ಬಿಗ್‌ಬಾಸ್ಕೆಟ್ ಮಾಲೀಕತ್ವ ‘ಟಾಟಾ’ ಹೆಗಲಿಗೆ : ಶೇ. 64.3 ಷೇರು ಖರೀದಿಸಿದ ಟಾಟಾ ಡಿಜಿಟಲ್
Team Udayavani, May 28, 2021, 7:47 PM IST
ನವದೆಹಲಿ: ಆನ್‌ಲೈನ್ ಮೂಲಕ ದಿನಸಿ, ಹಣ್ಣು-ತರಕಾರಿ ಸರಬರಾಜು ಮಾಡುವ ಖ್ಯಾತ ಸಂಸ್ಥೆಯಾದ, ಚೀನಾದ ಅಲಿಬಾಬಾ ಸಂಸ್ಥೆಯ ಬೆಂಬಲಿತ “ಬಿಗ್ ಬ್ಯಾಸ್ಕೆಟ್’ನ ಶೇ. 64.3 ಷೇರುಗಳನ್ನು ಟಾಟಾ ಸನ್ಸ್ ಸಂಸ್ಥೆಯ ಮಾಲೀಕತ್ವದ ಟಾಟಾ ಡಿಜಿಟಲ್ ಸಂಸ್ಥೆ ಖರೀದಿಸಿದೆ. ಈ ಮೂಲಕ, ಆ ಸಂಸ್ಥೆಯ ಮೇಲೆ ಟಾಟಾ ಕಂಪನಿ ಒಡೆತನ ಸಾಧಿಸಿದೆ.
ಲಾಕ್‌ಡೌನ್, ಕೊರೊನಾ ನಿರ್ಬಂಧಗಳು ಪರಿಚಯಗೊಂಡ ನಂತರ ದೇಶೀಯ ಇ-ಕಾಮರ್ಸ್ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆಯಾಗಿದೆ. ಅದರಲ್ಲೂ ಆನ್‌ಲೈನ್ ಮೂಲಕ ದಿನಸಿ ಪದಾರ್ಥಗಳನ್ನು ಖರೀದಿಸುವಲ್ಲಿ ಜನರು ಹೆಚ್ಚಿನ ಉತ್ಸಾಹ ತೋರುತ್ತಿದ್ದು ಈ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪನಿಗಳು ದೊಡ್ಡಮಟ್ಟದಲ್ಲಿ ಬೆಳೆಯುವ ಲಕ್ಷಣಗಳನ್ನು ತೋರುತ್ತಿವೆ.
ಇದನ್ನೂ ಓದಿ :ಗೋವಾ : ಕರ್ಫ್ಯೂ ವಿಸ್ತರಣೆ ಮಾಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ : ಪ್ರಮೋದ್ ಸಾವಂತ್
ಹಾಗಾಗಿ, ಬಿಗ್‌ಬ್ಯಾಸ್ಕೆಟ್ ಅನ್ನು ಖರೀದಿಸುವ ಮೂಲಕ ಟಾಟಾ ಕಂಪನಿ, ಈ ಕ್ಷೇತ್ರದಲ್ಲಿ ಸ್ಪರ್ಧೆ ನೀಡುತ್ತಿರುವ ಅಮೆಜಾನ್, ಫ್ಲಿಪ್‌ಕಾರ್ಟ್, ಜಿಯೋ ಮಾರ್ಟ್ ಕಂಪನಿಗಳ ಜೊತೆ ಸ್ಪರ್ಧೆಗಿಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.