ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕು ಹಿಡಿದ ಬುದ್ಧ 

ಬನ್ನಿ ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ.

Team Udayavani, Jul 24, 2021, 2:29 PM IST

Buddha-new

ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದೇ ಪ್ರಸಿದ್ಧರಾದವರೂ ಭಗವಾನ್‌ ಗೌತಮ ಬುದ್ಧ. ಶುದ್ಧ ಚಾರಿತ್ರ್ಯದ ಸಾಕಾರಮೂರ್ತಿ, ಮಂದಸ್ಮಿತಿ ವದನದಿಂದಲೇ ರಾಕ್ಷಸನನ್ನು ಶರಣ ಮಾಡಿದ ಶಕ್ತಿ. ಜೀವನದ ಕೊನೆ ಗಳಿಗೆಯವರೆಗೂ ಕೂಡ ಧ್ಯಾನ, ಮೌನ, ಜೀವನ ಪ್ರೀತಿಯನ್ನು ಬೋಧಿಸಿದ ಕರುಣಾ ಮೂರ್ತಿ. ಬುದ್ಧ ಪೌರ್ಣಿಮಿಯ ಶುಭ  ಸಂದರ್ಭದಲ್ಲಿ ಅವರ ಬೋಧನೆಯ ಸ್ಮರಣೆ ಬದುಕಿನ ಸತ್ಯಾನ್ವೇಷಣೆಗೆ ದಾರಿ ತೋರಬಲ್ಲದು.

ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿಲ್ಲ. ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿ, ಜಗತ್ತಿಗೆ ಗುರುವಾದವರು. ಅರಸೊತ್ತಿಗೆಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದಕ್ಕೂ ಶಾಂತಿ, ಅಹಿಂಸಾ ತಣ್ತೀಗಳನ್ನು ಸಾರಿದರು. ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. ಧ್ಯಾನ, ದಾನ ಜೀವನದ ಬಗ್ಗೆ ಸದಾಕಾಲ ಚಿಂತಿಸಿ ಅದನ್ನು ಜನರಿಗೆ ತಿಳಿಸಿ ಅಪಾರ ಅನುಯಾಯಿಗಳನ್ನು ಗಳಿಸಿಕೊಂಡವರು.

ಬುದ್ಧನ ಚಿಂತನೆಗಳಿಗೆ ಮಾರು ಹೋಗದವರೇ ಇಲ್ಲ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ವೈಚಾರಿಕ ಚಿಂತನೆಗಳಿಗೆ ಬುದ್ಧನ ಆದರ್ಶಗಳು, ತಣ್ತೀಗಳೇ ಮೂಲ ಪ್ರೇರಕ ಶಕ್ತಿಯಾಗಿದ್ದವು. ಕಷ್ಟಕಾರ್ಪಣ್ಯಗಳ ಅರಿವಿಲ್ಲದೇ ಸುಖವಾಗಿ ಅರಮನೆಯಲ್ಲಿ ಬದುಕುತ್ತಿದ್ದ ಸಿದ್ಧಾರ್ಥ ಒಂದು ದಿನ ಸೇವಕನ ಜತೆಗೂಡಿ ಹೊರ ಸಂಚಾರಕ್ಕಾ ಗಿ ಹೋಗಿದ್ದಾಗ ಮುದುಕ, ಶವ ಹಾಗೂ ರೋಗಿಯನ್ನು ಕಂಡು ಮರುಗಿದರು. ಅದುವೇ ಅವರ ಯೋಚನಾ ಪರಿಧಿಯ ಬದಲಾವಣೆಗೆ ಪ್ರೇರಣೆಯಾಯಿತು.

