ಮಧುಮೇಹಿಗಳು, ಸಕ್ರಿಯ ಸೋಂಕಿತರು ಹೆಚ್ಚಿರುವುದೇ ಫಂಗಸ್ ಹೆಚ್ಚಳಕ್ಕೆ ಕಾರಣ
Team Udayavani, May 29, 2021, 8:50 AM IST
ಬೆಂಗಳೂರು: ರಾಜ್ಯದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿರುವುದು ನಮಗೆ ಶಾಪವಾಗುತ್ತಿದೆಯೇ? ಇದು ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಅಡ್ಡಿಯಾಗಿದೆಯೇ? – ಹೌದು ಎನ್ನುತ್ತಾರೆ ತಜ್ಞ ವೈದ್ಯರು.
ಕಪ್ಪು ಶಿಲೀಂಧ್ರಕ್ಕೂ ಮಧುಮೇಹಕ್ಕೂ ನಂಟಿದೆ. ಅದೇ ತರಹ ಮಧುಮೇಹಕ್ಕೂ ಕರ್ನಾಟಕಕ್ಕೂ ನಂಟಿದೆ. ದೇಶದ ಒಟ್ಟಾರೆ ಮಧುಮೇಹಿಗಳಲ್ಲಿ ಶೇ.8 ರಾಜ್ಯದಲ್ಲಿದ್ದಾರೆ. ದೇಶದಲ್ಲಿ 8 ಕೋಟಿ ಇದ್ದು, ರಾಜ್ಯದಲ್ಲಿ 65 ಲಕ್ಷ ಮಂದಿ ಮಧುಮೇಹಿಗಳಿದ್ದಾರೆ. ಸದ್ಯ ದೇಶದಲ್ಲಿಯೇ ಕೊರೊನಾ ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಿದ್ದು, ಮೂರು ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 50 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿದ್ದಾರೆ.
ಸೋಂಕು ರಾಜ್ಯದಲ್ಲಿ ಹೆಚ್ಚಿರುವುದರಿಂದ ಸೋಂಕಿತರಲ್ಲಿ ಸಾಮಾನ್ಯವಾಗಿ ಮಧುಮೇಹಿಗಳು ಕೂಡ ಹೆಚ್ಚಿದ್ದಾರೆ.ಹೀಗಾಗಿಯೇ, ಕೊರೊನಾ ಸಕ್ರಿಯ ಪ್ರಕರಣಗಳು ಜತೆಗೆ ಮಧುಮೇಹ ಪ್ರಕರಣಗಳಲ್ಲಿ ರಾಜ್ಯ ಮುಂಚೂಣಿಯಲ್ಲಿರುವುದು ಶಾಪವಾಗಿದ್ದು, ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮುಖ್ಯವಾಗಿ ಸೋಂಕು ಗಂಭೀರವಾಗಿರುವರಲ್ಲಿ ಮಧುಮೇಹಿಗಳೇ ಹೆಚ್ಚಿದ್ದು, ಅದರಲ್ಲಿಯೇ ಫಂಗಸ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸಕ್ರಿಯ ಪ್ರಕರಣಗಳು ಹೆಚ್ಚಿರುವ ಮೈಸೂರು, ತುಮಕೂರು, ಧಾರವಾಡ, ಶಿವಮೊಗ್ಗ, ಕಲಬುರಗಿ, ಕೋಲಾರ, ವಿಜಯಪುರದಲ್ಲಿ ಹೆಚ್ಚಿವೆ. ಇನ್ನು ಒಟ್ಟಾರೆ ಫಂಗಸ್ ಪ್ರಕರಣಗಳು ಒಂದು ವಾರದಲ್ಲಿಯೇ ನಾಲ್ಕು ಪಟ್ಟು ಹೆಚ್ಚಳವಾಗಿ ಒಂದು ಸಾವಿರ ಗಡಿದಾಟಿವೆ. ಫಂಗಸ್ ಪ್ರಕರಣ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ.
