಪಿಐಸಿಯು, ಎನ್‌ಐಸಿಯು ಘಟಕಗಳು:ಪಿಐಸಿಯು ವಿಭಾಗ ಸಾಮಾನ್ಯ ವೈದ್ಯಕೀಯಭಾಗಗಳಿಗಿಂತ ಭಿನ್ನ. ಅನಾರೋಗ್ಯದ ಮಕ್ಕಳಿಗೆಉನ್ನತ ಮಟ್ಟದ ವೈದ್ಯಕೀಯ ಆರೈಕೆ ಒದಗಿಸುತ್ತದೆ.ಇದರಲ್ಲಿ ತೀವ್ರವಾದ ಶುಶ್ರೂಷಾ ಆರೈಕೆ ಮತ್ತುಹೃದಯ ಬಡಿತ, ಉಸಿರಾಟ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳಿಗೆ ನಿರಂತರ ಮೇಲ್ವಿಚಾರಣೆನಡೆಸಲಾಗುತ್ತದೆ. ಎನ್‌ಐಸಿಯು ತೀವ್ರ ನಿಗಾಘಟಕದಲ್ಲಿ ತೀವ್ರವಾಗಿ ಅನಾರೋಗ್ಯ ಪೀಡಿತರಿಗೆಪೂರೈಸಲು ವಿನ್ಯಾಸಗೊಳಿಸಲಾಗಿದೆ.
ನಿರ್ಣಾಯಕಚಿಕಿತ್ಸೆ ಅಗತ್ಯವಿರುವ ನವಜಾತ ಶಿಶುಗಳ ಅಗತ್ಯತೆಪೂರೈಸಲು ವಿಶೇಷವಾಗಿ ಮತ್ತು ಎಚ್ಚರಿಕೆಯಿಂದನೋಡಿಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.
ತಜ್ಞರ ಎಚ್ಚರಿಕೆ ಪರಿಗಣಿಸಲಾಗಿದೆ:ಸಾಮಾನ್ಯವಾಗಿ ಕೋವಿಡ್-19 ಸಾಂಕ್ರಾಮಿಕ ರೋಗವಯಸ್ಸಾದವರು ಅಥವಾ ಹೃದಯದ ತೊಂದರೆ,ಸಕ್ಕರೆ ಕಾಯಿಲೆ, ಶ್ವಾಸಕೋಶ ತೊಂದರೆ ಅಥವಾಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆ ಹೊಂದಿರುವಜನರನ್ನು ಹೆಚ್ಚು ಪೀಡಿಸುತ್ತಿತ್ತು. ಆದರೆ ಮುಂದಿನದಿನದಲ್ಲಿ ಇದು ರೂಪಾಂತರ ಹೊಂದಿ ಮಕ್ಕಳಿಗೂಹರಡುವ ಸಾಧ್ಯತೆ ದಟ್ಟವಾಗಿವೆ ಎಂಬ ತಜ್ಞ ವೈದ್ಯರಎಚ್ಚರಿಕೆಯನ್ನು ತೀವ್ರ ಗಂಭೀರವಾಗಿ ಪರಿಗಣಿಸಿ,ತಮ್ಮ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ವಿಶೇಷ ಘಟಕತೆರೆಯಲು ತೀರ್ಮಾನಿಸಿದ್ದಾಗಿ ಡಾ.ಜಿ.ಪರಮೇಶ್ವರ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.