ಎಲ್ಲೆಡೆ ನಾಕಾಬಂದಿ; ಜನರೆಲ್ಲ ಗೃಹ ಬಂಧಿ
Team Udayavani, May 26, 2021, 9:38 PM IST
ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್‌ಡೌನ್‌ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ದಾವಣಗೆರೆ ಜಿಲ್ಲಾಡಳಿತ ಮೇ 31ರ ವರೆಗೆ ಸಂಪೂರ್ಣ ಲಾಕ್‌ಡೌನ್ ವಿಸ್ತರಣೆ ಮಾಡಿ ದಿನಸಿ, ತರಕಾರಿ ಒಳಗೊಂಡಂತೆ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಹಾಗಾಗಿ ದಿನಸಿ, ತರಕಾರಿ ಅಂಗಡಿ ತೆರೆದಿರಲಿಲ್ಲ. ಸೋಮವಾರವೇ ಎಷ್ಟು ಸಾಧ್ಯವೋ ಅಷ್ಟು ದಿನಸಿ ಖರೀದಿ ಮಾಡಲಾಗಿತ್ತು. ಮಾಹಿತಿ ಇಲ್ಲದ ಕೆಲವರು ದಿನಸಿ, ತರಕಾರಿಗಾಗಿ ಅಲ್ಲಲ್ಲಿ ಎಡತಾಕಿದರು.
ಹಾಲಿನ ಕೇಂದ್ರ, ಔಷಧಿ ಅಂಗಡಿ, ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿತ್ತು. ವಿನೋಬ ನಗರ ಒಳಗೊಂಡಂತೆ ಕೆಲ ಭಾಗದಲ್ಲಿನ ಹಾಲಿನ ಕೇಂದ್ರ ಬಂದ್ ಮಾಡಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ಇರದ ಕಾರಣ ಕೆ.ಆರ್. ಮಾರ್ಕೆಟ್,ಗಡಿಯಾರ ಕಂಬದ ರಸ್ತೆ, ವಿಜಯಲಕ್ಷ್ಮೀ ರಸ್ತೆ, ಮಂಡಿಪೇಟೆ, ಚೌಕಿಪೇಟೆ, ಚಾಮರಾಜಪೇಟೆ, ಕೆ.ಆರ್. ರಸ್ತೆ, ಬಿನ್ನಿ ಕಂಪನಿ ರಸ್ತೆ, ದೊಡ್ಡಪೇಟೆ, ಅಶೋಕ ರಸ್ತೆ ಇತರೆ ಭಾಗದಲ್ಲಿ ಜನರ ಸುಳಿವೇ ಇರಲಿಲ್ಲ.
ಅಲ್ಲಲ್ಲಿ, ಆಗಾಗ ವಾಹನಗಳ ಸಂಚಾರ ಕಂಡು ಬಂತು. ಸೋಮವಾರದಂತೆ ಜನಜಂಗುಳಿ ಎಲ್ಲಿಯೂ ಕಂಡು ಬರಲಿಲ್ಲ. ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಿವಿಧ ಭಾಗದಲ್ಲಿ ಸಂಚರಿಸಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ತಿಳಿ ಹೇಳುವ ಜೊತೆಗೆ ಎಚ್ಚರಿಕೆ ನೀಡಿದರು.
ಕೊರೊನಾದಿಂದ ಸುರಕ್ಷಿತವಾಗಿ ಇರಬೇಕಾದರೆ ಯಾರೂ ಸಹ ಮನೆಯಿಂದ ಹೊರ ಬರಬಾರದು ಎನ್ನುವ ಕಾರಣಕ್ಕೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ತಮ್ಮ ಹಾಗೂ ತಮ್ಮವರ ಸುರಕ್ಷತೆಗೆ ಮನೆಯಲ್ಲೇ ಇರಬೇಕು ಎಂದು ಜಾಗೃತಿ ಮೂಡಿಸಲಾಯಿತು.
ನಗರದ ಹೊರ ವಲಯ, ಬಡಾವಣೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣಕ್ಕೆ ಕೆಲವರು ರಸ್ತೆಯಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್ ಆಡಿದರು. ಜನ ನಿಬಿಡ ರಸ್ತೆಯಲ್ಲೂ ಜನರು ಕ್ರಿಕೆಟ್ ಆಡುವುದು ಕಂಡು ಬಂತು. ಕೆಲವು ಕಡೆ ಅಂಗಡಿ, ಮುಂಗಟ್ಟು, ಹೋಟೆಲ್ ಮುಚ್ಚಿದ್ದರೆ, ಹಲವೆಡೆ ಎಂದಿನಂತೆ ತೆರೆದಿದ್ದವು. ಕೆಲವು ಕಡೆ ಕದ್ದುಮುಚ್ಚಿ ವ್ಯಾಪಾರ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.