ಕಳ್ಳರಿಬ್ಬರಿಗೆ ಜಾಮೀನು, ಕದ್ದ ಚಿನ್ನಾಭರಣ ಫೈನಾನ್ಸ್ ನಲ್ಲಿ ಬಾಕಿ!


Team Udayavani, May 27, 2021, 6:28 PM IST

ಗಹಗ್ದ್ಹಗ್ದ

ಸುರತ್ಕಲ್ : ಕಳ್ಳ ಸಿಕ್ಕಿ ಬಿದ್ದು ಚಿನ್ನ ಎಲ್ಲಿದೆ ಎಂದು ಬಾಯಿ ಬಿಟ್ಟಿದ್ದರೂ, ಚಿನ್ನ ಮಾತ್ರ ಇದುವರೆಗೆ ಆ ಬಡ ಹೈನುಗಾರನ ಮನೆಗೆ ತಲುಪಿಲ್ಲ. ಸುರತ್ಕಲ್ ಪೊಲೀಸ್ ಠಾಣೆಗೆ ಕೆಲವು ಬಾರಿ ಹತ್ತಿಳಿದರೂ ಇದುವರೆಗೆ ಚಿನ್ನ ಮಾತ್ರ ಫೈನಾನ್ಸ್ ನಲ್ಲಿ ಅಡಮಾನದಲ್ಲಿಯೇ ಇದೆ.

ಕಷ್ಟ ಕಾಲದಲ್ಲಿ ಚಿನ್ನ ನೆರವಿಗೆ ಬರಬಹುದು ಎಂದು ಒಂದಿಷ್ಟು ಕೂಡಿಟ್ಟ ಚಿನ್ನ ಇದೀಗ ಇದ್ದೂ ಇಲ್ಲದಂತಾಗಿದೆ.ನ್ಯಾಯಕ್ಕಾಗಿ ಈ ಬಡ ಕುಟುಂಬ ಎದುರು ನೋಡುತ್ತಿದೆ. ಅಂದ ಹಾಗೆ ಈ ಘಟನೆ ನಡೆದಿದ್ದು ಹೀಗೆ ನೋಡಿ
ಮಧ್ಯ ದೇವಸ್ಥಾನದ ಬಳಿ ಬಾಬು ದೇವಾಡಿಗರ 9ನೇ ಕ್ಲಾಸಿನಲ್ಲಿ ಓದುತ್ತಿರುವ ಮಗನಿಗೆ ಚೂರಿ ತೋರಿಸಿ ಬೆದರಿಸಿ 15 ಪವನ್ ಚಿನ್ನದ ದೋಚಿದ ಘಟನೆ ನಡೆದಿತ್ತು.

ಎ.20ರಂದು ಮಧ್ಯ ದೇವಸ್ಥಾನದ ಬಳಿ ಬಾಬು ದೇವಾಡಿಗರ ಮಗನಾದ ಭರತ್ (14 ವರ್ಷ ) ಎಂಬ ಹುಡುಗನನ್ನು ಮಧ್ಯ ದೇವಸ್ಥಾನದ ಬಳಿಯ 5 ಸೆಂಟ್ ಕಾಲನಿ ನಿವಾಸಿ ರಂಜಿತ್ ಯಾನೆ ರಂಜು ( 25) ಮತ್ತು ಮಂಜುನಾಥ ಯಾನೆ ಮಂಜ (25) ವರ್ಷದ ಇಬ್ಬರು ಯುವಕರು ಎಪ್ರಿಲ್ 20 ತಾರೀಖಿನಂದು ತನ್ನ ಮನೆಯ ದನ ಮೇಯಿಸಲು ಹೋದ ಸಂದರ್ಭದಲ್ಲಿ ಅವನನ್ನು ಒತ್ತಾಯ ಪೂರ್ವಕವಾಗಿ ನದಿ ಬದಿ ಕರೆದುಕೊಂಡು ಹೋಗಿ ಮುಳುಗಿಸಿ ಹಿಂಸೆ ನೀಡಿದ್ದು, ನೀನು ನಿನ್ನ ಮನೆಯಿಂದ ಚಿನ್ನವನ್ನು ತಂದುಕೊಡಬೇಕು ಇಲ್ಲದಿದ್ದರೆ ನಿನ್ನನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತೇವೆ ಎಂದು ಬೆದರಿಸಿದ್ದರು.

