ನರಕದಲ್ಲಿ ಕೂಡಿ ಹಾಕಿದ್ದಾರೆ, ಮನೆಗೆ ಕಳ್ಸಿ: ಸೋಂಕಿತ ಮಹಿಳೆಯ ಗೋಳಾಟ
Team Udayavani, May 30, 2021, 4:32 PM IST
ಮಂಡ್ಯ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆಯಿಂದ ಬೇಸತ್ತ ಸೋಂಕಿತ ಮಹಿಳೆಯೊಬ್ಬರು ನಮ್ಮನ್ನು ಮನೆಗೆ ಕಳುಹಿಸಿ ಎಂದು ಗೋಳಾಡಿರುವ ಘಟನೆ ನಾಗಮಂಗಲ ತಾಲೂಕಿನ ಬದರಿಕೊಪ್ಪಲು ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಭಾನುವಾರ ನಡೆದಿದೆ.
ದಯವಿಟ್ಟು ನಮ್ಮನ್ನ ಮನೆಗೆ ಬಿಟ್ಟು ಕಳಿಸಿ ಬಿಡಿ, ಈ ನರಕದಿಂದ ದೂರಮಾಡಿ, ಎಲ್ಲ ಸವಲತ್ತು ಕೊಡ್ತಿವಿ ಅಂತ ಕರೆತಂದು ನರಕದಲ್ಲಿ ಕೂಡಿ ಹಾಕಿದ್ದಾರೆ. ಮಗು 3 ದಿನಗಳಿಂದ ಕೆಮ್ಮಿನಿಂದ ನರಳುತ್ತಿದೆ. ಕೆಮ್ಮಿನ ಔಷಧಿ ಕೇಳಿದರೆ ಕೊಡುತ್ತಿಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇಲ್ಲಿಗಿಂತ ಮನೆಯಲ್ಲೆ ನಾವು ಬಿಸಿಯೂಟ ಮಾಡಿಕೊಂಡು ಗುಣಮುಖರಾಗ್ತಿವಿ. ಕುಡಿಯುವ ನೀರು ಮುಗಿದು ಎರಡು ದಿನ ಕಳೆದಿದೆ. ನಮ್ಮನ್ನ ದಯವಿಟ್ಟು ಬಿಟ್ಟು ಬಿಡಿ ಮನೆಗೆ ಹೋಗ್ತಿವಿ ಎಂದು ಸೋಂಕಿತ ಮಹಿಳೆಯೊಬ್ಬರು ಗೋಳಾಡಿದ್ದಾರೆ.
ಇದನ್ನೂ ಓದಿ: ಜೂನ್ 3 ರಿಂದ ಮುಂಗಾರು ಆರಂಭ : ಹವಾಮಾನ ಇಲಾಖೆ
ಸೋಂಕಿತ ಮಹಿಳೆ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಅವ್ಯವಸ್ಥೆ ಬಗ್ಗೆ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.