ರಕ್ಷಿತ್ ಶೆಟ್ಟಿ ಬರ್ತ್ಡೇಗೆ ಚಾರ್ಲಿ ಟೀಸರ್
Team Udayavani, May 28, 2021, 10:00 AM IST
ನಟ ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಈ ಸಿನಿಮಾದಿಂದ ಈಗ ಒಂದು ಅಪ್ಡೇಟ್ ಬಂದಿದೆ. ಚಿತ್ರದ ಟೀಸರ್ ಬಿಡುಗಡೆ ಕುರಿತು. ಹೌದು, “777 ಚಾರ್ಲಿ’ ಚಿತ್ರದ ಟೀಸರ್ ಜೂನ್ 06 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬ.
ಜೂನ್ 06 ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವಿದ್ದು, ಬರ್ತ್ ಡೇಗೆ ಟೀಸರ್ ಗಿಫ್ಟ್ ಮಾಡಲು ಚಿತ್ರ ತಂಡ ಯೋಚಿಸಿದೆ. “ಚಾರ್ಲಿ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ … ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ, ಚಿತ್ರದ ಟೀಸರ್ ಕೂಡಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು, 777 ಚಾರ್ಲಿ’ ಚಿತ್ರದ ಕಾಶ್ಮೀರ ಭಾಗದ ಅಂತಿಮ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಕೆಲ ಪ್ಯಾಚ್ ವರ್ಕ್ ಮಾತ್ರ ಬಾಕಿಯಿದ್ದು, ಅದನ್ನು ಬೆಂಗಳೂರಿನಲ್ಲಿ ಮುಗಿಸುವ ಯೋಜನೆಯಿದೆ. ಪ್ಯಾಚ್ ವರ್ಕ್ ಕೆಲಸ ಮುಗಿಸಿದರೆ “777 ಚಾರ್ಲಿ’ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ. ಈಗಾಗಲೇ ಸಿನಿಮಾದ ಬಹು ತೇಕ ಪೋಸ್ಟ್ ಪೊ›ಡಕ್ಷನ್ ಕೆಲಸಗಳು ಮುಕ್ತಾಯವಾಗಿದೆ. ಡಬ್ಬಿಂಗ್ ಸಹ ಮುಕ್ತಾಯವಾಗಿದೆ.
ಸುಮಾರು 160ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಕಿರಣ್ ರಾಜ್, “ನಾಯಕ ನಟ ರಕ್ಷಿತ್ ಶೆಟ್ಟಿ ಜೊತೆಗೆ ಶ್ವಾನವೊಂದು ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದೆ. ನಾವು ಶ್ವಾನದ ಮೂಡ್ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಕೆಲವೊಮ್ಮೆ ಎಲ್ಲಾ ಸಿದ್ಧತೆಯೊಂದಿಗೆ ಸೆಟ್ಗೆ ಹೋದರೆ ಆಗ ನಾಯಿ ಪರ್ಫಾರ್ಮ್ ಮಾಡುತ್ತಿರಲಿಲ್ಲ. ಹೀಗಾಗಿ ನಾವು ಅಂದುಕೊಂಡ ಸ್ಪೀಡ್ಗೆ ಚಿತ್ರೀಕಣ ಮಾಡಲು ಸಾಧ್ಯವಾಗಿಲ್ಲ. ಜೊತೆಗೆಯಾವ ವಿಚಾರದಲ್ಲೂ ನಾವು ಕಾಂಪ್ರಮೈಸ್ ಆಗಿಲ್ಲ. ಅದು ಟೀಸರ್ ನೋಡಿದಾಗ ಗೊತ್ತಾಗಲಿದೆ’ ಎನ್ನುತ್ತಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.