ಹೆಚ್ಚುತ್ತಿದೆ ಡೆಂಗ್ಯೂ ಸೋಂಕಿತರ ಪ್ರಮಾಣ


Team Udayavani, May 28, 2021, 4:00 AM IST

ಹೆಚ್ಚುತ್ತಿದೆ ಡೆಂಗ್ಯೂ ಸೋಂಕಿತರ ಪ್ರಮಾಣ

ಪುತ್ತೂರು: ಹಲವು ತಿಂಗಳು ಗಳಿನಿಂದ ಜನಜೀವನವನ್ನು ತಲ್ಲಣಗೊಳಿಸಿರುವ ಕೋವಿಡ್‌ ಪ್ರಕರಣ ನಿಯಂತ್ರಣಕ್ಕೆ ಬರುವ ಮೊದಲೇ ಜಿಲ್ಲೆಯಲ್ಲಿ ಡೆಂಗ್ಯೂ ಸಾಂಕ್ರಾಮಿಕ ಜ್ವರಬಾಧೆ ವಕ್ಕರಿಸಿದ್ದು ದೃಢ ಪ್ರಕರಣಗಳ ಸಂಖ್ಯೆ ವೃದ್ಧಿಯಾಗುತ್ತಿದೆ

ಕಳೆದ ಕೆಲವು ವರ್ಷಗಳಿಂದ ಬಾಧಿಸುತ್ತಿರುವ ಡೆಂಗ್ಯೂ ಈಗ ಕೊರೊನಾ ಕಾಲಘಟ್ಟದಲ್ಲಿ ಕಂಡು ಬಂದಿದೆ. ಈ ಎರಡಕ್ಕೂ ಏಕಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ಸಂಕಟ ಆರೋಗ್ಯ ಇಲಾಖೆಯದ್ದಾದರೆ, ಇವೆರಡರ ಮಧ್ಯೆ ಚಿಕಿತ್ಸೆ ಪಡೆಯಬೇಕಾದ ಸಂಕಟ ಜನರದ್ದಾಗಿದೆ. ಅಕಾಲಿಕ ಮಳೆ ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

59 ಪ್ರಕರಣ ದೃಢ  :

ದ.ಕ.ಜಿಲ್ಲೆಯಲ್ಲಿ ಈ ತನಕ 59 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. 910 ಶಂಕಿತ ಪ್ರಕರಣ ವರದಿಯಾಗಿದ್ದು ಅದಿನ್ನು ದೃಢ ಗೊಳ್ಳಬೇಕಿದೆ. ಪುತ್ತೂರಿನಲ್ಲಿ 14, ಸುಳ್ಯದಲ್ಲಿ 14, ಬೆಳ್ತಂಗಡಿ 5, ಬಂಟ್ವಾಳ 11, ಮಂಗಳೂರಿನಲ್ಲಿ 8, ಕಡಬದಲ್ಲಿ 7 ಪ್ರಕರಣಗಳು ದೃಢಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಪ್ರಕರಣ ಏರಿಕೆ ಹಂತದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ಹರಡುತ್ತಿರುವ ತೀವ್ರತೆ ಏರಿಕೆ ಕಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೌಸ್‌ ಇಂಡೆಕ್ಸ್‌ :

ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯ ಕರ್ತೆಯರು ಮನೆ ಮನೆ ಭೇಟಿ ಮಾಡುವ ಸಂದ ರ್ಭದಲ್ಲಿ ಹೌಸ್‌ ಇಂಡೆಕ್ಸ್‌ ಆಧಾರದಲ್ಲಿ ಡೆಂಗ್ಯೂ ಬಾಧಿತ ಪ್ರದೇಶ ನಿರ್ಧರಿಸುತ್ತಾರೆ. ಸರ್ವೇ ಮಾಡಿದ ಮನೆಗಳ ಪೈಕಿ ಲಾರ್ವಾ ಕಂಡು ಬಂದ ಮನೆಗಳನ್ನು ಒಟ್ಟು ಮನೆಗಳೊಂದಿಗೆ ಹೋಲಿಕೆ ಮಾಡಿ ಬಾಧಿತ ಪ್ರದೇಶವನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ 20 ಮನೆಗಳನ್ನು ಸರ್ವೇ ಮಾಡಿದಾಗ ಅದರಲ್ಲಿ 5 ಮನೆ ಪರಿಸರದಲ್ಲಿ ಲಾರ್ವಾ ಉತ್ಪಾದನೆ ಅಂಶ ಗೋಚರಿಸಿದರೆ ಆಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. 20 ರಲ್ಲಿ 1 ಮನೆಯಲ್ಲಿ ಲಕ್ಷಣ ಕಂಡು ಬಂದಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ಗುರುತಿಸಿ ರೋಗ ನಿಯಂತ್ರಣಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ.

