ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ
Team Udayavani, May 29, 2021, 10:31 AM IST
ಕಡೂರು: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು. ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್‌ನಿಂದ ಆಯೋಜಿಸಿದ್ದ ‘ನಮ್ಮ ನಡೆ ಹಳ್ಳಿಗಳ ಕಡೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಭಾಗದಲ್ಲಿ ರೋಗ ಹೆಚ್ಚಳವಾದಾಗ ತಾವು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸರ್ಕರಕ್ಕೆ ಪತ್ರ ಬರೆದು ತಕ್ಷಣವೇ ಮಹಾರಾಷ್ಟ್ರದ ಗಡಿ ಭಾಗದ ಕರ್ನಾಟಕ ಗಡಿಗಳನ್ನು ಮುಚ್ಚುವಂತೆ ಸಲಹೆ ನೀಡಿದರೂ ಸರಕಾರದ ಸ್ವಪ್ರತಿಷ್ಠೆಯಿಂದ ಅದು ಜಾರಿಯಾಗಲಿಲ್ಲ. ಪರಿಣಾಮವಾಗಿ ಕೊರೊನಾ ಸೋಂಕು ರಾಜ್ಯವನ್ನು ಪ್ರವೇಶಿಸುವಂತಾಯಿತು ಎಂದರು.
ಮೊದಲನೇ ಅಲೆಯ ಪ್ರಕರಣಕ್ಕಿಂತ ಎರಡನೇ ಅಲೆ ಭಿನ್ನವಾಗಿದೆ. ಆಮ್ಲಜನಕ, ವೆಂಟಿಲೇಟರ್ ಮಹತ್ವದ ಪಾತ್ರ ವಹಿಸಿದೆ. ಆಮ್ಲಜನಕ ಸರಬರಾಜು ಕೇಂದ್ರ ಮತ್ತು ರಾಜ್ಯ ಸರಕಾರದ ಹೊಣೆಯಾಗಿದೆ. ಎರಡು ಸರಕಾರಗಳು ಒಂದೇ ಇರುವಾಗ ರಾಜ್ಯದಲ್ಲೇಕೆ ಆಮ್ಲಜನಕದ ಕೊರತೆ ಊಂಟಾಯಿತು? ತಾವು ಕೂಡ ಕೋವಿಡ್ ಪೀಡಿತರಾಗಿ ಕೇವಲ ಒಂದು ವಾರದಲ್ಲಿ ಗುಣಮುಖರಾಗಿ ಅಂದಿನಿಂದ ಇಂದಿನವರೆಗೂ ಒಂದು ದಿನವೂ ವಿಶ್ರಮಿಸದೆ ರೋಗ ಪೀಡಿತರ ಸೇವೆಯಲ್ಲಿ ತೊಡಗಿದ್ದೇನೆ ಎಂದರು.
ಹಾಸನ ಜಿಲ್ಲೆಯಲ್ಲಿ ಈಗಾಗಲೇ ಮೆಡಿಕಲ್ ಕಿಟ್‌ಗಳನ್ನು ನೀಡಿದ್ದು, ಸದ್ಯದಲ್ಲಿಯೇ ಕಡೂರು ತಾಲೂಕಿಗೆ 2 ಸಾವಿರ ಮೆಡಿಕಲ್ ಕಿಟ್‌ಗಳನ್ನು ಕಳುಹಿಸುತ್ತೇನೆ. ಅದರಲ್ಲಿರುವ ಔಷಧಗಳನ್ನು ಬಳಕೆ ಮಾಡುವ ವಿಧಾನ ಕೂಡ ಬರವಣೆಗೆ ರೂಪದಲ್ಲಿರುತ್ತದೆ. ವಿಶೇಷವಾಗಿ ಹೋಂ ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ಇದು ಸಹಕಾರಿ ಎಂದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ರೋಗ ನಿರ್ವಹಣೆಗೆ ಪಕ್ಷವು ಆಮ್ಲಜನಕ ಪೂರೈಕೆಗಾಗಿ ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಆಸ್ಪತ್ರೆಗೆ 1 ಲಕ್ಷ ರೂ. ದೇಣಿಗೆ ನೀಡಿದೆ. ನಂತರ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಕೊಟ್ಟು ಖರೀದಿ ಮಾಡಲಾಗಿದೆ. ಈಗ ತಾಲೂಕಿನ 49 ಗ್ರಾಪಂಗೆ ಮೆಡಿಕಲ್ ಕಿಟ್ ನೀಡುತ್ತಿದ್ದು ಈ ಬಾರಿಯ ಕೊರೊನಾ ಅಲೆಯಲ್ಲಿ ಹಸಿವಿನ ಪ್ರಶ್ನೆಗಿಂತ ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆ ಮಾಡುವ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ಪಕ್ಷವು ಸ್ಪಂ ದಿಸಿ ಕೆಲಸ ಮಾಡುತ್ತಿದೆ ಎಂದರು.
ಭಂಡಾರಿ ಶ್ರೀನಿವಾಸ್, ಶೂದ್ರ ಶ್ರೀನಿವಾಸ್,ಪ್ರೇಮಕುಮಾರ್, ಮೋಹನ್ ಕುಮಾರ್, ಮುಬಾರಕ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.