ಬಿಜೆಪಿ ಶಾಸಕಿಗೆ ಭದ್ರತೆಯೇ ಹೊರೆ! ಗುಡಿಸಲಿನಲ್ಲಿ ವಾಸ, ಪತಿ ದಿನಗೂಲಿ ನೌಕರ
Team Udayavani, May 27, 2021, 7:40 AM IST
ಕೋಲ್ಕತಾ: ಪಶ್ಚಿಮ ಬಂಗಾಲದ ಬಂಕುರಾ ಜಿಲ್ಲೆಯ ಸಾಲ್ಟೋರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಚಂದನಾ ಬೌರಿ ಮೊದಲ ಬಾರಿಗೆ ಆಯ್ಕೆಯಾದವರು. ಕೇಂದ್ರ ಸರಕಾರ ಬಿಜೆಪಿ ಶಾಸಕರಿಗೆ ಭದ್ರತೆ ನೀಡಲು ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸಿದೆ. ಆದರೆ, ಅವರಿಗೆ ಈ ವ್ಯವಸ್ಥೆ ಹೊರೆಯಾಗಿ ಪರಿಣಮಿಸಿದೆ. ಶಾಸಕರಿಗೆ ಭದ್ರತೆ ಹೊರೆಯೇ ಎಂದು ಅಚ್ಚರಿಪಡಬೇಡಿ.
ಶಾಸಕಿ ಚಂದನಾ ಬಡ ಮಹಿಳೆ ಹಾಗೂ ಗೃಹಿಣಿ. ಅವರ ಪತಿ ದಿನಗೂಲಿ ನೌಕರ. ಮಕ್ಕಳ ಜತೆಗೆ ಒಂದು ರೂಮಿನ ಗುಡಿಸಲಿನಲ್ಲಿ ಅವರ ವಾಸ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಪತಿಗೆ ಉದ್ಯೋಗವಿಲ್ಲ. ಹಾಗಾಗಿ, ಆದಾಯಕ್ಕೂ ತೊಂದರೆಯಾಗಿದೆ. ಅವರ ಮನೆಯಲ್ಲಿ ನೀರಿನ ಸೌಲಭ್ಯ ಮತ್ತು ಶೌಚಾಲಯ ಕೂಡಾ ಇಲ್ಲ.
ನೂತನ ಶಾಸಕಿ ಹಾಗೂ ಅವರ ಪತಿಯೇ ದಿನದ ಊಟಕ್ಕೆ ತಡಕಾಡುವ ಹಾಗಿರುವ ಈ ಪರಿಸ್ಥಿತಿಯಲ್ಲಿ ಅವರಿಗೆ ಭದ್ರತೆ ನೀಡಲು ನಿಯೋಜಿತರಾಗಿರುವ ನಾಲ್ವರು ಯೋಧರಿಗೆ ಊಟ ನೀಡಲು, ಅವರಿಗೆ ಆಶ್ರಯ ಕಲ್ಪಿಸಲಾಗದ ಅಸಹಾಯಕತೆ ಅವರನ್ನು ಆವರಿಸಿದೆ ಎಂದು “ದ ನ್ಯೂ ಇಂಡಿಯನ್ ಎಕ್ಸ್ ಪ್ರಸ್’ ಪತ್ರಿಕೆ ವರದಿ ಮಾಡಿದೆ.
ಯೋಧರಿಂದಲೇ ನೆರವು: ಶಾಸಕಿ ಚಂದನಾ ಬೌರಿ ಅವರ ಪರಿಸ್ಥಿತಿ ನೋಡಿ, ಭದ್ರತೆ ನೀಡಲು ಬಂದಿರುವ ಯೋಧರೇ ತಮ್ಮ ಜೇಬಿನಿಂದ ಖರ್ಚು ಮಾಡಿ ಅವರಿಗೆ ಸಮೀಪದ ಕಿರಾಣಿ ಅಂಗಡಿಯಿಂದ ತರಕಾರಿ, ದಿನಸಿ ತಂದು ನೀಡುತ್ತಿದ್ದಾರೆ. ಅದರ ಮೂಲಕವೇ ಅಡುಗೆ ಸಿದ್ಧವಾಗಿ ಊಟ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಚಂದನಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಯ ಸಂತೋಷ್ ಕುಮಾರ್ ಮೊಂದಾಲ್ ವಿರುದ್ಧ 4,145 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.