ಮಿನಿ ಲಾಕ್‌ಡೌನ್‌ನತ್ತ ಹಳ್ಳಿಗಳ ಚಿತ್ತ


Team Udayavani, May 28, 2021, 5:00 AM IST

ಮಿನಿ ಲಾಕ್‌ಡೌನ್‌ನತ್ತ ಹಳ್ಳಿಗಳ ಚಿತ್ತ

ಕುಂದಾಪುರ:  ರಾಜ್ಯ ಸರಕಾರ ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಪ್ರಕರಣ ತಡೆಗೆ ಕಠಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪುರಸಭೆಯೂ ಸೇರಿದಂತೆ ವಿವಿಧ ಪಂಚಾಯತ್‌ಗಳು ಮಿನಿ ಲಾಕ್‌ಡೌನ್‌ ಮಾಡಿಕೊಳ್ಳುವ ಊರನ್ನು ಕೋವಿಡ್ ಮುಕ್ತ ಮಾಡುವಲ್ಲಿ ಶ್ರಮಿಸುತ್ತಿವೆ. ರಾಜ್ಯ ಸರಕಾರದ ರಿಯಾಯಿತಿಯನ್ನು ನಿರಾಕರಿಸಿ ಕೆಲವೆಡೆ ಪೂರ್ಣ ಲಾಕ್‌ಡೌನ್‌, ಕೆಲವೆಡೆ ನಿರ್ದಿಷ್ಟ ದಿನಗಳ ಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ.

ಏನಿದು ಮಿನಿ ಲಾಕ್‌ಡೌನ್‌? :

ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅಂಗಡಿಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಜನ ಈ ಅವಧಿಯಲ್ಲಿ ಹೆಚ್ಚಾಗಿ ತಿರುಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಅವಧಿಯನ್ನು ಕಡಿತಗೊಳಿಸುವುದು ಹಾಗೂ ದೂರದ ಊರಿನವರು ಖರೀದಿಗೆ ಆಗಮಿಸುವ ಬದಲು ಸ್ಥಳೀಯರಿಗಷ್ಟೇ ಅವಕಾಶ ನೀಡು ವುದು. ಗ್ರಾಮದ ಗಡಿ ಭಾಗಗಳಲ್ಲಿ ಬ್ಯಾರಿಕೇಡ್‌ ಹಾಕಿ ಅಲ್ಲಿ ಪೊಲೀಸ್‌, ಟಾಸ್ಕ್ಫೋರ್ಸ್‌ ಸಮಿತಿಯವರು, ಪಂಚಾಯತ್‌ ಅಧ್ಯಕ್ಷರು, ಸದಸ್ಯರು ನಿಲ್ಲುವುದು. ಈ ಮೂಲಕ ಅನಗತ್ಯ ತಿರುಗಾಟಕ್ಕೆ ಬರುವವರನ್ನು ಮರಳಿ ಕಳುಹಿಸುವುದು. ಅನಗತ್ಯವಾಗಿ ಬೇರೆ ಊರಿನವರು ಕೂಡ ಗ್ರಾಮಕ್ಕೆ ಬರದಂತೆ ತಡೆಯುವುದು.

ವಿನಾಯಿತಿ :

ಹಾಲು ಖರೀದಿಗೆ ಅವಕಾಶ ನೀಡಲಾಗಿದೆ. ತರಕಾರಿ ಹಾಗೂ ದಿನಸಿ ಖರೀದಿಗೆ ಮೂರು ನಾಲ್ಕು ಮನೆಗೊಬ್ಬರಂತೆ, ಕೆಲವೆಡೆ ಮನೆಗೇ ತಲುಪಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಮೆಡಿಕಲ್‌ ಹಾಗೂ ವೈದ್ಯಕೀಯ ಕಾರಣಗಳಿಗೆ, ಲಸಿಕೆ ಹಾಕಲು ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ತುರ್ತು ಸೇವೆಗೆ ಸ್ಥಳೀಯ ಪಂಚಾಯತ್‌ ಸದಸ್ಯರು, ಟಾಸ್ಕ್ಫೋರ್ಸ್‌ನವರನ್ನು ಸಂಪರ್ಕಿಸಬಹುದು.