ಜೀವನ ಎಂಬುದು ನಶ್ವರ. ಜಗತ್ತು ದುಃಖ ದುಮ್ಮಾನಗಳಿಂದ ಕೂಡಿದ್ದು, ಇವುಗಳಿಗೆ ಪರಿಹಾರ ಹುಡುಕಬೇಕು ಎಂಬ ತುಡಿತ ಹೆಚ್ಚಾಯಿತು. ಆಗ ರಾತ್ರೋರಾತ್ರಿ ಹೆಂಡತಿ, ಮಗನನ್ನು ಬಿಟ್ಟು ಲೋಕ ಸಂಚಾರನಾಗಿ ಹೊರಡುತ್ತಾನೆ. ಮುಂದೆ ಜ್ಞಾನೋದಯವಾಗಿ ಬುದ್ಧನಾಗುತ್ತಾನೆ, ಬೌದ್ಧ ಧರ್ಮವನ್ನು ಸ್ಥಾಪಿಸುತ್ತಾನೆ.

ಕಷ್ಟಗಳಿಗೆ ಸ್ಪಂದಿಸಿ
ಹಲವು ವರ್ಷಗಳ ಧ್ಯಾನ, ತಪಸ್ಸು, ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಬುದ್ಧ ಜಗತ್ತಿಗೆ ತಿಳಿಸಿದ್ದಾನೆ. ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದ ಬುದ್ಧ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ ಎನ್ನುತ್ತಾನೆ.

ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ.

ಯಶಸ್ವಿ ಜೀವನಕ್ಕೆ ಎಂಟು ಸನ್ಮಾರ್ಗ
ಜೀವನವೂ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಿ ಸು ವಂತೆ ಹೇಳಿ ರುವ ಬುದ್ಧ ಈ ಮೂಲಕ ಜೀವನದ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಬಹುದು ಎನ್ನುತ್ತಾನೆ.

ನಾವು ನಡೆಯುವ ದಾರಿ ಸರಿಯಾಗಿದ್ದರೆ, ನಾವು ಮಾಡುವ ಕಾರ್ಯ ಸತ್ಯ ಶುದ್ಧವಾಗಿದ್ದರೆ ಸಾಧನೆಯ ಶಿಖರವೇರಲು ನಮಗೆ ಯಾವುದೇ ಅಡೆತಡೆಗಳು ಉಂಟಾಗಲಾರದು ಎಂಬುದು ಬುದ್ಧನ ಬೋಧನೆಯ ಸಾರ. ಅಹಿಂಸೆಯನ್ನು ಪ್ರತಿಪಾದಿಸಿದ ಬುದ್ಧ ದಾನ ಮಾಡುವುದು, ಸತ್ಯ ಬೋಧನೆ, ಮದ್ಯಪಾನ ಮಾಡದಿರುವುದು ಹಾಗೂ ಶೀಲವಂತನಾಗಿ ಬದುಕುವಂತೆ ಕರೆ ನೀಡಿದನು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಈ ಪಂಚಶೀಲಗಳನ್ನು ಅಳವಡಿಸಿಕೊಂಡರೆ ಈ ಸಮಾಜ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಿದೆ ಎನ್ನುತ್ತಾನೆ.

ಅಹಿಂಸೆಯ ಪ್ರತಿಪಾದನೆ
ಬುದ್ಧ, ಮಹಾವೀರ, ವಿವೇಕಾನಂದ, ಸೂಫಿ ಸಂತರು ಹಾಗೂ ಗಾಂಧೀಯವರೆಗೂ ಎಲ್ಲ ಆಧ್ಯಾತ್ಮಿಕ ಪುರುಷರು ಬೋಧಿಸಿದ್ದು ಆಹಿಂಸೆಯ ಪ್ರತಿಪಾದನೆಯನ್ನು. ಕ್ರಿ.ಪೂ. 6ನೇ ಶತಮಾನದಲ್ಲಿ ನಡೆಯುತ್ತಿದ ಪ್ರಾಣಿ ಹಿಂಸೆ, ನರಬಲಿ, ಸಾಮಾಜ್ಯ ವಿಸ್ತರಣೆಯ ದಾಹದ ಹಿಂಸೆ, ಇದನ್ನು ಬುದ್ಧನು ವಿರೋಧಿಸಿ, ಅಹಿಂಸೆಯನ್ನು ಪ್ರತಿಪಾದಿಸಿದನು. ಅಹಿಂಸೆಯ ಪ್ರತಿಪಾದನೆ ಕುರಿತು ಬುದ್ಧನೇ ಹೇಳುವಂತೆ, ನಾವು ಯಾವ ಪ್ರಾಣಿಗೂ ಜೀವ ಕೊಡಲಾರೆವೂ, ಅವುಗಳ ಜೀವ ತೆಗೆಯುವ ಹಕ್ಕು ನಮ್ಮಗಿಲ್ಲ. ನಾವು ನಮ್ಮ ದೇಹವನ್ನು ಪ್ರಾಣವನ್ನು ಪ್ರೀತಿಸುವಂತೆ ಇತರೆ ಪ್ರಾಣಿಗಳನ್ನು ಪ್ರೀತಿಸಬೇಕೆಂದು ಹೇಳಿ ನಿಜ ಪ್ರೀತಿಯ ಅಂತಃಕರಣದ
ಬೋಧನೆಯನ್ನು ಮಾಡುತ್ತಾನೆ.

