ದಟ್ಟಣೆ ಹೆಚ್ಚಿದ್ದರೆ ಟೋಲ್ ಶುಲ್ಕ ವಿನಾಯಿತಿ: ಎನ್ಎಚ್ಎಐ
Team Udayavani, May 28, 2021, 6:53 AM IST
ಹೊಸದಿಲ್ಲಿ: ಇನ್ನು ಮುಂದೆ, ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ಗಿಂತಲೂ ದೂರದವರೆಗೆ ವಾಹನಗಳು ಸರತಿಯಲ್ಲಿ ನಿಂತಿದ್ದರೆ, ಮುಂಭಾಗದಲ್ಲಿರುವ ವಾಹನಗಳಿಗೆ ಟೋಲ್ನಿಂದ ವಿನಾಯಿತಿ ನೀಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಇಂಥದ್ದೊಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ದೇಶದ ಎಲ್ಲ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲೂ ಈ ನಿಯಮ ಅನುಷ್ಠಾನಗೊಳ್ಳಲಿದೆ.
ಹಳದಿ ಗೆರೆ ನಿಯಮ: ಪ್ರತಿಯೊಂದು ಟೋಲ್ ಲೇನ್ನಲ್ಲೂ ಟೋಲ್ ಬೂತ್ನಿಂದ 100 ಮೀಟರ್ ದೂರದಲ್ಲಿ ಹಳದಿ ಬಣ್ಣದ ಗೆರೆಯೊಂದನ್ನು ಎಳೆಯಲಾಗುತ್ತದೆ. ಒಂದು ವೇಳೆ, ಈ ಗೆರೆಗಿಂತಲೂ ಆಚೆ ವಾಹನಗಳು ಸರತಿಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದರೆ, ಹಳದಿ ಬಣ್ಣದ ಗೆರೆಯ ಒಳಗೆ ಇರುವ ವಾಹನಗಳು ಟೋಲ್ ಪಾವತಿಸದೇ ಮುಂದೆ ಸಾಗಬಹುದು. ಗೆರೆಯ ಹೊರಗಿರುವ ವಾಹನಗಳು ಮಾತ್ರ ಟೋಲ್ ಪಾವತಿಸಬೇಕು ಎಂದು ಹೊಸ ನಿಯಮ ಹೇಳುತ್ತದೆ. ಅಲ್ಲದೆ, ಒಂದು ವಾಹನದಿಂದ ಟೋಲ್ ಪಡೆಯುವ ಪ್ರಕ್ರಿಯೆ 10 ಸೆಕೆಂಡುಗಳಲ್ಲಿ ಮುಗಿಯಬೇಕು ಎಂದೂ ಸೂಚಿಸಲಾಗಿದೆ. ಟೋಲ್ನಲ್ಲಿ ಕಾಯುವ ಸಮಯವನ್ನು ತಪ್ಪಿಸಲು ಹಾಗೂ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲೆಂದು ಈ ನಿಯಮ ಜಾರಿ ಮಾಡಲಾಗಿದೆ. ದಟ್ಟಣೆ ತಪ್ಪಿಸಲೆಂದೇ ಈಗಾಗಲೇ ಫಾಸ್ಟಾಗ್ ಕಡ್ಡಾಯ ಮಾಡಲಾಗಿದ್ದರೂ ಟೋಲ್ಗಳಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.