ರೋಗ ನಿರೋಧಕ ಶಕ್ತಿಯುಳ್ಳವರು ಬ್ಲ್ಯಾಕ್‌ ಫಂಗಸ್ ಗೆ ಹೆದರಬೇಕಿಲ್ಲ


Team Udayavani, May 26, 2021, 6:45 AM IST

ರೋಗ ನಿರೋಧಕ ಶಕ್ತಿಯುಳ್ಳವರು ಬ್ಲ್ಯಾಕ್‌ ಫಂಗಸ್ ಗೆ ಹೆದರಬೇಕಿಲ್ಲ

ರೋಗ ನಿರೋಧಕ ಶಕ್ತಿ ಇರುವ ವರು ಬ್ಲ್ಯಾಕ್‌ ಫ‌ಂಗಸ್‌ಗೆ ಹೆದರಬೇಕಿಲ್ಲ. ಅನಿಯಂತ್ರಿತ ಮಧುಮೇಹಿಗಳು ಹೆಚ್ಚು ಎಚ್ಚರದಿಂದ ಇರಬೇಕು. ಹಾಗಾಗಿ ಮಧುಮೇಹ ನಿಯಂತ್ರಣ ಅಗತ್ಯ ಎಂದು ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಹಿರಿಯ ವೈದ್ಯತಜ್ಞರು ಕಿವಿಮಾತು ಹೇಳಿದ್ದಾರೆ.

ಮಂಗಳವಾರ “ಉದಯವಾಣಿ’ ವತಿಯಿಂದ ಬ್ಲ್ಯಾಕ್‌ ಫ‌ಂಗಸ್‌ ಬಗ್ಗೆ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನೇತ್ರ ವಿಭಾಗದ ಯುನಿಟ್‌ ಮುಖ್ಯಸ್ಥೆ ಡಾ| ವಿಜಯಾ ಪೈ, ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥೆ ಡಾ| ಕವಿತಾ ಸರವು, ಕಿವಿ, ಮೂಗು, ಗಂಟಲು (ಇಎನ್‌ಟಿ) ವಿಭಾಗದ ಮುಖ್ಯಸ್ಥ ಡಾ| ಬಾಲಕೃಷ್ಣನ್‌ ಆರ್‌. ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಸುರೇಂದ್ರ ಚಿಂಬಾಳ್ಕರ್‌ ಯೋಜನೆ ಸೌಲಭ್ಯದ ಕುರಿತು ತಿಳಿಸಿದರು.

ಮುಂಜಾಗ್ರತ ಕ್ರಮ
ಕೊರೊನಾ ಸೋಂಕಿನಿಂದ ಗುಣ ಮುಖ ಹೊಂದಿರುವವರು ಕನಿಷ್ಠ ಒಂದು ತಿಂಗಳು ಫ‌ಂಗಸ್‌ ಜಾಸ್ತಿ ಇರುವ ಕಡೆ ಹೋಗಬಾರದು. ಮಣ್ಣು, ಗಿಡಮರ, ಕೊಳೆತ ಹಣ್ಣು-ತರಕಾರಿ ಇರುವಲ್ಲಿ ಫ‌ಂಗಸ್‌ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರನ್ನು ಫ‌ಂಗಸ್‌ ಉಸಿರಾಟದ ಮೂಲಕ ಪ್ರವೇಶಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಸಮಸ್ಯೆ ಇರದು. ಮೊದಲು ಕೊರೊನಾದಿಂದ ರಕ್ಷಣೆ ಪಡೆಯಲು ಉತ್ತಮ ಮಾಸ್ಕ್ ಧರಿಸುವುದು, ಗುಂಪಿನಲ್ಲಿ ಸೇರದಿರುವುದು, ದೈಹಿಕ ಅಂತರ ಕಾಪಾಡುವುದರ ಜತೆ ವ್ಯಾಕ್ಸಿನ್‌ ಹಾಕಿ ಕೊಳ್ಳಬೇಕು. ಆಕ್ಸಿಜನ್‌ ಕಾನ್ಸಂ ಟ್ರೇಟರ್‌ ಬಳಸುವವರು ಡಿಸ್ಟಿಲ್‌ ನೀರು, ಕುದಿಸಿ ಆರಿಸಿದ ನೀರು ಕುಡಿಯಬೇಕು. ಬ್ಲ್ಯಾಕ್‌ ಫ‌ಂಗಸ್‌ ತಡೆ ಯಲು ಸದ್ಯ ಔಷಧವಿಲ್ಲ ಎಂದರು.

