ಹಸಿರು ಉಸಿರಿನ ಕಾಡಿಗಾಗಿ ಬೀಜದುಂಡೆ ತಯಾರಿ
ಲೋಕಾಪುರ ಸಮಾನ ಮನಸ್ಕ ಸ್ನೇಹಿತರ ಕಾರ್ಯ! ಪ್ರಕೃತಿ ಸೇವೆಗೆ ಸೀಡ್‌ಬಾಲ್ ತಯಾರಿಕೆ
Team Udayavani, May 27, 2021, 10:30 PM IST
ಬಾಗಲಕೋಟೆ: ಪ್ರಕೃತಿಯಲ್ಲಿ ಬೀಜ ಪ್ರಸರಣ ಮಾಡುವ ಜೇನುಗಳನ್ನು, ಹಕ್ಕಿಗಳನ್ನು ನಮ್ಮ ಸ್ವಾರ್ಥಕ್ಕೆ ಬಲಿ ಪಡೆದಿದ್ದೇವೆ. ಪ್ರಕೃತಿ ನಮ್ಮನ್ನು ಆಹುತಿ ಪಡೆಯುವ ಮುನ್ನ ಋಣ ತೀರಿಸುವ ಕಾರ್ಯಮಾಡಬೇಕಿದೆ. ನಿರ್ಜನ ಬಯಲು ಕಾಡಿಗೆ ನೈಸರ್ಗಿಕವಾಗಿ ಸಂಪೋಶಿಸಿ, ತಯಾರಿಸಿದ ಬೀಜದ ಉಂಡೆಗಳನ್ನು ಎಸೆಯುವ ಮೂಲಕ ಕಾಡಿನ ಗಿಡಗಳ ಸಂಖ್ಯೆ ಹೆಚ್ಚಿಸೋಣ. ಈ ಅಭಿಯಾನವನ್ನು ಸ್ವಯಂ ಪ್ರೇರಿತವಾಗಿ ಭೂಮಿ ಋಣ ತೀರಿಸೋಣ ಎಂದು ಸಮಾನ ಮನಸ್ಕರು ಬೀಜದುಂಡಿ ತಯಾರಿಸುತ್ತಿದ್ದಾರೆ.
ಹೌದು, ಗ್ಲೋಬಲ್ ವಾಮಿಂìಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಉಷ್ಣತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಉಸಿರು ನೀಡುವ ಹಸಿರಿಗಾಗಿ ಲೋಕಾಪುರದಲ್ಲಿ ಸಮಾನಮನಸ್ಕ ಪರಿಸರ ಪ್ರೇಮಿಗಳಿಂದ ಸೀಡ್ ಬಾಲ್ ಅಭಿಯಾನ ಶುರುವಾಗಿದೆ. ಕಾಲಕಾಲಕ್ಕೆ ಮಳೆ ಬರಲ್ಲ. ಬೇಸಿಗೆ ಶುರುವಾಗೋ ಮೊದಲೇ ನೀರು ಬತ್ತಿ ಹೋಗುತ್ತಿದೆ.ಸೂರ್ಯನ ಶಾಖ ವಿಪರೀತವಾಗಿದ್ದು ಉಷ್ಣಾಂಶದಲ್ಲಿ ಏರುಪೇರಾಗಿದೆ. ಕಾಡು ನಾಶವೇ ಇದಕ್ಕೆಲ್ಲಾ ಮೂಲಕಾರಣ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿವಿಧ ಸಸಿಗಳ ಬೀಜದುಂಡೆಗಳನ್ನು ತಯಾರು ಮಾಡುತ್ತಿದ್ದಾರೆ.
ಹಿಂದೆಲ್ಲಾ ಬೀಜೋತ್ಪತ್ತಿ ತನ್ನಿಂದ ತಾನೆ ನಡೆಯುತ್ತಿತ್ತು. ಆದ್ರೆ ಈಗ ಪರಿಸ್ಥಿತಿ ಹಾಗೆ ಇಲ್ಲ. ನೆರವಾಗಿ ಬೀಜ ಒಗೆದರೆ, ಅದು ಮೊಳೆಕೆಯೊಡೆಯಲ್ಲ. ಭೂಮಿಯಲ್ಲಿ ಪೋಷಕಾಂಶ ಇರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಂಘಟನೆ ತೊಡಗಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡಿದ್ರೆ ನಮ್ಮ ರಕ್ಷಣೆ ಮಾಡಿದಂತೆ. ಹೀಗಾಗಿ ಇಂದಿನ ಪೀಳಿಗೆಗೆ ನಮ್ಮ ಹಿರಿಯರು ಪರಿಸರ ಉಳಿಸಿದ್ದಾರೆ. ನಾವು ಮುಂದಿನ ಪೀಳಿಗೆಗೆ ಏನು ಮಾಡಿದ್ದೆವೆ ಎಂಬ ಪ್ರಶ್ನೆ ಹಾಕಿಕೊಂಡು ಲೋಕಾಪುರದ ಪರಿಸರ ಪ್ರೇಮಿಗಳಾದ ವಿಕ್ರಮ್ ನಂದಯ್ಯಗೋಳ ಮತ್ತು ಮಂಜುನಾಥ ಕಂಬಾರ ನೇತೃತ್ವದ ಬೀಜದುಂಡೆ ತಯಾರು ಮಾಡುವ ಕಾರ್ಯದಲ್ಲಿ ಸಮಾನ ಮನಸ್ಕ ಸ್ನೇಹಿತರು ಕೈ ಜೋಡಿಸಿದ್ದಾರೆ ಎನ್ನುತ್ತಾರೆ ಪರಿಸರ ಪ್ರೇಮಿ, ಪತ್ರಕರ್ತ ಪರಶುರಾಮ್ ಪೇಟಕರ್.
ಏನಿದು ಬೀಜದುಂಡೆ?: ಮಣ್ಣು- ಸಗಣಿ- ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ, ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ, ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷಕಾಂಶ ಸುತ್ತಲೂ ಮೊದಲೇ ರೆಡಿಯಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬೂದು ಈ ಸೀಡ್‌ಬಾಲ್‌ನ ಕಾನ್ಸೆಪ್ಟ್.
ಜೂನ್ 5 ರಂದು ವಿಶ್ವಪರಿಸರ ದಿನದಂದು ಈ ಬೀಜ ಉಂಡೆಗಳನ್ನು ಗುಡ್ಡದ ಮೇಲೆ ಹಾಕಬೇಕು ಎಂದು ಉದ್ದೇಶ ಹೊಂದಲಾಗಿದೆ. ಇಂತಹ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರೋತ್ಸಾಹ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.