40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೋವಿಡ್ ಶೂನ್ಯ
ಪರ ಊರುಗಳಿಂದ ಬಂದವರ ಮೇಲೆ ನಿಗಾ, ಕೊರೊನಾಗೆ ಸಡ್ಡು ಹೊಡೆದ ಗ್ರಾಮಸ್ಥರು
Team Udayavani, May 30, 2021, 6:51 PM IST
ವರದಿ: ವೀರೇಂದ್ರ ನಾಗಲದಿನ್ನಿ
ಗದಗ: ಎಲ್ಲೆಡೆ ಅಬ್ಬರಿಸುತ್ತಿರುವ ಕೋವಿಡ್-19ರ 2ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ತನ್ನ ಕೆನ್ನಾಲಿಗೆ ಚಾಚಿದೆ. ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.
ಇನ್ನು ಕೆಲ ಗ್ರಾಮಗಳಲ್ಲಿ ಸ್ಥಳೀಯರು ಮುನ್ನೆಚ್ಚರಿಕೆ ವಹಿಸಿದ್ದರಿಂದ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊರೊನಾ ಸುಳಿವೇ ಇಲ್ಲ. ಜಿಲ್ಲೆಯಲ್ಲಿ ಒಟ್ಟು 22428 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎರಡನೇ ಅಲೆಯಲ್ಲಿ ಜ.1ರಿಂದ ಮೇ 27ರವರೆಗೆ ಐದು ತಿಂಗಳ ಅವಧಿಯಲ್ಲಿ 11521ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಏಪ್ರಿಲ್-ಮೇ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೋಂಕು ಹರಡಿದ್ದು, ಗ್ರಾಮೀಣ ಪ್ರದೇಶಕ್ಕೂ ಚಾಚಿಕೊಂಡಿದೆ. ಜಿಲ್ಲೆಯ ಹುಲಕೋಟಿ ಮತ್ತು ಲಕ್ಕುಂಡಿ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ 150ಕ್ಕೂ ಹೆಚ್ಚಿದೆ.
40ಕ್ಕಿಂತ ಹೆಚ್ಚು ಸೋಂಕಿತ ಗ್ರಾಮಗಳು: ಗದಗ ತಾಲೂಕಿನ ಲಕ್ಕಿಂಡಿ-122, ಹುಲಕೋಟಿ 323, ಬಿಂಕದಕಟ್ಟಿ 63, ಮುಳಗುಂದ 40, ಕುರ್ತಕೋಟಿ 42, ಕಳಸಾಪುರ 43, ಹರ್ತಿ 43, ಮಲ್ಲಸಮುದ್ರ 34, ಮುಂಡರಗಿ ತಾಲೂಕಿನ ಡಂಬಳ-85, ಹಮ್ಮಿಗಿ- 49, ಪೇಠಾಲೂರು-40, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ 90, ಶಿರಹಟ್ಟಿ ತಾಲೂಕಿನ ಸೂರಣಗಿಯಲ್ಲಿ 59ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಇನ್ನುಳಿದ ಗ್ರಾಮಗಳಲ್ಲಿ 30ಕ್ಕಿಂತ ಕಡಿಮೆ ಪ್ರಕರಣಗಳಿವೆ. ರೋಣ ತಾಲೂಕಿನ ಅತಿ ದೊಡ್ಡ ಗ್ರಾಮಗಳಾಗಿರುವ ಹೊಳೆಆಲೂರಿನಲ್ಲಿ 50, ಅಬ್ಬಿಗೇರಿ 57, ಬೆಳವಣಿಕೆಯಲ್ಲಿ 68 ಪ್ರಕರಣಗಳು ದೃಢಪಟ್ಟಿವೆ. ಗಜೇಂದ್ರಗಡ ತಾಲೂಕಿನ ಸೂಡಿಯಲ್ಲಿ ಗರಿಷ್ಟ 44 ಪ್ರಕರಣಗಳು ಕಂಡು ಬಂದಿವೆ. ನರಗುಂದ ತಾಲೂಕಿನ ಚಿಕ್ಕನರಗುಂದ, ಹದ್ಲಿ ಗ್ರಾಮಗಳಲ್ಲಿ ಗರಿಷ್ಠ ಪ್ರಕರಣಗಳು ದೃಢಪಟ್ಟಿವೆ. ಕ್ರಮವಾಗಿ ಸುಮಾರು 90 ಮತ್ತು 45 ಪ್ರಕರಣಗಳು ಖಚಿತವಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಅತೀ ಕಡಿಮೆ ಪ್ರಕರಣಗಳು: ಗದಗ ತಾಲೂಕಿನ ಪಾಪನಾಶಿ ತಾಂಡಾ-2, ಅಡವಿಸೋಮಾಪುರ ತಾಂಡಾ-5, ಶಿರೋಳ-4, ಯಲಿಶಿರಂಜ-1, ಎಚ್.ಎಸ್.ವೆಂಕಟಾಪುರ-5, ದುಂದೂರು-4, ಮಹಲಿಂಗಪುರ, ಚಿಕ್ಕೊಪ್ಪ, ಕಲ್ಲೂರ, ನೀರಲಗಿ-2, ಮದಗಾನೂರ-3, ಕಬಲಾಯನಕಟ್ಟಿ- 4, ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನಲ್ಲಿ 8ಕ್ಕಿಂತ ಕಡಿಮೆ ಸೋಂಕಿತರ ಗ್ರಾಮಗಳೇ ಹೆಚ್ಚು. ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ 2 ರಿಂದ 8ರಷ್ಟು ಪ್ರಕರಣಗಳಿವೆ ಎನ್ನಲಾಗಿದೆ.