ಬಾಳೇ ಬೋಧನೆ
ಬೌದ್ಧ ಧರ್ಮ ಹಾಗೂ ಬುದ್ಧನ ಉಪದೇಶ ಏನಿರಬಹುದು ಎಂಬ ಉತ್ತರವನ್ನು ಹುಡುಕುತ್ತಾ ಹೊರಟರೇ, ತಿಳಿಯುವುದನೇಂದರೆ ಬುದ್ಧನ ಬಾಳೇ (ಜೀವನ)ಆತನ ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ, ಆಶಯಗಳನ್ನು ದಿಕ್ಕರಿಸಿದವನಲ್ಲ. ಎಂತ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು ಬಿಟ್ಟವನಲ್ಲ. ಬುದ್ಧ ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದವನೂ. ಸಮಾಜದಲ್ಲಿ ತುಡಿತಕ್ಕೊಳಗಾದವರ ಕಣ್ಣೀರ ಒರೆಸಿದನು. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದನು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದನು.

ನಾವು ಯಾವ ಪ್ರಾಣಿಗೂ ಜೀವ ಕೊಡಲಾರೆವೂ, ಅವುಗಳ ಜೀವ ತೆಗೆಯುವ ಹಕ್ಕು ನಮ್ಮಗಿಲ್ಲ. ನಾವು ನಮ್ಮ ದೇಹವನ್ನು ಪ್ರಾಣವನ್ನು ಪ್ರೀತಿಸುವಂತೆ ಇತರೆ ಪ್ರಾಣಿಗಳನ್ನು ಪ್ರೀತಿಸಬೇಕು. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ.ಯಾರೇ, ಏನೇ ಹೇಳಿದರೂ ಕೂಡ ಅದನ್ನು ಒರೆಗಚ್ಚಿ ನೋಡಿ, ಆಲೋಚಿಸಿ ನಿರ್ಧಾರಕ್ಕೆ ಬನ್ನಿ ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ.

ಬುದ್ಧ ಪೂರ್ಣಿಮೆ
ಬುದ್ಧನಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ದಿನವನ್ನೂ ಭಾರತಾದ್ಯಂತ ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದನ್ನು ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಎಪ್ರಿಲ್‌- ಮೇ ತಿಂಗಳ ಪವಿತ್ರ ದಿನ ಎಂದರ್ಥ.

ಟಾಪ್ ನ್ಯೂಸ್

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

baby 2

Brahmin welfare panel; 4 ಮಕ್ಕಳು ಪಡೆದು 1 ಲಕ್ಷ ರೂ. ಬಹುಮಾನ ಗೆಲ್ಲಿ!

South Africa squad announced for Champions Trophy 2025

Champions Trophy: ದ.ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್‌ ವೇಗಿಗಳಿಗಿಲ್ಲ ಸ್ಥಾನ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Vijyanagara-DC

Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

1-bangla

India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

23

UV Fusion: ಹೊಸ ಅಧ್ಯಾಯ 2025

22

UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

20

UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

rape 1

Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ

ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್

ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್

ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ

ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.