ಆ. 15ಕ್ಕೆ ಬಡವರಿಗೆ 5000 ಮನೆ ವಿತರಣೆ
Team Udayavani, May 26, 2021, 12:44 PM IST
ಬೆಂಗಳೂರು: ಪ್ರಧಾನಿಯವರ “ಎಲ್ಲರಿಗೂಸೂರು’ ಆಶಯದಂತೆ ನಗರ ಜಿಲ್ಲೆ ಯಲ್ಲಿ ಒಂದುಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಾನಾಹಂತದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ಆ.15ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು5000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಲಭ್ಯವಿರುವ 445 ಎಕರೆ ಸರ್ಕಾರಿ ಭೂಮಿಯನ್ನು ಪ್ರಧಾನಮಂತ್ರಿ ವಸತಿ ಯೋಜನೆಗಾಗಿ ರಾಜೀವ್‌ಗಾಂಧಿವಸತಿ ನಿಗಮಕ್ಕೆ ಹಸ್ತಾಂತರಿಸುವ ಸಂಬಂಧವಿಕಾಸಸೌಧದಲ್ಲಿ ಮಂಗಳವಾರ ಕಂದಾಯಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು.ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ “ಒಂದುಲಕ್ಷ ಬಹುಮಹಡಿ ವಸತಿ ಯೋಜನೆ’ಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
316 ಎಕರೆಯಲ್ಲಿ46,000ಮನೆಗಳನಿರ್ಮಾಣ ಕಾರ್ಯನಡೆದಿದ್ದುಕಾಮಗಾರಿ ನಾನಾ ಹಂತದಲ್ಲಿದೆ. ಆ. 15ರಂದುಸಿಎಂ 5000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ. ಪ್ರತಿ ಮನೆಗೆ ನಿಗದಿಪಡಿಸಿದ್ದ 7 ಲಕ್ಷ ರೂ.ದರವನ್ನು5ಲಕ್ಷ ರೂ.ಗೆ ಇಳಿಕೆ ಮಾಡಲಾಗಿದೆ.ಅಧಿಕಾರಿಗಳು ವಿಳಂಬ ಮಾಡಿದರೆ, ಕರ್ತವ್ಯನಿರ್ಲಕ್ಷ್ಯ ತೋರಿದರೆ ಕಠಿಣ ಶಿಸ್ತು ಕ್ರಮಕೆ Rಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊಳಚೆ ಅಭಿವೃದ್ಧಿಮಂಡಳಿಮೂಲಕ 1.80 ಲಕ್ಷ ಮನೆ ನಿರ್ಮಾಣ ಕಾರ್ಯಆರಂಭವಾಗಿದ್ದು, ಕಾಮಗಾರಿ ನಾನಾ ಹಂತಗಳಲ್ಲಿಪ್ರಗತಿಯಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.