ಗೊಮ್ಮಟನ ಬೀಡಲ್ಲಿ ಕೊರೊನಾ ಚಿಕಿತ್ಸೆಗೆ ಸಕಲ ವ್ಯವಸ್ಥೆ


Team Udayavani, May 30, 2021, 8:50 PM IST

covid news

ಚನ್ನರಾಯಪಟ್ಟಣ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿಹಾಸನ ಜಿಲ್ಲೆಯಲ್ಲಿ ಹಾಸನ ನಗರವನ್ನೊಳಗೊಂಡ ಹಾಸನತಾಲೂಕು ಮೊದಲ ಸ್ಥಾನದಲ್ಲಿದ್ದರೆ 2ನೇ ಸ್ಥಾನ ಚನ್ನರಾಯಪಟ್ಟಣತಾಲೂಕಿನದ್ದು. ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣವರದಿಯಾಗಿದ್ದೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ಎಂಬುದುವಿಷಾದದ ಸಂಗತಿ.

ಮುಂಬೈ, ಗೋವಾ, ಬೆಂಗಳೂರುಸೇರಿ ಹೊರ ರಾಜ್ಯಗಳಲ್ಲಿ ವ್ಯವಹಾರ ಮತ್ತುಉದ್ಯೋಗಳನ್ನರಸಿ ಚನ್ನರಾಯಪಟ್ಟಣತಾಲೂಕಿನಿಂದ ಹೋದವರು ಹೆಚ್ಚಿನಸಂಖ್ಯೆಯಲ್ಲಿ ದ್ದಾರೆ. ಲಾಕ್‌ಡೌನ್‌ ಜಾರಿಯಾದನಂತರ ಅವರೆಲ್ಲರೂ ಸ್ವಗ್ರಾಮಗಳಿಗೆ ಸೋಂಕಿನೊಂದಿಗೆ ವಾಪಸ್ಸಾಗಿ ಸ್ಥಳೀಯರಿಗೂ ಹರಡುತ್ತಾರೆಎಂಬ ಅಪವಾದವಿದೆ.

ಕಳೆದ ವರ್ಷ ಮೊದಲಅಲೆಯಲ್ಲೂ ಮುಂಬೈನಿಂದ ಚನ್ನರಾಯಪಟ್ಟಣತಾಲೂಕಿಗೆ ಬಂದವರಿಂದಲೇ ಕೊರೊನಾ ಪ್ರಕರಣಜಿಲ್ಲೆಯಲ್ಲಿ ಮೊದಲು ವರದಿಯಾದವು. 2ನೇಅಲೆಯಲ್ಲಿಯೂ ಚನ್ನರಾಯಪಟ್ಟಣ ತಾಲೂಕುಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.ಇಂತಹ ಸೂಕ್ಷ್ಮ ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆಸರ್ಕಾರ, ಜನ ಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಶ್ರಮಿಸುತ್ತಲೇಬಂದಿವೆ. ಜನ ಜಾಗೃತಿ ಕಾರ್ಯಕ್ರಮ, ಸಂಕಷ್ಟಕ್ಕೆ ಸಿಲುಕಿದವರಿಗೆಔಷಧೋಪಚಾರ, ಊಟೋಪಚಾರದಂತಹ ಸೇವಾ ಕಾರ್ಯನಡೆದಿವೆ.

ಯುವ ಜನರ ಪ್ರೇರಕ ಶಕ್ತಿಯಂತಿರುವ, ಎಲ್ಲಕ್ಷೇತ್ರಗಳಲ್ಲೂ ಕ್ರಿಯಾಶೀಲರೆಂದೇ ಗುರ್ತಿಸುವ ಈ ಕ್ಷೇತ್ರದ ಶಾಸಕಸಿ.ಎನ್‌.ಬಾಲಕೃಷ್ಣ ಅವರು, ಪಾದರಸದಂತೆ ಸಂಚರಿಸಿಸೋಂಕಿತರ ಚಿಕಿತ್ಸಾ ವ್ಯವಸ್ಥೆಗೆ ನೆರವಾಗಿದ್ದಾರೆ.ಚನ್ನರಾಯಪಟ್ಟಣದ ತಾಲೂಕು ಆಸ್ಪತ್ರೆ ಸೇರಿ ತಾಲೂಕಿನಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಪಡೆಯಬಹುದಾದ ಎಲ್ಲರೀತಿಯ ನೆರವಿನ ಜತೆಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ವೈಯಕ್ತಿವಾಗಿನೆರವು ನೀಡುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರುತಮ್ಮ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಸೋಂಕಿತರಚಿಕಿತ್ಸಾ ವ್ಯವಸ್ಥೆ ಸೇರಿ ತಮ್ಮ ಹೋರಾಟ, ಕೊಡುಗೆ ಬಗ್ಗೆ”ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿವರ ನೀಡಿದ್ದಾರೆ

ನಿಮ್ಮ ಕ್ಷೇತ್ರದಲ್ಲಿ ಸೋಂಕಿತರು ಹೆಚ್ಚು,ನಿಯಂತ್ರಣ ಹೇಗಿದೆ ?

