ಹಿರಿಯ ನಾಗರಿಕರಿಗೆ ಥಾಣೆಯ “ವಿ ಆರ್ ಫಾರ್ ಯು’ ನೆರವು
Team Udayavani, May 26, 2021, 12:06 PM IST
ಥಾಣೆ: ಕಳೆದ ಕೆಲವು ದಿನಗಳಿಂದ ಥಾಣೆಯಲ್ಲಿ ಲಸಿಕೆಗಳ ಕೊರತೆಯಿಂದ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದು, ಲಸಿಕೆ ಪಡೆಯಲು ಹಿರಿಯ ನಾಗರಿಕರು ಮುಂಜಾನೆ 3ರಿಂದ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಲಸಿಕೆ ಕೇಂದ್ರದಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣ ಮನೆಗೆ ಮರಳಬೇಕಾಗುತ್ತದೆ. ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಲಸಿಕೆಗಳ ಕೊರತೆ ಇದೆ ಮತ್ತು ಲಸಿಕೆ ಅಭಿಯಾನದಲ್ಲಿ ಗೊಂದಲಗಳಿವೆ. ಅಲ್ಲದೆ ಎರಡನೇ ಡೋಸ್ ತೆಗೆದುಕೊಳ್ಳುವ ಗಡುವು ಮುಕ್ತಾಯಗೊಂಡಿರುವುದರಿಂದ ಹಿರಿಯ ನಾಗರಿಕರು ಆತಂಕಕ್ಕೊಳಗಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿರುವ “ವಿ ಆರ್ ಫಾರ್ ಯು’ ಸಂಸ್ಥೆ ಹಿರಿಯ ನಾಗರಿಕರ ನೆರವಿಗೆ ಬಂದಿದೆ.
ಸಂಸ್ಥೆಯ ಸ್ವಯಂಸೇವಕರು ಬೆಳಗ್ಗೆ ಕೇಂದ್ರಗಳಿಗೆ ತೆರಳಿ ಹಿರಿಯ ನಾಗರಿಕರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ದರಿಂದ ಹಿರಿಯ ನಾಗರಿಕರು ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಲಸಿಕೆಗಾಗಿ ಅವರು ಹಿರಿಯ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
40 ಮಂದಿ ಸ್ವಯಂಸೇವಕರು
ಸಹಾಯವಾಣಿಗೆ ಪ್ರತೀದಿನ 150ರಿಂದ 200 ಕರೆಗಳು ಬರುತ್ತವೆ. ವ್ಯಾಕ್ಸಿನೇಷನ್‌ಗಾಗಿ ಅವರ ಸಂಖ್ಯೆ ಹತ್ತಿರದಲ್ಲಿದ್ದರೆ ಸ್ವಯಂಸೇವಕರು ಹಿರಿಯರನ್ನು ಕೇಂದ್ರಕ್ಕೆ ಕರೆತರುತ್ತಾರೆ. ಈ ಸಂಘಟನೆಯ ಒಟ್ಟು 40 ಮಂದಿ ಸ್ವಯಂಸೇವಕರು ನಗರದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿವಿಧ ನಗರಗಳಲ್ಲಿ ಸೇವೆ
ನಗರದ ವಿವಿಧ ಭಾಗಗಳಾದ ನೌಪಾಡಾ, ಘೋಡ್ ಬಂದರ್, ಯಶೋದನಗರ, ಸಾವರ್ಕರ್ ನಗರದ ಹಿರಿಯ ನಾಗರಿಕರ ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಹಿರಿಯ ನಾಗರಿಕರು ಏಕಾಂಗಿಯಾಗಿ ಬದುಕಬೇಕಾಗಿದೆ. ವ್ಯಾಕ್ಸಿನೇಶನ್ ಅವಧಿಯಲ್ಲಿ ಈ ಹಿರಿಯ ನಾಗರಿಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಹಿರಿಯ ನಾಗರಿಕರನ್ನು ಥಾಣೆ ಯಲ್ಲಿರುವ ವಿ ಆರ್ ಫಾರ್ ಯು ನೋಡಿಕೊಳ್ಳುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಅವರಿಗೆ ಸಹಾಯ ಮಾಡುತ್ತಿದ್ದೇವೆ. ಸಹಾಯ ಮಾಡುವುದರ ಜತೆಗೆ ಈ ಸ್ವಯಂಸೇವಕರು ಲಸಿಕೆ ನೀಡುವ ಬಗ್ಗೆ ಸಮಾಲೋಚನೆ ಮತ್ತು ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.