ಮಧುಮೇಹದ ಪಾತ್ರ
ಕೊರೊನಾ ಸೋಂಕಿತರಲ್ಲಿ ಶೇ. 90 ಮಧುಮೇಹಿಗಳು, ಬ್ಲ್ಯಾಕ್‌ ಫ‌ಂಗಸ್‌ ಶೇ. 70 ಅನಿಯಂತ್ರಿತ ಮಧುಮೇಹಿಗಳಿಗೆ ಬಂದಿದೆ. ಕೊರೊನಾ ಸೋಂಕಿನಲ್ಲಿ ಶೇ. 1 ಮರಣ ಪ್ರಮಾಣ ವಾಗಿದ್ದರೆ, ಬ್ಲ್ಯಾಕ್‌ ಫ‌ಂಗಸ್‌ನಲ್ಲಿ ಶೇ. 40-50ರಷ್ಟು ಇದೆ.

ಮ್ಯೂಕರ್‌ವೆುçಕೋಸಿಸ್‌
ಬ್ಲ್ಯಾಕ್‌ ಫ‌ಂಗಸ್‌ನ ಮೂಲ ಹೆಸರು ಮ್ಯೂಕರ್‌ವೆುçಕೋಸಿಸ್‌. ವೈಟ್‌ ಫ‌ಂಗಸ್‌ಗೆ ಕ್ಯಾಂಡಿಡಾ ಎಂದೂ ಎಲ್ಲೋ ಫ‌ಂಗಸ್‌ಗೆ ಮ್ಯೂಕರ್‌ಸೆಪ್ಟಿಕಸ್‌ ಎನ್ನುತ್ತಾರೆ. ಈ ಫ‌ಂಗಸ್‌ ಮಣ್ಣು, ಗಿಡ, ಕೊಳೆತ ಹಣ್ಣು-ತರಕಾರಿ, ಗೊಬ್ಬರದಲ್ಲಿರುತ್ತದೆ. ಇದು ಗಾಳಿಯಲ್ಲಿ ಹರಡಲಿದ್ದು, ನಾಶಪಡಿಸಲಾಗದು. ಉಸಿರಾಟದ ಮೂಲಕ ದೇಹವನ್ನು ಹೊಕ್ಕುತ್ತದೆ. ಅಂಟು ರೋಗ ಅಲ್ಲ ಸಾಂಕ್ರಾಮಿಕ ರೋಗವೆಂದರೆ ಕ್ರಿಮಿಗಳಿಂದ ಹರಡುವುದು. ಇದು ಸಾಂಕ್ರಾಮಿಕ ರೋಗ ಹೌದು. ಆದರೆ ಅಂಟುರೋಗವಲ್ಲ. ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಕೊರೊನಾ ಬಂದವರಿಗೆ ಫ‌ಂಗಸ್‌ ಮೂಗಿನ ಮೂಲಕ ಸೈನಸ್‌ಗೆ,  ಅಲ್ಲಿಂದ ಕಣ್ಣು, ಮಿದುಳಿಗೆ, ರಕ್ತನಾಳಗಳಿಗೆ ಹೋಗುತ್ತದೆ. ಹೀಗಾದಾಗ ಪಾರ್ಶ್ವವಾಯು ಸಮಸ್ಯೆಯೂ ಬರಬಹುದು. ಕ್ಯಾನ್ಸರ್‌, ಅಂಗ ಕಸಿಯಾದವರಿಗೆ ಬಿಳಿ ರಕ್ತಕಣಗಳ ಪ್ರಮಾಣ ಕಡಿಮೆಯಾದಾಗ ಶ್ವಾಸಕೋಶಕ್ಕೂ ಫ‌ಂಗಸ್‌ ತಲುಪಬಹುದು. ಫ‌ಂಗಸ್‌ ಮೂಗಿನ ಮೂಲಕ ಅಥವಾ ಯಾವುದೇ ಗಾಯದ ಮೂಲಕವೂ ಪ್ರವೇಶಿಸಬಹುದು. ಬೀಜಕ (SPORE)ರೂಪದಲ್ಲಿರುವ ಇದು ದೇಹಕ್ಕೆ ಹೋದ ಬಳಿಕ ಅಲ್ಲಿನ ವಾತಾವರಣದಿಂದ ಫ‌ಂಗಸ್‌ ಆಗಿ ಮಾರ್ಪಡುತ್ತದೆ. ಕೊರೊನಾ ಸೋಂಕು ವೈರಸ್‌ನಿಂದ ಬಂದರೆ, ಬ್ಲ್ಯಾಕ್‌ ಫ‌ಂಗಸ್‌ ಫ‌ಂಗಸ್‌ನಿಂದ ಬರುತ್ತದೆ.

