ಕೋವಿಡ್ ಚಿಕಿತ್ಸೆ ಮತ್ತು ಬಳಕೆ ಮಾಡುವ ಸಲಕರಣೆಗಳ ಮೇಲಿನ ಜಿಎಸ್ಟಿ ವಿನಾಯಿತಿಗೆ ಅಸ್ತು
Team Udayavani, May 29, 2021, 7:10 AM IST
ಹೊಸದಿಲ್ಲಿ : ಕೊರೊನಾ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿ ಬಳಕೆ ಮಾಡಲಾಗುವ ಸಲಕರಣೆಗಳ ಮೇಲಿನ ಐಜಿಎಸ್ ಟಿ ಯನ್ನು ಜಿಎಸ್ಟಿ ಮಂಡಳಿ ಕೈಬಿಟ್ಟಿದೆ.
ಆ. 31ರ ವರೆಗೆ ಈ ವಿನಾಯಿತಿ ಜಾರಿಯಲ್ಲಿ ಇರಲಿದೆ. ಶುಕ್ರವಾರ ನಡೆದ ಜಿಎಸ್ಟಿ ಮಂಡಳಿಯ 43ನೇ ಸಭೆಯಲ್ಲಿ ಕೊರೊನಾ ಸಂಬಂಧ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬ್ಲ್ಯಾಕ್ ಫಂಗಸ್ಗೆ ನೀಡಲಾಗುವ ಆ್ಯಂಫೊಟೆರೆಸಿನ್ ಸಹಿತ ಔಷಧಗಳ ಮೇಲಿನ ತೆರಿಗೆಗೂ ವಿನಾಯಿತಿ ನೀಡಲಾಗಿದೆ. ಕೊರೊನಾ ಪರಿಹಾರದ ಎಲ್ಲ ವಸ್ತುಗಳ ಮೇಲೂ ಐಜಿಎಸ್ಟಿ ವಿನಾಯಿತಿ ನೀಡಲು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.