ವಾಹನದಲ್ಲಿ ಗ್ರಾಮಗಳಿಗೆ ಭೇಟಿ, ಸೋಂಕು ತಡೆಗೆ ಕ್ರಮ
Team Udayavani, May 26, 2021, 5:21 PM IST
ಯಳಂದೂರು: ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಕೋವಿಡ್ ಬಗ್ಗೆ ಅರಿವು ಮೂಡಿಸಲುಇದನ್ನು ನಿಯಂತ್ರಿಸಲು ವಿಶೇಷವಾಗಿ ರೂಪಿತಗೊಂಡಿರುವ ಕ್ಯಾಪ್ಟನ್‌ಗಳು ಇದರಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕಎನ್. ಮಹೇಶ್ ಸಲಹೆ ನೀಡಿದರು.
ತಾಪಂ ಕಚೇರಿ ಮುಂಭಾಗ ಕೋವಿಡ್ ಕ್ಯಾಪ್ಟನ್ ವಾಹನಗಳಿಗೆ ಚಾಲನೆ ನೀಡಿಮಾತನಾಡಿದ ಅವರು, ಸೋಂಕು ತಡೆಗೆಕ್ಯಾಪ್ಟನ್‌ಗಳ ಪಡೆ ರಚಿಸಲಾಗಿದೆ. ಪ್ರತಿಗ್ರಾಮ ಪಂಚಾಯಿತಿಗೂ ವಾಹನ ವ್ಯವಸ್ಥೆಕಲ್ಪಿಸಲಾಗಿದ್ದು, ಪಿಯುಸಿ ಉಪನ್ಯಾಸಕರುಅಥವಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಕ್ಯಾಪ್ಟನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ.
ಇದನ್ನು ನಿರ್ವಹಿಸಲು ಇಬ್ಬರು ನೋಡಲ್‌ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಇವರು ತಮಗೆ ನಿಗದಿಪಡಿಸಿದ ವಾಹನಗಳಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯಗ್ರಾಮಗಳಲ್ಲಿ ಸಂಚರಿಸಿ ಕೋವಿಡ್ ಸೋಂಕಿತರ ಸಂಪರ್ಕದ ಕೊಂಡಿಯನ್ನು ಕಡಿತಗೊಳಿಸುವ ಜಾಗೃತಿ ಮೂಡಿಸಬೇಕು.
ಸಾಧ್ಯವಾದಷ್ಟು ಹೋಂ ಐಸೋಲೇಷನ್‌ನಿಂದಹೊರ ಬಂದು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೇರಿಸುವ ಜವಾಬ್ದಾರಿಯನ್ನು ಹೊರಬೇಕು. ಕೋವಿಡ್ ನಿಯಮಗಳ ಬಗ್ಗೆಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿಯಳಂದೂರು ತಾಲೂಕು ಕೋವಿಡ್‌ಸೋಂಕಿತರ ಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದನ್ನು ಸಂಪೂರ್ಣ ಕೋವಿಡ್‌ಮುಕ್ತ ತಾಲೂಕು ಮಾಡುವಲ್ಲಿಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ 14 ವಾಹನಗಳಿಗೆಚಾಲನೆನೀಡಲಾಯಿತು..ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲು, ಸದಸ್ಯರಾದ ಮಹದೇವನಾಯಕ, ಕೆ. ಮಲ್ಲಯ್ಯ, ಸುಶೀಲಾ ಪ್ರಕಾಶ್‌ತಹ ಶೀಲ್ದಾರ್ ಜಯ ಪ್ರಕಾಶ್, ಇಒಉಮೇಶ್,ಸಿಪಿಐಶೇಖರ್,ಮುಖ್ಯಾಧಿಕಾರಿಎಂ.ಸಿ. ನಾಗರತ್ನ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.