ಏನೆಲ್ಲ  ನಿರ್ಬಂಧ :

ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿಗೆ ಸುತ್ತಲಿನ ಊರಾದ ಕೋಟೇ ಶ್ವರ, ಗೋಪಾಡಿ, ಬೀಜಾಡಿ, ತಲ್ಲೂರು ಮೊದಲಾದೆಡೆಯಿಂದ ಬರುವುದನ್ನು ಪೊಲೀಸರು ನಿಷೇಧಿಸಿದ್ದಾರೆ. ಚಿತ್ತೂರು ಪಂಚಾಯತ್‌ ವ್ಯಾಪ್ತಿಯಲ್ಲಿ  ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹೋಂ ಐಸೊಲೇಶನ್‌ನಲ್ಲಿ ಕಡ್ಡಾಯವಾಗಿ ಇರಬೇಕು. ಆದ್ದರಿಂದ ಅಂತಹ ಮನೆಗಳಿಗೆ ಗ್ರಾಮ ಪಂಚಾಯತ್‌ನಿಂದ ಗುರುತಿಸಲಾದ ರಿûಾಗಳ ಮೂಲಕ ಪಡಿತರ ಸಾಮಗ್ರಿಗಳನ್ನು ತಲುಪಿಸಲು ಅವಕಾಶ ಮಾಡಿಕೊಡಲಾಗಿದೆ.

ಆಲೂರು ಮತ್ತು ಹಕೂìರು ಗ್ರಾಮದಲ್ಲಿ 150ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುತ್ತವೆ. 70ಕ್ಕೂ  ಹೆಚ್ಚು ಸಕ್ರಿಯ ಪ್ರಕರಣಗಳಿದ್ದು 4 ಮಂದಿ  ಮೃತಪಟ್ಟಿದ್ದಾರೆ.

ಎಲ್ಲೆಲ್ಲಿ? :

ಪುರಸಭೆ ವ್ಯಾಪ್ತಿ, ಆಲೂರು, ಹಕ್ಕೂರು, ಚಿತ್ತೂರು, ಸಿದ್ದಾಪುರ, ಜಡ್ಕಲ್‌, ಮುದೂರು, ಇಡೂರು ಕುಂಜ್ಞಾಡಿ, ವಂಡ್ಸೆ  ಗ್ರಾಮಗಳ ವ್ಯಾಪ್ತಿಯಲ್ಲಿ.

ಮೇ  28, 29, 30ರಂದು ಮತ್ತು ಜೂ. 3, 4, 5 ಹಾಗೂ 6ನೇ ತಾರೀಖೀನಂದು ಆಲೂರು ಮತ್ತು ಹಕೂìರು ಗ್ರಾಮದ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಕೊರೊನಾ ಬಾಧಿತರಿಗೆ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ವೈದ್ಯಕೀಯ ಸೇವೆ ಮತ್ತು ಬೆಳಗ್ಗೆ 6 ರಿಂದ 8ರ ವರೆಗೆ ಹಾಲು ಹೊರತುಪಡಿಸಿ ಇತರ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗುತ್ತಿದೆ.  ಸಿದ್ದಾಪುರದಲ್ಲಿ ಬುಧವಾ ರದಿಂದ ಇದು ಜಾರಿಗೆ ಬಂದಿದೆ. 8 ಗಂಟೆವರೆಗೆ ಹಾಲು ಹೊರತುಪಡಿಸಿ ಇತರ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ದಿನಸಿ, ತರಕಾರಿಗೆ ಬೇರೆ ಊರಿನವರು ಬರುವುದು ನಿಷೇಧಿಸಲಾಗಿದೆ. ಸಿದ್ದಾಪುರಕ್ಕೆ ಸುತ್ತಲಿನ 8 ಗ್ರಾಮಗಳಿಂದ ಆಸ್ಪತ್ರೆ ಮೊದಲಾದ ಸೌಕರ್ಯಕ್ಕಾಗಿ ಬರುತ್ತಾರೆ. ಅಂತಹವರನ್ನು ಹೊರತುಪಡಿಸಿ ತುರ್ತು ಕಾರಣ ಇಲ್ಲದೇ ಯಾರನ್ನೂ ಗ್ರಾಮದೊಳಗೆ ಬಿಡಲಾಗುತ್ತಿಲ್ಲ.