ಹೌದು, ಹಾಸನ ಜಿಲ್ಲೆಯಲ್ಲಿ ಹಾಸನದ ನಂತರಚನ್ನರಾಯಪಟ್ಟಣ ತಾಲೂಕಿನಲ್ಲಿ ಕೊರೊನಾಪ್ರಕರಣ ಹೆಚ್ಚು. ಚನ್ನರಾಯಪಟ್ಟಣ ತಾಲೂಕಿನ 25ಸಾವಿರಕ್ಕೂ ಹೆಚ್ಚು ಮಂದಿ ಮುಂಬೈ, ಬೆಂಗಳೂರುಸೇರಿ ವಿವಿಧ ಮಹಾನಗರಗಳಲ್ಲಿ ಬದುಕುಕಟ್ಟಿಕೊಂಡಿದ್ಧಾರೆ. ಲಾಕ್‌ಡೌನ್‌ಜಾರಿಯಾಗಿದ್ದರಿಂದ ಈಗಾಗಲೇ 15ಸಾವಿರ ಮಂದಿ ತಾಲೂಕಿನ ಗ್ರಾಮೀಣಭಾಗಕ್ಕೆ ಆಗಮಿಸಿದ್ದು ಪಟ್ಟಣಕ್ಕಿಂತಗ್ರಾಮೀಣ ಭಾಗದಲ್ಲಿ ಸೋಂಕುವ್ಯಾಪಕವಾಗಿ ಹರಡಿದೆ. ಸೋಂಕಿತರಿಗೆಲ್ಲಾಕೋವಿಡ್‌ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಈಗಪ್ರತಿನಿತ್ಯವೂ 150 ರಿಂದ 200 ಮಂದಿಗುಣಮುಖರಾಗುತ್ತಿದ್ದಾರೆ.ಕಳೆದ 2-3 ದಿನಗಳಿಂದ ಸೋಂಕಿತರಸಂಖ್ಯೆ ಕಡಿಮೆ ಆಗುತ್ತಿದೆ. ಗುಣಮುಖರಾಗು ತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿಗೆ ಮೃತರಾಗುವವರ ಸಂಖ್ಯೆ ಕಡಿಮೆ ಆಗಬೇಕಿದೆ. ಅದ ಕ್ಕಾಗಿಚಿಕಿತ್ಸಾ ವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ.

 ತಾಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆಹೇಗಿದೆ, ಜನ ಏನಂತ?

ಕೊರೊನಾ 2ನೇ ಅಲೆಯಲ್ಲಿ ಸೋಂಕಿನ ಪ್ರಕರಣಹೆಚ್ಚಿದ್ದರಿಂದ ಚಿಕಿತ್ಸಾ ವ್ಯವಸ್ಥೆ ಕೊರತೆ ಉಂಟಾಯಿತು.ವಿಶೇಷವಾಗಿ ಆಮ್ಲಜನಕಯುಕ್ತ ಹಾಸಿಗೆಗೆ ತ್ರೀವಕೊರತೆ ಎದುರಾಯಿತು. ಈಗ ತಕ್ಕ ಮಟ್ಟಿಗೆ ಸೌಲಭ್ಯದೊರೆತಿವೆ. ಅದರೆ, ತಾಲೂಕಿನಲ್ಲಿ 12 ಮಂದಿವೈದ್ಯರು, 20 ಮಂದಿ ನರ್ಸ್‌ ಸಮಸ್ಯೆ ಇದೆ. ವೆಂಟಿಲೇಟರ್‌ಗೆ ಅಗತ್ಯ ಇರುವಷ್ಟು ಸಿಬ್ಬಂದಿ ಕೊರತೆ ಇದೆ.ಹೀಗಾಗಿ ಚನ್ನರಾಯಪಟ್ಟಣದ ಆಸ್ಪತ್ರೆಗೆ ಡಿಸಿಎಂಅಶ್ವತ್ಥನಾರಾಯಣ, ಆರೋಗ್ಯ ಸಚಿವಡಾ.ಸುಧಾಕರ್‌, ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯಅವರನ್ನು ಆಹ್ವಾನಿಸಿ ಅವರಿಗೆ ಮನವರಿಕೆಮಾಡಿಕೊಟ್ಟು ಚಿಕಿತ್ಸಾ ಸೌಲಭ್ಯ ಪಡೆಯುವ ಪ್ರಯತ್ನಮಾಡಿದ್ದೇನೆ. ಪರಿಣಾಮವಾಗಿ ತಾಲೂಕು ಆಸ್ಪತ್ರೆಗೆಆಕ್ಸಿಜನ್‌ ಪ್ಲಾಂಟ್‌ ಮಂಜೂರಾಗಿದೆ. ವೈದ್ಯರ ಹುದ್ದೆಗೆನೇಮಕಾತಿಯೂ ಆಗುತ್ತಿದೆ.

