ಗೋವಾ : ಸಾವಂತ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ : ಗಿರೀಶ್ ಚೋಡಣಕರ್
ಸಾವಂತ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ಗೋವಾ ರಾಜ್ಯ ಕಾಂಗ್ರೇಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್ ರಾಜ್ಯಪಾಲರಿಗೆ ಪತ್ರ
Team Udayavani, May 27, 2021, 8:09 PM IST
ಪಣಜಿ : ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆಡಳಿತ ಸರ್ಕಾರ ವಿಫಲವಾದ ಕಾರಣ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ಗೋವಾ ರಾಜ್ಯ ಕಾಂಗ್ರೇಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್ ರಾಜ್ಯಪಾಲ ಭಗತ್‍ಸಿಂ ಗ್ ಕೋಶ್ಯಾರಿ ರವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 31459 ಜನರು ಗುಣಮುಖ; 24214 ಹೊಸ ಪ್ರಕರಣ ಪತ್ತೆ
ರಾಜ್ಯದಲ್ಲಿ ವೆಂಟಿಲೇಟರ್ ಬೆಡ್, ಆಮ್ಲಜನಕ ಲಭ್ಯತೆಯಿಲ್ಲದೆಯೇ ಮತ್ತು ಅಗತ್ಯ ಔಷಧಿ, ಆಸ್ಪತ್ರೆ ಕೊರತೆಯಿಂದಾಗಿ 2000 ಕ್ಕೂ ಹೆಚ್ಚು ಜನರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ, ಇನ್ನೂ ಬಲಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ “ಭಿವಪಾಚಿ ಗರಜ್ ನಾ” (ಹೆದರುವ ಅಗತ್ಯವಿಲ್ಲ) ಎಂದು ಹೇಳುವ ಮೂಲಕ ಜನರಲ್ಲಿ ತಪ್ಪು ನಂಬಿಕೆಯನ್ನು ಸೃಷ್ಠಿಸುತ್ತಿದ್ದಾರೆ. ಇದರಿಂದಾಗಿ ದೇಶದ ಇತರ ರಾಜ್ಯಗಳಿಂದ ಪ್ರವಾಸಿಗರನ್ನು ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಿದರು ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಚೋಡಣಕರ್ ಉಲ್ಲೇಖಿಸಿದ್ದಾರೆ.
ಅಸಮರ್ಥ ಮುಖ್ಯಮಂತ್ರಿ ನೇತೃತ್ವದ ಪ್ರಸ್ತುತ ರಾಜ್ಯ ಸರ್ಕಾರವು ಭಾರತ ಸಂವಿಧಾನದ 21 ನೇಯ ಪರಿಚ್ಛೇದದ ಅಡಿಯಲ್ಲಿ ಪ್ರತಿಪಾದಿಸಿರುವ ಜನರ ಮೂಲಭೂತ ಹಕ್ಕನ್ನು ರಕ್ಷಿಸಲು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪತ್ರದ ಮೂಲಕ ಆಕ್ರೊಶ ಹೊರ ಹಾಕಿದ್ದು, ಮುಖ್ಯಮಂತ್ರಿ ಸಾವಂತ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಲ್ಲಿ ಪತ್ರದ ಮೂಲಕ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ : ಜಿಲ್ಲಾಧಿಕಾರಿ ಮುಗಿಲನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.