ಗ್ರಾಮಸ್ಥರಿಂದ ಕೊರೊನಾಗೆ ಸಡ್ಡು: ಎಲ್ಲೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೆ 2ನೇ ಅಲೆಯಲ್ಲಿ ಜಿಲ್ಲೆಯ 40ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕೊರೊನಾ ಸೋಂಕಿಗೆ ಗ್ರಾಮಸ್ಥರು ಸಡ್ಡು ಹೊಡೆದಿದ್ದಾರೆ. ಗದಗ ತಾಲೂಕಿನ ಹಂಗನಕಟ್ಟಿ, ವೆಂಕಟಾಪುರ ಮುಂಡರಗಿ ತಾಲೂಕಿನ ಡ.ಸ.ರಾಮೇನಹಳ್ಳಿ, ಯಕ್ಲಾಸಪುರ, ತಿಪ್ಪಾಪುರ, ನರಗುಂದ ತಾಲೂಕಿನ ಕಣಕಿಕೊಪ್ಪ, ಸಂಕದಾಳ, ಕಪ್ಪಲಿ, ಲಕಮಾಪುರ, ರೋಣ ತಾಲೂಕಿನ ಕರಕಿಕಟ್ಟಿ, ಮೇಲ್ಮಠ, ಅಮರಗೋಳ, ಕುರವಿನಕೊಪ್ಪ, ಗಜೇಂದ್ರಗಡ ತಾಲೂಕಿನ ವೀರಾಪುರ, ಚಿಲ್ಲಜೇರಿ, ಮಾಟರಂಗಿ, ನಾಗರಿಸಿಕೊಪ್ಪ ತಾಂಡಾ, ಮಲ್ಲಾಪುರ, ಬೊಮ್ಮಸಾಗರ, ದಿಂಡೂರ, ಕಾಲಕಾಲೇಶ್ವರ, ನೆಲ್ಲೂರ ಪ್ಯಾಟಿ ಸೇರಿದಂತೆ ಸುಮಾರು 40 ಗ್ರಾಮಗಳಲ್ಲಿ ಕೊರೊನಾ ಶೂನ್ಯವಾಗಿದೆ.
ಸ್ವಯಂ ಪ್ರೇರಿತ ನಿರ್ಬಂಧ: ವಿವಿಧ ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಿತ ನಿಯಂತ್ರಣಕ್ಕೆ ಹಲವು ನಿಯಮಗಳನ್ನು ವಿಧಿಸಿದ್ದಾರೆ. ಪರ ಊರುಗಳಿಂದ ಬಂದವರ ಮೇಲೆ ನಿಗಾ, ಪಟ್ಟಣಗಳಿಂದ ವಾಪಾಸ್ಸಾಗಿರುವ ಕಾರ್ಮಿಕರ ಕುಟುಂಬಗಳಿಗೆ ಗ್ರಾಪಂಗಳು ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್ ವಿಧಿ ಸಿವೆ. ಜನರು ಗುಂಪು ಗೂಡದಿರುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿಸಿ ಸ್ವತ್ಛತೆಗೆ ಒತ್ತು ನೀಡಲಾಗಿದೆ. ಈ ರೀತಿಯ ಸಾಮಾನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಶೂನ್ಯ ಪ್ರಕರಣಗಳಿರುವ ಗ್ರಾಮಗಳಲ್ಲಿ 2 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿದ್ದು, ಆಡಳಿತ ನಿರ್ವಹಣೆಯೂ ಸುಲಭವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.