ನನ್ನ ಆದ್ಯತೆ ಕೋವಿಡ್ ನಿಯಂತ್ರಣ: ಬಿಎಸ್‌ವೈ
Team Udayavani, May 28, 2021, 7:10 AM IST
ಬೆಂಗಳೂರು: ಕೋವಿಡ್ ಮಧ್ಯೆಯೇ ರಾಜ್ಯದಲ್ಲಿ ನಡೆಯುತ್ತಿರುವ “ಸಿಎಂ ಬದಲಾವಣೆ ಸುದ್ದಿ’ಗಳ ಬಗ್ಗೆ ಗರಂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, “ದಿಲ್ಲಿಗೆ ಹೋದವರಿಗೆ ವರಿಷ್ಠರು ಸರಿಯಾದ ಉತ್ತರವನ್ನೇ ನೀಡಿ ಕಳುಹಿಸಿದ್ದಾರೆ’ ಎಂದಿದ್ದಾರೆ. ಆ ಮೂಲಕ ತಮ್ಮದೇನಿದ್ದರೂ ಕೊರೊನಾ ನಿಯಂತ್ರಣದ ಕೆಲಸ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆಗಾಗಿ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸುತ್ತಿರುವವರು ಮತ್ತು ದಿಲ್ಲಿಯ ಕೆಲವು ವರಿಷ್ಠರ ವಿರುದ್ಧವೂ ಸಿಎಂ ತಮ್ಮ ಆಪ್ತರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಪಕ್ಷದಲ್ಲಿ ಇನ್ನೂ ಪ್ರಬಲರು ಎಂಬ ಸಂದೇಶವನ್ನೂ ಆಪ್ತರ ಮೂಲಕವೇ ರವಾನಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಇದುವರೆಗೆ ಮೌನವಾಗಿದ್ದ ಸಿಎಂ, ಇದೇ ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. “ಈಗೇನಿದ್ದರೂ ನನ್ನ ಮುಂದೆ ಇರುವುದು ಕೊರೊನಾ ಪರಿಸ್ಥಿತಿ ನಿರ್ವಹಣೆ. ಜನರ ಹಿತ ಕಾಪಾಡುವುದು ನನ್ನ ಆದ್ಯತೆ. ಯಾರು ಎಲ್ಲಿಗೆ ಹೋಗಿದ್ದರೋ ಅವರಿಗೆ ವರಿಷ್ಠರು ತಕ್ಕ ಉತ್ತರ ಕೊಟ್ಟು ಕಳುಹಿಸಿದ್ದಾರೆ’ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕುರಿತು ಬಹಿರಂಗ ವಾಗಿ ಚರ್ಚಿಸುವುದಿಲ್ಲ ಎಂದರು.
ಬೆಂಬಲಿಗರ ಬಲ :
ಸಿಎಂ ಬದಲಾವಣೆಗಾಗಿ ಲಾಬಿ ನಡೆಸುತ್ತಿರುವವರ ವಿರುದ್ಧ ಸಿಎಂ ಬೆಂಬಲಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಗ್ಧಾಳಿ ನಡೆಸಿದ್ದಾರೆ. ಮೆಗಾ ಸಿಟಿ ಯೋಜನೆಯ ವಂಚನೆ ಮತ್ತು ಅವರ ಹಿನ್ನೆಲೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲು ಹಾಗೂ ಸಂಪುಟದಿಂದ ಅವರನ್ನು ಕೈ ಬಿಡುವಂತೆ ಒತ್ತಾಯಿಸಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ತೇರದಾಳ ಶಾಸಕ ಸಿದ್ದು ಸವದಿ ಕೂಡ ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಮೂರು ಪಕ್ಷಗಳ ಸರಕಾರ :
ರಾಜ್ಯದಲ್ಲಿ ಶುದ್ಧ ಬಿಜೆಪಿ ಸರಕಾರವಿಲ್ಲ, ಜೆಡಿಎಸ್-ಕಾಂಗ್ರೆಸ್ ಮಿಶ್ರಿತ ಬಿಜೆಪಿ ಸರಕಾರ ಇದೆ ಎಂದು ಸಿ.ಪಿ. ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವೈಯಕ್ತಿಕ ವಾಗಿ ನನಗೆ ಕೆಲವು ವಿಷಯಗಳಲ್ಲಿ ನೋವು ಉಂಟಾಗಿದ್ದು, ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ನನ್ನ ಖಾತೆಯಲ್ಲಿ ನನ್ನ ಮಗ ನಿಗೆ ಅಧಿಕಾರ ಚಲಾಯಿಸಲು ಬಿಡುವುದಿಲ್ಲ. ಹಾಗೆಯೇ ಸಿಎಂ ಹೆಸರಿನಲ್ಲಿ ಮತ್ತೂಬ್ಬರು ಅಧಿಕಾರ ಚಲಾಯಿಸುವುದನ್ನು ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ಪ್ರದರ್ಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.