ಅಂತಿಮ ಏಕದಿನ ಪಂದ್ಯ : ಬಾಂಗ್ಲಾ ವಿರುದ್ಧ ಲಂಕೆಗೆ ಸಮಾಧಾನಕರ ಗೆಲುವು
Team Udayavani, May 29, 2021, 12:23 AM IST
ಢಾಕಾ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 97 ರನ್ನುಗಳಿಂದ ಗೆದ್ದ ಶ್ರೀಲಂಕಾ ವೈಟ್‌ವಾಶ್ ಅವಮಾನದಿಂದ ಪಾರಾಗಿದೆ. ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡು ಸಮಾಧಾನಪಟ್ಟಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, ನಾಯಕ ಕುಸಲ್ ಪೆರೆರ ಅವರ 6ನೇ ಶತಕ ಸಾಹಸದಿಂದ 6 ವಿಕೆಟಿಗೆ 286 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಜವಾಬಿತ್ತ ಬಾಂಗ್ಲಾದೇಶ 42.3 ಓವರ್‌ಗಳಲ್ಲಿ 189ಕ್ಕೆ ಆಲೌಟ್ ಆಯಿತು. ದುಷ್ಮಂತ ಚಮೀರ ಕೇವಲ 16 ರನ್ನಿಗೆ 5 ವಿಕೆಟ್ ಹಾರಿಸಿ ಬಾಂಗ್ಲಾಕ್ಕೆ ಕಂಟಕವಾಗಿ ಪರಿಣಮಿಸಿದರು.
ಆರಂಭಕಾರ ಕುಸಲ್ ಪೆರೆರ 122 ಎಸೆತಗಳಿಂದ 120 ರನ್ ಬಾರಿಸಿ ಮೆರೆದರು. ಸಿಡಿಸಿದ್ದು 11 ಫೋರ್ ಹಾಗೂ ಒಂದು ಸಿಕ್ಸರ್. ಧನಂಜಯ ಡಿ ಸಿಲ್ವ ಅಜೇಯ 55 ರನ್ ಹೊಡೆದರು.
ಬಾಂಗ್ಲಾದೇಶ ಬ್ಯಾಟಿಂಗ್ ಸರದಿ ಯಲ್ಲಿ ಮಹಮದುಲ್ಲ (53) ಮತ್ತು ಮೊಸದೆಕ್ ಹೊಸೇನ್ (51) ಅವರಿಂದ ಅರ್ಧ ಶತಕ ದಾಖಲಾಯಿತು.
ಇದನ್ನೂ ಓದಿ :ಜಡೇಜ ಜಬರ್ದಸ್ತ್ ಪ್ರದರ್ಶನದಿಂದ ಅವಕಾಶ ಕಷ್ಟ : ಅಕ್ಷರ್ ಪಟೇಲ್
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-6 ವಿಕೆಟಿಗೆ 286 (ಕುಸಲ್ ಪೆರೆರ 120, ಧನಂಜಯ ಡಿ ಸಿಲ್ವ ಔಟಾಗದೆ 55, ತಸ್ಕಿನ್ ಅಹ್ಮದ್ 46ಕ್ಕೆ 4). ಬಾಂಗ್ಲಾದೇಶ-42.3 ಓವರ್‌ಗಳಲ್ಲಿ 189 (ಮಹಮದುಲ್ಲ 53, ಮೊಸದೆಕ್ 51, ಚಮೀರ 16ಕ್ಕೆ 5, ರಮೇಶ್ ಮೆಂಡಿಸ್ 40ಕ್ಕೆ 2, ಹಸರಂಗ 47ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.