ಲಸಿಕೆ ಪಡೆದುಕೊಂಡವರಲ್ಲಿ ಪುತ್ತೂರು ತಾ|ಗೆ ಎರಡನೇ ಸ್ಥಾನ

Team Udayavani, May 28, 2021, 4:40 AM IST

ಲಸಿಕೆ ಪಡೆದುಕೊಂಡವರಲ್ಲಿ ಪುತ್ತೂರು ತಾ|ಗೆ ಎರಡನೇ ಸ್ಥಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರತೆ ನಡುವೆಯೇ ಲಸಿಕ ಅಭಿಯಾನ ಕೂಡ ವೇಗ ಪಡೆಯುತ್ತಿದೆ. ಜಿಲ್ಲೆಯ ಇತರ ಭಾಗಗಳಿಗೆ ಹೋಲಿಸಿದರೆ ಲಸಿಕೆ ಪಡೆದುಕೊಂಡವರಲ್ಲಿ ಮಂಗಳೂರಿಗರು ಮುಂದಿದ್ದಾರೆ.

ಮಂಗಳೂರಿನಲ್ಲಿ 45ರಿಂದ 59 ವರ್ಷ ದೊಳಗಿನ ಶೇ. 26.81ರಷ್ಟು ಮಂದಿ ಮೊದಲನೇ ಡೋಸ್‌, ಶೇ. 17.27ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಅದೇರೀತಿ, 60 ವರ್ಷ ಮೇಲ್ಪಟ್ಟ ಶೇ. 61.15ರಷ್ಟು ಮಂದಿ ಮೊದಲನೇ ಡೋಸ್‌, ಶೇ. 46.12ರಷ್ಟ ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪುತ್ತೂರು ತಾಲೂಕು ಇದ್ದು, ಇಲ್ಲಿನ 45-59 ವರ್ಷದೊಳಗಿನ ಶೇ. 29.26ರಷ್ಟು ಮಂದಿ ಮೊದಲ ಡೋಸ್‌, ಶೇ.14.01ರಷ್ಟು ಮಂದಿ 2ನೇ ಡೋಸ್‌, 60 ವರ್ಷ ಮೇಲ್ಪಟ್ಟ ಶೇ. 63.74ರಷ್ಟು ಮಂದಿ ಮೊದಲ ಡೋಸ್‌ ಮತ್ತು ಶೇ. 36ರಷ್ಟು 2ನೇ ಡೋಸ್‌ ಲಸಿಕೆ ಪ್ರಗತಿ ಕಂಡಿದೆ.

ಬಂಟ್ವಾಳ ತಾಲೂಕಿನಲ್ಲಿ 45-59 ವರ್ಷದೊಳಗಿನ ಶೇ. 29.58ರಷ್ಟು ಮಂದಿ ಮೊದಲ ಡೋಸ್‌, ಶೇ. 18.89ರಷ್ಟು ಮಂದಿ ಎರಡನೇ ಡೋಸ್‌, 60 ವರ್ಷ ಮೇಲ್ಪಟ್ಟ ಶೇ. 57.82ರಷ್ಟು ಮಂದಿ ಮೊದಲ ಡೋಸ್‌ ಮತ್ತು ಶೇ.41.69 ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಶೇ. 25.73ರಷ್ಟು ಮಂದಿ ಮೊದಲ ಡೋಸ್‌, ಶೇ. 13.65ರಷ್ಟು ಮಂದಿ ಎರಡನೇ ಡೋಸ್‌, 60 ವರ್ಷ ಮೇಲ್ಪಟ್ಟ 50.74ರಷ್ಟು ಮಂದಿ ಮೊದಲ ಡೋಸ್‌, ಶೇ. 35.86ರಷ್ಟು ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಸುಳ್ಯ ತಾಲೂಕಿನ 45ರಿಂದ 59 ವರ್ಷದೊಳಗಿನ ಶೇ. 27.80 ಮಂದಿ ಮೊದಲ ಡೋಸ್‌, ಶೇ. 13.81ರಷ್ಟು ಮಂದಿ ಎರಡನೇ ಡೋಸ್‌, ಶೇ. 57.78ರಷ್ಟು ಮಂದಿ ಮೊದಲ ಡೋಸ್‌, ಶೇ. 35.47ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಮಂಗಳೂರಿಗರೇ ಹೆಚ್ಚೇಕೆ? :

