ಆಂಬ್ಯುಲೆನ್ಸ್ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ
Team Udayavani, May 26, 2021, 2:23 PM IST
ಜೈಪುರ : ಆಂಬುಲೆನ್ಸ್ ಗೆ ದುಪ್ಪಟ್ಟು ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ತಂದೆಯೋರ್ವನು ತನ್ನ ಮಗಳ ಶವವನ್ನು ಕಾರಿನಲ್ಲಿಯೇ ತೆಗೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವ ಸಾಗಿಸಲು ಆಂಬುಲೆನ್ಸ್ ನವರು ದುಪ್ಪಟ್ಟು ಹಣ ಪೀಕುತ್ತಿರುವ ಘಟನೆಗಳು ಮುಂದುವರೆದಿವೆ. ರಾಜಸ್ಥಾನದ ಜೈಪುರದಲ್ಲಿ ಕೇವಲ 85 ಕಿ.ಮೀ ದೂರ ಶವ ಸಾಗಿಸಲು ಆಂಬುಲೆನ್ಸ್ ಡ್ರೈವರ್ ಗಳು 35 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ.
ಏಪ್ರಿಲ್ 24 ರಂದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಸೀಮಾ ಎಂಬುವರನ್ನು ಕೋಟಾದಲ್ಲಿರುವ ಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಚಿಕಿತ್ಸಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಳು. ಈ ವೇಳೆ ಶವವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ನವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಕೊಡಲು ಶಕ್ತಿ ಇಲ್ಲದ ಮೃತ ಯುವತಿಯ ತಂದೆ ಕೊನೆಗೆ ತನ್ನ ಕಾರಿನ ಮುಂದಿನ ಸೀಟಿನಲ್ಲಿ ಮಗಳ ಹೆಣ ಇಟ್ಟುಕೊಂಡು ಹೋಗಿದ್ದಾನೆ.
ಈ ಘಟನೆಯ ಫೋಟೊ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೋಟಾ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ತನಿಖೆಗೆ ಆದೇಶಿಸಿದ್ದಾರೆ. ಆಂಬ್ಯುಲೆನ್ಸ್ ಡ್ರೈವರ್ ಗಳ ಕುರಿತು ವಿವರ ನೀಡುವಂತೆ ಮೃತ ಯುವತಿಯ ತಂದೆಗೆ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿಯ ತಂದೆ, ಮಗಳ ಶವ ಸಾಗಿಸಲು ಆಂಬ್ಯುಲೆನ್ಸ್ ನವರು 16,000 ರಿಂದ 35000 ರೂ. ಕೇಳಿದರು. ಅಷ್ಟೊಂದು ಹಣ ನಮ್ಮ ಬಳಿ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ನನ್ನ ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡು ಊರಿಗೆ ತಲುಪಿದೆವು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.