ಆಯುಷ್ಮಾನ್‌ ಯೋಜನೆ
ಕೊರೊನಾಕ್ಕೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಎಪಿಎಲ್‌, ಬಿಪಿಎಲ್‌ ಕಾರ್ಡ್‌ ದಾರರು ಚಿಕಿತ್ಸೆ ಪಡೆಯಬಹುದು. ಆಯು ಷ್ಮಾನ್‌ ಭಾರತ್‌ ಕಾರ್ಡ್‌ದಾರರಲ್ಲದವರೂ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆಧಾರ್‌ ಕಾರ್ಡ್‌ ಅಥವಾ ಇನ್ನಾವುದೇ ದಾಖಲೆ ತೋರಿಸಿ ಸೌಲಭ್ಯ ಪಡೆಯ ಬಹುದು. ಬ್ಲ್ಯಾಕ್‌ ಫ‌ಂಗಸ್‌ ಕಾಯಿಲೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕೊಡುವುದಾಗಿ ಸರಕಾರ ತಿಳಿಸಿದೆ. ಆಯುಷ್ಮಾನ್‌ ಯೋಜನೆಯಡಿ ಈ ಕಾಯಿಲೆ ಇದುವರೆಗೆ ಸೇರಿಲ್ಲ.

ಬ್ಲ್ಯಾಕ್‌ ಫ‌ಂಗಸ್‌ ಹೊಸ ಕಾಯಿಲೆಯಲ್ಲ
ಬ್ಲ್ಯಾಕ್‌ ಫ‌ಂಗಸ್‌ ಹೊಸ ಕಾಯಿಲೆಯಲ್ಲ. ಇದು ಹಿಂದೆಯೂ ಇತ್ತು. ಬಹಳ ಕಡಿಮೆ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದರು. ಈಗ ಕೊರೊನಾ ಸೋಂಕು ಹೆಚ್ಚಾಯಿತು. ಈಗಾಗಲೇ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಬ್ಲ್ಯಾಕ್‌ ಫ‌ಂಗಸ್‌ ಹೆಚ್ಚೆನಿಸಿದೆ. ಕೇವಲ ಅತಿಯಾದ ಮಧುಮೇಹ ಇರುವವರಿಗೆ ಮಾತ್ರವಲ್ಲ, ಕ್ಯಾನ್ಸರ್‌ ರೋಗಿಗಳು, ಕಿಡ್ನಿ ಇತ್ಯಾದಿ ಅಂಗಾಂಗಗಳ ಕಸಿ ಮಾಡಿದವರು, ಕಿಮೋ ಥೆರಪಿ ಪಡೆಯುವವರು, ಸ್ಟಿರಾಯ್ಡ ಔಷಧ ಪಡೆಯುವವರು, ಎಚ್‌ಐವಿ ಸೋಂಕಿತರು ಹೀಗೆ ವಿವಿಧ ವರ್ಗಗಳಿಗೆ ಬ್ಲ್ಯಾಕ್‌ ಫ‌ಂಗಸ್‌ ಬರುತ್ತದೆ. ಸ್ಟಿರಾಯ್ಡ ಗೆ ಅತಿ ಶೀಘ್ರವೇ ರೋಗವನ್ನು ನಿಯಂತ್ರಣಕ್ಕೆ ತರುವ ಶಕ್ತಿ ಇದೆ. ಕೊರೊನಾ ಸೋಂಕು ಉಲ½ಣಾವಸ್ಥೆಗೆ ತಲುಪಿ ಆಕ್ಸಿಜನ್‌ ಹಾಸಿಗೆ ಯಲ್ಲಿರುವವರಿಗೆ ಸ್ಟಿರಾಯ್ಡ ನೀಡಬೇಕು. ಆದರೆ ಸೋಂಕು ನಿಯಂ ತ್ರಣಕ್ಕೆ ತರಲೆಂದು ಅತಿಯಾಗಿ ಕೊಟ್ಟರೂ ಸಮಸ್ಯೆ ಬಂದೀತು.

ಚಿಕಿತ್ಸೆ ವೆಚ್ಚದಾಯಕ
ಬ್ಲ್ಯಾಕ್‌ ಫ‌ಂಗಸ್‌ ಕಾಯಿಲೆಯನ್ನು ಬಹು ವಿಭಾಗಗಳ ತಂಡ ಕಾರ್ಯನಿರ್ವಹಿಸಬೇಕು. ಶಸ್ತ್ರಚಿಕಿತ್ಸೆ ಬಹಳ ಮುಖ್ಯ. ಒಟ್ಟಾರೆಯಾಗಿ ವೆಚ್ಚದಾಯಕ.ಈಗ ಒಮ್ಮೆಲೆ ರೋಗ ಹೆಚ್ಚಾದ ಕಾರಣ ಪೂರಕ ಔಷಧದ ಕೊರತೆ ಎದುರಾಗಿದೆ.

ರೋಗಲಕ್ಷಣಗಳು
ಮುಖದ ಒಂದು ಭಾಗದಲ್ಲಿ ನೋವು, ಮೂಗಿ ನಿಂದ ರಕ್ತ, ಬೂದು, ಕಪ್ಪು ಬಣ್ಣದ ನೀರು ಸಿಂಬಳ ರೂಪದಲ್ಲಿ ಹೊರಬರುವುದು, ಒಂದು ಕೆನ್ನೆ ನೋಯುವುದು, ದೃಷ್ಟಿ ಕಡಿಮೆಯಾಗುವುದು, ಒಂದು ಎರಡಾಗಿ ಕಾಣುವುದು, ಕಣ್ಣು -ರೆಪ್ಪೆ ಕಪ್ಪಾಗುವುದು, ಹಲ್ಲು ನೋವು, ಹಲ್ಲು ಅಲುಗಾಡುವುದು, ಬಾಯಲ್ಲಿ ಹುಣ್ಣಾಗುವುದು ಇತ್ಯಾದಿ ಬ್ಲ್ಯಾಕ್‌ ಫ‌ಂಗಸ್‌ ಲಕ್ಷಣಗಳು. ಇದು ಕೊರೊನಾದಿಂದ ಗುಣಮುಖರಾದ ಬಳಿಕ ಕಂಡು ಬರುತ್ತದೆ. ಒಂದೆ ರಡು ದಿನಗಳಲ್ಲೇ ತೀವ್ರಗೊಳ್ಳುವ ಕಾರಣ ಲಕ್ಷಣ ಕಂಡುಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.