90 ದಿನಗಳಲ್ಲಿ ಸೋಂಕಿನ ಮೂಲ ತಿಳಿಯಿರಿ: ಬೈಡೆನ್
Team Udayavani, May 28, 2021, 6:55 AM IST
ವಾಷಿಂಗ್ಟನ್: ಜಗತ್ತಿಗೆ ಕೊರೊನಾ ಸೋಂಕು ಹೇಗೆ ತಟ್ಟಿತು ಎಂಬ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಪ್ರಯತ್ನ ದುಪ್ಪಟ್ಟುಗೊಳಿಸಿ 90 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಹೀಗೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದೇಶದ ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.
ಚೀನದ ವುಹಾನ್ ಲ್ಯಾಬ್‌ನಿಂದಲೇ ವೈರಾಣು ಸೋರಿಕೆಯಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಯಲೇಬೇಕು ಎಂಬ ವಿಶ್ವದ ರಾಷ್ಟ್ರಗಳ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವಂತೆಯೇ ಈ ಬೈಡೆನ್ ಈ ಸೂಚನೆ ನೀಡಿದ್ದಾರೆ. ಯಾವ ಆಧಾರ ಮತ್ತು ಕ್ಷೇತ್ರಗಳಲ್ಲಿ ತನಿಖೆ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸುವಂತೆಯೂ ಅವರು ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
ಇದರ ಜತೆಗೆ 2019ರ ನವೆಂಬರ್‌ನಲ್ಲಿ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿನ ಕೆಲವು ಸಂಶೋಧಕರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಬಗ್ಗೆ ಹಲವು ಸಂಶೋಧನಾತ್ಮಕ ವರದಿಗಳೂ ಪ್ರಕಟವಾಗಿರುವ ಬೆನ್ನಲ್ಲಿಯೇ ಈ ನಿರ್ದೇಶನ ಪ್ರಕಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.