ಇದರಿಂದ ಹೆದರಿದ ಭರತ್ ಮನೆಗೆ ಬಂದ ಮನೆಯಲ್ಲಿ ತಂದೆ ತಾಯಿ ದೇವಸ್ಥಾನದ ಬಳಿ ಚಿಕ್ಕ ಹೋಟೆಲ್ ನಲ್ಲಿ ಇದ್ದ ಕಾರಣ ಮನೆಯಲ್ಲಿ ಯಾರು ಇಲ್ಲದ್ದು ಯುವಕರಿಗೆ ಅನುಕೂಲವಾಯಿತು ನಾಲ್ಕೈದು ಬಾರಿ ಹೆದರಿಸಿ ,ಬೆದರಿಸಿ ಸುಮಾರು 15 ಪವನ್‌ನ ಸರ,ಬಳೆ, ಬ್ರಾಸ್‌ಲೈಟ್ ಪಡೆದುಕೊಂಡಿದ್ದಾರೆ ಮಾತ್ರ ವಲ್ಲದೆ ಈ ಸುದ್ದಿಯನ್ನು ತಂದೆ ತಾಯಿ ಗೆ ಹೇಳಿದರೆ ಅವರಿಬ್ಬರನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಇದರಿಂದ ಹೆದರಿದ ಭರತ್ ಸುಮ್ಮನಿದ್ದ.

ಮೇ 5 ತಾರೀಖಿನಂದು ಪುನಃ ಯುವಕರಿಬ್ಬರು 70000 ರೂ. ನೀಡಬೇಕು ಎರಡು ದಿನದೊಳಗೆ ನೀನು ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಮರು ಬೆದರಿಕೆ ಹಾಕಿದ್ದು, ಇದರಿಂದ ಹೆದರಿದ ಹುಡುಗ ತಂದೆ ತಾಯಿ ಹತ್ತಿರ ವಿಷಯ ತಿಳಿಸಿದ್ದಾನೆ ವಿಷಯ ತಿಳಿದ ಕೂಡಲೇ ಹುಡುಗನ ತಂದೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸುರತ್ಕಲ್ ಪೋಲೀಸರು ಯುವಕರಿಬ್ಬರನ್ನು ಬಂಧಿಸಿ ತನಿಖೆ ನಡೆಸಿದ್ದರು. ಚಿನ್ನವನ್ನು ಕುಳಾಯಿ,ಮಂಗಳೂರು ಫೈನಾನ್ಸ್ ನಲ್ಲಿ ಯುವಕರಿಬ್ಬರು ಚಿನ್ನ ಅಡವಿಟ್ಟು ಬಂದ ಹಣದಲ್ಲಿ ಮೋಜು ಮಾಡಿದ್ದರು.ಇದರ ನಡುವೆ ಜಾಮೀನಿನಲ್ಲಿ ಆರೋಪಿಗಳು ಹೊರ ಬಂದು ತಿರುಗಾಡುತ್ತಿದ್ದರೆ,ಚಿನ್ನ ಮಾತ್ರ ಇನ್ನೂ ಸಿಕ್ಕಿಲ್ಲ. ಚಿನ್ನ ಮಾತ್ರ ಫೈನಾನ್ಸ್ ನಲ್ಲಿ  ಉಳಿದುಕೊಂಡಿದೆ.

ಈ ಹಿಂದೆಯೂ ಇಂತಹ ಘಟನೆ ಈ ಭಾಗದಲ್ಲಿ ನಡೆದಿದ್ದರೂ ದೂರು ದಾಖಲಾಗಿರಲಿಲ್ಲ. ಗಾಂಜಾ,ಅಮಲು ಪದಾರ್ಥ ಸೇವಿಸಿ ಅಪರಾಧ ಕೃತ್ಯ ಈ ಭಾಗದಲ್ಲಿ ಹೆಚ್ಚುತ್ತಿದ್ದು, ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಕಾಣದ ರಾಜಕೀಯ ಕೈಗಳು ಈ ಅಪರಾಧಿಗಳ ರಕ್ಷಣೆಗೆ ನಿಂತಿದ್ದು, ಈ ಮೊದಲು ಕೂಡಾ ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಇವರಿಗೆ ಯಾವ ಹೆದರಿಕೆಯೂ ಇಲ್ಲವಾಗಿದೆ.ಬಡಕುಟುಂಬವೊAದಕ್ಕೆ ನ್ಯಾಯ ಸಿಗಬೇಕು.ಆರೋಪಿಗಳ,ಮಾದಕ ಸೇವನೆ,ಅಪರಾಧ ಕೃತ್ಯಗಳ ವಿರುದ್ದ ಕಠಿಣ ಕ್ರಮವಾಗ ಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.