ವಂಡ್ಸೆಯಲ್ಲಿ ಮೇ 29ರಿಂದ ಸ್ವಯಂಘೋಷಿತ ಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು ಪ್ರತೀ ಸೋಮವಾರ, ಗುರುವಾರ ಅಗತ್ಯವಸ್ತು ಖರೀದಿಗೆ ಅವಕಾಶ ನೀಡ‌ಲಾಗಿದೆ. ಇಡೂರು ಕುಂಜ್ಞಾಡಿ ಗ್ರಾಮದಲ್ಲಿ ಮೇ 27ರಿಂದ ಮೇ 30ರವರೆಗೆ ಸ್ವಯಂ ಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಬೆಳಗ್ಗೆ 8.30ರ ವರೆಗೆ ಹಾಲು ಹೊರತುಪಡಿಸಿ ಇತರ ಯಾವುದೇ ಅಂಗಡಿಗಳು 4 ದಿನಗಳ ಕಾಲ ತೆರೆಯುವುದಿಲ್ಲ. ಜಡ್ಕಲ್‌, ಮುದೂರಿನಲ್ಲಿ ಕೂಡ ಬಂದ್‌ ವಾತಾವರಣ, ನಿರ್ಬಂಧ ಆರಂಭಿಸಲಾಗಿದೆ. ಹೆಮ್ಮಾಡಿಯಲ್ಲಿ ಸ್ವಯಂ ಲಾಕ್‌ಡೌನ್‌ ನಿರ್ಧಾರದ ಕಡೆಗೆ ಒಲವು ಹರಿಸಲಾಗಿದೆ. ಬೆಳ್ವೆ ಮೊದಲಾದೆಡೆ ಪ್ರಕರಣ ಹೆಚ್ಚಿದ್ದರೂ ಇಂತಹ ಪ್ರಕ್ರಿಯೆ ನಡೆದಿಲ್ಲ.

ಪರಿಣಾಮ :

ದಿನ ಬೆಳಗಾದರೆ ಏನಾದರೂ ಕಾರಣ ಹಿಡಿದು ಅಂಗಡಿ ಕಡೆಗೆ ಬರುತ್ತಿದ್ದವರ ಸಂಖ್ಯೆ ಇಳಿದಿದೆ. ಸಿದ್ದಾಪುರದಂತಹ ಪ್ರದೇಶದಲ್ಲಿ 400-500 ಜನ ಆಗಮಿಸುತ್ತಿದ್ದವರ ಸಂಖ್ಯೆ ಈಗ 150ಕ್ಕೆ ಇಳಿದಿದೆ. ಜನ ಕೂಡ ಗ್ರಾ.ಪಂ.ನ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕೊರೊನಾಮುಕ್ತ ಊರಾಗಲು ಜನ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.

ಜನರು ಅಗತ್ಯ ವಸ್ತು ಖರೀದಿಗೆ ಸ್ಥಳೀಯವಾಗಿಯೇ ಹೋಗಬೇಕು. ಅನಗತ್ಯವಾಗಿ ಸಂಚಾರ ಮಾಡಬಾರದು ಎಂದೇ  ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸ್ಥಳೀಯರುನೇತೃತ್ವ ವಹಿಸಿದಾಗಅನಗತ್ಯ ಓಡಾಟಕ್ಕೆ ಕಡಿವಾಣ ಬೀಳುತ್ತದೆ. ಪ್ರಕರಣ ಜಾಸ್ತಿ ಇದ್ದಲ್ಲಿ ಇಂತಹ ಕ್ರಮ ಕೈಗೊಂಡರೆ ಅನುಕೂಲ. ಜಿಲ್ಲಾಧಿಕಾರಿ, ಉಡುಪಿ

ಪರಿಚಿತರೇ ಚೆಕ್‌ಪೋಸ್ಟ್‌ಗಳಲ್ಲಿ ನಿಲ್ಲುವ ಕಾರಣ ಅನಗತ್ಯ ನೆಪದಲ್ಲಿ ಪೇಟೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಅಗತ್ಯವಸ್ತು ಖರೀದಿ  ಕೂಡ ಒಂದಷ್ಟು ಮನೆಯವರಿಗೆ ಒಟ್ಟಾಗಿ  ಒಬ್ಬರೇ ಖರೀದಿಸಿ ಒಯ್ಯುತ್ತಾರೆ.  ರವೀಂದ್ರ ರಾವ್‌, ಪಿಡಿಒ, ಸಿದ್ದಾಪುರ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

ಬೆಳ್ಮಣ್‌: ಉದ್ಘಾಟನೆಗೆ ಮುನ್ನವೇ ಕಣ್ಮುಚ್ಚುವುದೇ ನೀರಿನ ಘಟಕ!

ಬೆಳ್ಮಣ್‌: ಉದ್ಘಾಟನೆಗೆ ಮುನ್ನವೇ ಕಣ್ಮುಚ್ಚುವುದೇ ನೀರಿನ ಘಟಕ!

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.