ಈ ರಾಶಿಯವರಿಂದು ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ವ್ಯಯಿಸಬೇಕಾಗುತ್ತದೆ
Team Udayavani, May 27, 2021, 7:12 AM IST
27-05-2021
ಮೇಷ: ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕಗಳು ಉದ್ಯೋಗದಲ್ಲಿ ಬದಲಾವಣೆ, ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ತಾಪತ್ರಯಗಳು ಕಂಡು ಬರಲಿವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿಂದ ಬೇಸರ ಇರಲಿದೆ.
ವೃಷಭ: ಹಲವು ರೀತಿಯಲ್ಲಿ ಮಾನಸಿಕ ಒತ್ತಡ, ಉದ್ವೇಗ ಕೆಲವೊಂದು ಹಗರಣಗಳಿಂದಾಗಿ ಗೌರವಕ್ಕೆ ಚ್ಯುತಿಯಾದರೂ ವಿವಿಧ ಮೂಲಗಳಿಂದ ಧನಾರ್ಜನೆಯು ಸಾಕಷ್ಟು ವೃದ್ಧಿಯಾಗಿ ಮುನ್ನಡೆ ಇರುತ್ತದೆ. ಶುಭವಿದೆ.
ಮಿಥುನ: ಉದ್ಯೋಗ, ವ್ಯವಹಾರಗಳು ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸಲಿವೆ. ಉತ್ಪತ್ತಿ ಲಾಭಗಳು ಅನುಕೂಲವಾಗಲಿವೆ. ದೈವಭಲ ಉತ್ತಮವಿದ್ದಲ್ಲಿ ಕೆಲವೊಂದು ಮಹತ್ತರ ಕಾರ್ಯಗಳು ಕೈಗೂಡುವುವು. ಮುನ್ನಡೆ ಇದೆ.
ಕರ್ಕ: ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಕೆಲವೊಂದು ನಿಮ್ಮ ಆಕಾಂಕ್ಷೆಯ ಕೆಲಸಗಳು ಕೈಗೂಡುವುವು. ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ವ್ಯಯಿಸಬೇಕಾಗುತ್ತದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ಅಡ್ಡಿ ಆತಂಕ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಅಭಿಪ್ರಾಯ ಭೇದದಿಂದಾಗಿ ಮನಸ್ತಾಪ, ಕುಟುಂಬದಲ್ಲಿ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳಿಂದ ಧನವ್ಯಯ ಕಂಡು ಬರಲಿದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿರಿ. ಉದ್ದಿಮೆಯಲ್ಲಿ ಹಿಂಜರಿತ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನ, ವ್ಯಾಪಾರ ಉದ್ದಿಮೆಗಳಲ್ಲಿ ನಿಧಾನಗತಿ ಕಂಡು ಬರುವುದು. ಅವಕಾಶಗಳಿಂದ ನಿರುದ್ಯೋಗಿಗಳು ಉದ್ಯೋಗ ಪಡೆದಾರು. ದೊರೆತ ಅವಕಾಶವನ್ನು ಉಪಯೋಗಿಸಿಕೊಳ್ಳಿರಿ.
ತುಲಾ: ಕೋರ್ಟು ಕಚೇರಿ ಕೆಲಸಗಳಲ್ಲಿ ವ್ಯಾಜ್ಯ, ತಗಾದೆಗಳು ಅನುಕೂಲ ರೀತಿಯಲ್ಲಿ ಇತ್ಯರ್ಥವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಬಲ ವಿರೋಧಿಗಳ ಆತಂಕದಿಂದ ಆಗಾಗ ಅಡಚಣೆಗಳು ತೋರಿಬಂದರೂ ವಿಜಯ ಸಾಧಿಸುವಿರಿ.
ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಪ್ರಬಲ ವಿರೋಧಿಗಳ ಆತಂಕದಿಂದ ಆಗಾಗ ಅಡಚಣೆಗಳು ತೋರಿಬಂದರೂ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ಸಾಧನೆಗಳಿಂದ ಹಿತಶತ್ರುಗಳು ಹಿಮ್ಮೆಟ್ಟಿಯಾರು. ವಾದವಿವಾದಗಳು ಕಂಡು ಬಂದೀತು.
ಧನು: ಕುಟುಂಬದಲ್ಲಿ ವಾದ ವಿವಾದದಿಂದ ಮಾನಸಿಕ ಕ್ಲೇಶ ತಂದೀತು. ಆರ್ಥಿಕ ಹಾನಿ ಸತ್ಕರ್ಮ ಅನುಷ್ಠಾನದಲ್ಲಿ ವಿಮುಖತೆ ತೋರಿಬಾರದಂತೆ ಪ್ರಾರ್ಥಿಸಿರಿ. ಗೃಹಕೃತ್ಯ ಕಾರ್ಯಗಳ ಶ್ರಮ ಹೆಚ್ಚಾಗಿ ಆಯಾಸ ತಂದೀತು.
ಮಕರ: ಧಾರ್ಮಿಕ ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿಬಂದು ದೇವತಾ ಹಾಗೂ ಮಂಗಲ ಕಾರ್ಯಗಳಿಗೆ ಅನುಕೂಲ ತೋರಿಬರುತ್ತದೆ. ಹೆಚ್ಚಿನ ದುಡಿಮೆ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಗೆ ಕೊಂಡೊಯ್ಯಲಿದೆ.
ಕುಂಭ: ಹಲವಾರು ತಂಟೆ, ತಕರಾರುಗಳಲ್ಲಿ ಸಿಲುಕಿ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವಿರಿ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಆತ್ಮವಿಶ್ವಾಸ, ಪ್ರಯತ್ನಬಲ, ಸಹಕಾರವು ಸದ್ಯದಲ್ಲೇ ಸಿಗಲಿದೆ.
ಮೀನ: ಸ್ವಜನ ಬಂಧುಗಳಿಂದಲೂ, ಸ್ನೇಹಿತ ವರ್ಗದವರಿಂದಲೂ ಮಾನಸಿಕ ಒತ್ತಡ, ಮನಸ್ತಾಪದ ಸಂಭವ ತೋರಿಬಂದರೂ ನಿಮ್ಮ ಸಂಯಮ ನಿಮ್ಮನ್ನು ಕಾಪಾಡಲಿದೆ. ಮುನ್ನಡೆಗೆ ಆತ್ಮವಿಶ್ವಾಸ ಮುಖ್ಯ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.