ಫಾಗಿಂಗ್‌ ಸೂಕ್ತ :

ಡೆಂಗ್ಯೂ ಪ್ರಕರಣ ದೃಢಪಟ್ಟ ವ್ಯಕ್ತಿಯ ಪರಿಸರದಲ್ಲಿ 24 ತಾಸಿನೊಳಗೆ ಫಾಗಿಂಗ್‌ ಮೂಲಕ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಒಂದು ವಾರ ಬಿಟ್ಟು ಮಾಡಿದರೆ ಅದರಿಂದ ಪ್ರಯೋಜನ ಶೂನ್ಯ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜ್ವರ ಇಡೀ ಊರಿಗೆ ಹರಡುವ ಸಾಧ್ಯತೆ ಇದೆ.

ಲಾರ್ವಾ ನಾಶಕ್ಕೆ ಗಪ್ಪಿ ಮೀನು :

ಡೆಂಗ್ಯೂ, ಮಲೇರಿಯಾ ಲಾರ್ವಾಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಬಳಕೆಗೆ ಆರೋಗ್ಯ ಇಲಾಖೆ ವಿನಂತಿಸಿದೆ. ಇವುಗಳು ಲಾರ್ವಾ (ಸೊಳ್ಳೆಯ ಮೊಟ್ಟೆ)ಯನ್ನು ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲೇ ನಿಯಂತ್ರಣ ಮಾಡಲು ಸಾಧ್ಯವಿದೆ. 1 ಸೆ.ಮೀ.ಉದ್ದ ಇರುವ ಈ ಮೀನುಗಳಿಗೆ ಲಾರ್ವಾ ಗಳೇ ಆಹಾರ. ಪ್ರತೀ ತಾಲೂಕು ಆರೋಗ್ಯ ಇಲಾಖೆ ಯಲ್ಲಿ ಈ ಮೀನನ್ನು ಉಚಿತವಾಗಿ ನೀಡಲಾಗುತ್ತಿದ್ದು ಮನೆ, ವಠಾರದಲ್ಲಿ ನೀರು ನಿಲ್ಲುವ ಅಥವಾ ಸಂಗ್ರಹಿಸುವ ಸಾಧನಗಳಲ್ಲಿ ಈ ಮೀನನ್ನು ಸಾಕಬೇಕು ಎನ್ನುತ್ತದೆ ಆರೋಗ್ಯ ಇಲಾಖೆ.

 ಲಾರ್ವಾ ಉತ್ಪತ್ತಿಯಾಗಲು ಕಾರಣವಾಗುವ ಅಂಶಗಳನ್ನು ಗುರುತಿಸಿ ಅದರ ನಿಯಂತ್ರಣಕ್ಕೆ ಆದ್ಯತೆ ನೀಡುವುದೇ ಡೆಂಗ್ಯೂ ತಡೆಗೆ ಇರುವ ಉತ್ತಮ ದಾರಿ. ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಹರಡುವಿಕೆ ಪ್ರಮಾಣ ಏರಿಕೆ ಕಂಡಿದೆ. -ಡಾ| ನವೀನ್‌ ಚಂದ್ರ, ಜಿಲ್ಲಾ  ಮಲೇರಿಯಾ ನಿಯಂತ್ರಣ ಅಧಿಕಾರಿ, ಮಂಗಳೂರು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.