ದ.ಕ. ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಮಂಗಳೂರು ನಗರದಲ್ಲಿ ಹೆಚ್ಚಿನ ಆಸ್ಪತ್ರೆಗಳು, ಪ್ರಾ. ಆರೋಗ್ಯ ಕೇಂದ್ರಗಳಿವೆ. ಇನ್ನು, ಸಾರ್ವಜನಿಕರ ಮನೆಯ ಬಳಿಯೇ ಲಸಿಕೆ ಅಭಿಯಾನ ನಡೆಯುವ ಕಾರಣ ತೊಂದರೆ ಇರುವುದಿಲ್ಲ. ಆದರೆ ಗ್ರಾಮಾಂತರ ಭಾಗದಲ್ಲಿ ಲಸಿಕೆ ಕೇಂದ್ರಕ್ಕೆ ಕಿ.ಮೀ. ಕ್ರಮಿಸಬೇಕಾದ ಅನಿವಾರ್ಯವಿದೆ. ಅಲ್ಲದೆ ಲಸಿಕೆ ಅಭಿಯಾನದ ಬಗ್ಗೆ ಅಷ್ಟೊಂದು ಅರಿವಿನ ಕೊರತೆ ಇದೆ. ಹಾಗಾಗಿ ನಗರ ಪ್ರದೇಶದ ಮಂದಿ ಹೆಚ್ಚಾಗಿ ಲಸಿಕೆ ಪಡೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಅದರಲ್ಲಿಯೂ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಅಭಿಯಾನ ಆರಂಭಗೊಂಡಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಕೊವಿಶೀಲ್ಡ್‌ ವಿತರಣೆಯೇ ಹೆಚ್ಚು :

ಜಿಲ್ಲೆಯಲ್ಲಿ ಕೊವ್ಯಾಕ್ಸಿನ್‌ಗೆ ಹೋಲಿಕೆ ಮಾಡಿದರೆ ಕೊವಿಶೀಲ್ಡ್‌ ಲಸಿಕೆ ಪಡೆದವರೇ ಹೆಚ್ಚಿನ ಮಂದಿ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನದ ಮೊದಲ ಕೆಲವು ತಿಂಗಳು ಮಾತ್ರ ಕೊವ್ಯಾಕ್ಸಿನ್‌ ಲಸಿಕೆ ಲಭ್ಯವಿತ್ತು. ಬಳಿಕ ಹೆಚ್ಚಾಗಿ ಕೊವಿಶೀಲ್ಡ್‌ ಲಸಿಕೆಯೇ ಸರಬರಾಜು ಆಗುತ್ತಿತ್ತು. ಪರಿಣಾಮ ಈ ಲಸಿಕೆ ಫಲಾನುಭವಿಗಳೇ ಹೆಚ್ಚಿನ ಮಂದಿ ಇದ್ದಾರೆ. ಜಿಲ್ಲೆಯಲ್ಲಿ ಈವರೆಗೆ 45ರಿಂದ 59 ವರ್ಷದೊಳಗಿನ 99,351 ಮಂದಿ ಕೊವಿಶೀಲ್ಡ್‌ ಮೊದಲ ಡೋಸ್‌ ಮತ್ತು 14,105 ಮಂದಿ ಎರಡನೇ ಡೋಸ್‌ ಮತ್ತು 60 ವರ್ಷ ಮೇಲ್ಪಟ್ಟ 1,01,112 ಮಂದಿ ಮೊದಲ ಡೋಸ್‌ ಮತ್ತು 41,338 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನ 15,400 ಮಂದಿ ಕೊವ್ಯಾಕ್ಸಿನ್‌ ಮೊದಲ ಡೋಸ್‌, 4,727 ಮಂದಿ ಎರಡನೇ ಡೋಸ್‌, 60 ವರ್ಷ ಮೇಲ್ಪಟ್ಟ 18,196 ಮಂದಿ ಮೊದಲ ಡೋಸ್‌ 8,741 ಮಂದಿ ಎರಡನೇ ಡೋಸ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಕೊರೊನಾ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಲಸಿಕೆ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕೇಂದ್ರ, ರಾಜ್ಯ ಸರಕಾರದಿಂದಲೂ ಲಸಿಕೆ ಬರುತ್ತಿದೆ. ಹಂತ ಹಂತವಾಗಿ ಲಸಿಕೆ ಅಭಿಯಾನ ಮತ್ತಷ್ಟು ಪ್ರಗತಿ ಕಾಣುತ್ತದೆ. -ಡಾ| ರಾಜೇಶ್‌, -ಆರ್‌ಸಿಎಚ್‌ ಅಧಿಕಾರಿ, ದ.ಕ. ಜಿಲ್ಲೆ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.