ಒಬ್ಬನಿಗಾಗಿ ಮುಂಬೈನಿಂದ ದುಬಾೖಗೆ ಹಾರಿದ ವಿಮಾನ
Team Udayavani, May 27, 2021, 7:35 AM IST
ಮುಂಬೈ: ಹದಿನೆಂಟು ಸಾವಿರ ರೂ. ಟಿಕೆಟ್ ನೀಡಿ, ಮುಂಬೈನಿಂದ ದುಬಾೖಗೆ ವಿಮಾನದಲ್ಲಿ ಒಬ್ಬರೇ ಒಬ್ಬ ವ್ಯಕ್ತಿ ಪ್ರಯಾಣಿಸಿದ್ದಾರೆ. ಮೇ 19ರಂದು 360 ಪ್ರಯಾಣಿಕರ ಸಾಮರ್ಥ್ಯ ಇರುವ ಬೋಯಿಂಗ್ 777 ವಿಮಾನದಲ್ಲಿ ಸ್ಟಾರ್ಗೆಮ್ಸ್ನ ಸಿಇಒ ಆಗಿರುವ ಭವೇಶ್ ಜವೇರಿ ಪ್ರಯಾಣಿಸಿದ್ದಾರೆ. ಒಟ್ಟು ಎರಡೂವರೆ ಗಂಟೆ ಪ್ರಯಾಣದ ಅವಧಿಯಲ್ಲಿ ವಿಮಾನದಲ್ಲಿ ಪ್ರಯಾಣಿಕರ ಸಾಲಿನಲ್ಲಿ ಇದ್ದದ್ದು ಅವರೊಬ್ಬರೇ. “ನಾನು ವಿಮಾನದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಗಗನಸಖೀ ಆತ್ಮೀಯವಾಗಿ ಸ್ವಾಗತಿಸಿ ಚಪ್ಪಾಳೆ ತಟ್ಟಿದರು, ಜತೆಗೆ ಕಾಕ್ಪಿಟ್ನಿಂದ ಪೈಲಟ್ ಕೂಡ ಕೈ ಬೀಸಿ ಆತ್ಮೀಯತೆ ತೋರಿದರು’ ಎಂದು ಹೇಳಿದ್ದಾರೆ.
ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮುಂಬಯಿ ಮತ್ತು ದುಬಾೖ ನಡುವೆ 240 ಬಾರಿ ವಿಮಾನಗಳಲ್ಲಿ ಪ್ರಯಾಣಿಸಿರುವ ಬಗ್ಗೆ ಜವೇರಿ ತಿಳಿಸಿದ್ದಾರೆ. ಇದೊಂದು ಅತ್ಯುತ್ತಮ ವಿಮಾನ ಪ್ರಯಾಣ. ನಮ್ಮ ಬಳಿ ಹಣ ಇದ್ದರೆ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಅದೇ ರೀತಿ ಎಷ್ಟು ಮೊತ್ತ ವೆಚ್ಚ ಮಾಡಿದರೂ, ಇಂಥ ಅಪೂರ್ವ ಅನುಭವ ಸಿಗುವುದಿಲ್ಲ ಎಂದು ಹೇಳಿದ್ದಾರೆ. ವಿಮಾನದ ಕಮಾಂಡರ್ ಬಂದು “ಪೂರ್ಣ ವಿಮಾನದ ಪರಿಚಯ ಮಾಡ ಬೇಕೇ ಎಂದು ತಮಾಷೆ ಮಾಡಿದರು’ ಎಂದು ಭವೇಶ್ “ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ತಿಳಿಸಿದ್ದಾರೆ.
ಏಕೈಕ ಪ್ರಯಾಣಿಕನಿಗಾಗಿ ವಿಮಾನ ಹಾರಿಸಬೇಕಿತ್ತೇ ಎಂಬ ಜಿಜ್ಞಾಸೆಗೂ ಉತ್ತರ ಸಿಕ್ಕಿದೆ. ಇದಕ್ಕೊಂದು ಕಾರಣವಿದೆ. ಜವೇರಿ, ಯುಎಇ ಸರಕಾರದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ರಾಜ ತಾಂತ್ರಿಕ ಅಧಿಕಾರಿಗಳು, ಯುಎಇ ಪ್ರಜೆಗಳು ಮಾತ್ರ ಇಂಥ ಸೌಲಭ್ಯ ಇದೆ. ಲೆಕ್ಕಾಚಾರ ಹಾಕುವುದಿದ್ದರೆ ಎರಡೂವರೆ ಗಂಟೆ ಪ್ರಯಾಣಕ್ಕೆ 17 ಟನ್ ವೈಮಾನಿಕ ಇಂಧನ ಬೇಕು. ಮಾರುಕಟ್ಟೆಯಲ್ಲಿ ಅದರ ಬೆಲೆ 8 ಲಕ್ಷ ರೂ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.