ಮಧುಮೇಹಿಗಳಲ್ಲಿ ಯಾಕೆ ಹೆಚ್ಚು?: ರೋಗ ನಿರೋಧಕಶಕ್ತಿ ಕಡಿಮೆ ಇರುವವರಿಗೆ ಮಾತ್ರ ಫಂಗಸ್ ಹಾನಿ ಮಾಡುತ್ತದೆ. ಮಧುಮೇಹಿಗಳಲ್ಲಿ ಸಾಮಾನ್ಯ ಜನರಿಗೆ ಹೋಲಿಸಿದರೆ ಮೊದಲೇ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರಿಗೆ ಸ್ಟಿರಾಯ್ಡ ನೀಡುವುದರಿಂದ ಅಡ್ಡಪರಿಣಾಮವಾಗಿ ಮಧುಮೇಹ ಮತ್ತಷ್ಟು ಹೆಚ್ಚಳವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಮಧುಮೇಹಿಗಳ ಸಂಶೋ ಧನಾ ಸಂಸ್ಥೆಯ ಸದಸ್ಯ ತಜ್ಞ ಡಾ.ಅರವಿಂದ್ ತಿಳಿಸಿದ್ದಾರೆ.
ಮಧುಮೇಹಿಗಳು ಎರಡು ವಾರ ಎಚ್ಚರ: ಗುಣಮುಖರಾದವರಲ್ಲಿಯೂ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಮಧುಮೇಹಿಗಳು ಕನಿಷ್ಠ 2 ವಾರ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಓಡಾಟ ಮಾಡಬಾರದು. ಸ್ವತ್ಛತೆ ಕಾಪಾಡಿಕೊಳ್ಳಬೇಕು. ಮಧುಮೇಹ ನಿಯಂತ್ರಣಕ್ಕೆ ಒತ್ತು ನೀಡಬೇಕು. ಫಂಗಸ್ ಲಕ್ಷಣ ಕಾಣಿಸಿಕೊಂಡರೆ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಖ್ಯಾತ ವೈದ್ಯ ಎಚ್.ಅಂಜನಪ್ಪ ತಿಳಿಸಿದ್ದಾರೆ.
ಬಹುತೇಕರು ಲಸಿಕೆ ಪಡೆದಿಲ್ಲ: ಬ್ಲ್ಯಾಕ್ ಫಂಗಸ್ ಸೋಂಕಿತರಲ್ಲಿ ಶೇ.90ರಷ್ಟು ಮಧು ಮೇಹಿಗಳು ಎಂಬ ಅಂಶವು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಧ್ಯಯನದಿಂದ ತಿಳಿದುಬಂದಿದೆ. ಜತೆಗೆ ಫಂಗಸ್ ಸೋಂಕಿತರಲ್ಲಿ ಶೇ.80 ಮಂದಿ ಲಸಿಕೆ ಪಡೆದಿಲ್ಲ ಎಂದು ಹೇಳಿದ್ದಾರೆ. ಶೇ.5ಕ್ಕಿಂತಲೂ ಕಡಿಮೆ ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ ಎಂಬುದು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಗಂಭೀರವಾಗಿ ಐಸಿಯು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮಧುಮೇಹಿಗಳ ಪಾಲು ಹೆಚ್ಚಿದೆ. ಅದೇ ಕಾರಣಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಿವೆ. ಫಂಗಸ್ ಸೋಂಕಿತರಲ್ಲಿ ಮಧುಮೇಹಿಗಳು ಶೇ.80ಕ್ಕೂ ಅಧಿಕ.- ಡಾ.ಭುಜಂಗ ಶೆಟ್ಟಿ. ಸರ್ಕಾರ ಸಲಹಾ ಸಮಿತಿ ಸದಸ್ಯರು, ನೇತ್ರತಜ್ಞರು
ದೇಶದ ಒಟ್ಟಾರೆ ಮಧುಮೇಹಿಗಳಲ್ಲಿ ಕರ್ನಾಟದ ಪಾಲು ಶೇ.8ರಷ್ಟಿದೆ. ಸೋಂಕು ತಗುಲಿ, ಚಿಕಿತ್ಸೆ ಸ್ಟಿರಾಯ್ಡ ನೀಡುವುದರಿಂದ ಮಧುಮೇಹ ಇನ್ನಷ್ಟು ಹೆಚ್ಚಾಗುತ್ತದೆ. ಇದು ಫಂಗಸ್‌ಗೆ ಕಾರಣವಾಗಿದೆ.- ಡಾ.ಅರವಿಂದ್, ಸದಸ್ಯರು, ಭಾರತೀಯ ಮಧುಮೇಹ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ಆರ್ ಎಸ್‌ಎಸ್‌ಡಿಐ)
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.