ಸೋಂಕಿತರು, ಸಂಕಷ್ಟದಲ್ಲಿಇರುವವರಿಗೆ ಹೇಗೆಸ್ಪಂದಿಸುತ್ತಿರುವಿರಿ?

ಕನಿಷ್ಠ ವಾರಕ್ಕೆ ಒಮ್ಮೆಯಾದರೂಕೊರೊನಾ ಕೇಂದ್ರಗಳಿಗೆ ಭೇಟಿ ನೀಡಿಚಿಕಿತ್ಸೆ ಪಡೆಯುತ್ತಿರುವವರಿಗೆ ಧೈರ್ಯತುಂಬುತ್ತಿರುವೆ. ನಿತ್ಯ ಗುಣಮಟ್ಟದ ಆಹಾರಪೂರೈಕೆ ಆಗುತ್ತಿದೆಯೇ ಎಂಬುದರ ಬಗ್ಗೆ ವರದಿಪಡೆದು ಪರಿಶೀಲಿಸುತ್ತಿರುವೆ. ಕೊರೊನಾ ಕೇರ್‌ಕೇಂದ್ರದಲ್ಲಿನ ಮೂಲ ಸೌಕರ್ಯಕ್ಕೆ ಕೊರತೆ ಆಗದಂತೆತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಪ್ರತಿ 2ದಿನಕ್ಕೆ ಒಮ್ಮೆ ತಾಲೂಕು ಮಟ್ಟದ ಅಧಿಕಾರಿಗಳಸಭೆ ಮಾಡಿ ಮಾಹಿತಿ ಪಡೆದು ಲಾಕ್‌ಡೌನ್‌ಕಟ್ಟಿನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆನೀಡುವೆ.

ಕ್ಷೇತ್ರದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆಹೇಗಿದೆ?

ಮೊದಲನೆಯದಾಗಿ ಸರ್ಕಾರದಿಂದ ಸಿಗುವಸೌಲಭ್ಯ ಅರ್ಹರಿಗೆ ತಲುಪಬೇಕು. ಈ ಬಗ್ಗೆಚುನಾಯಿತ ಪ್ರತಿನಿಧಿಗಳಸಹಕಾರದೊಂದಿಗೆ ಹೆಚ್ಚು ಗಮನಹರಿಸಿರುವೆ. ಪರಿಣಾಮಚನ್ನರಾಯಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿ ಹೆಚ್ಚುವರಿ ಐಸಿಯೂಬೆಡ್‌ ವ್ಯವಸ್ಥೆಯಾಗಿದೆ. 3 ಕೊರೊನಾಕೇರ್‌ ಕೇಂದ್ರ ತೆರೆದು ಮೂಲಕ ನೂರಾರುಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರವಣಬೆಳಗೊಳ,ಹಿರೀಸಾವೆ, ದಂಡಿಗನಹಳ್ಳಿ ಹೋಬಳಿ ಕೇಂದ್ರದಲ್ಲಿನವಸತಿ ಶಾಲೆಯಲ್ಲಿ ಕೊರೊ ನಾ ಕೇರ್‌ ಕೇಂದ್ರ ತೆರೆದುಗ್ರಾಮೀಣ ಭಾಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಿಸೋಂಕಿನಿಂದ ಗುಣಮುಖರನ್ನಾಗಿಮಾಡಲಾಗುತ್ತಿದೆ.

ಸಂಕಷ್ಟದಲ್ಲಿ ಇರುವವರಿಗೆ ನಿಮ್ಮವೈಯಕ್ತಿಕ ಕೊಡುಗೆ ಏನು?

ವೈಯಕ್ತಿಕವಾಗಿ ಸಾಕಷ್ಟು ಮಂದಿಗೆ ಚಿಕಿತ್ಸೆಗೆ ವ್ಯವಸ್ಥೆಮಾಡಿರುವೆ. ಆದರೆ, ನಾನು ಮಾಡಿದ ಸಹಾಯವನ್ನುನಾನೇ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ,ಬೇರೆಯವರೂ ಸಂಕಷ್ಟದಲ್ಲಿರುವವರಿಗೆ ನೆರವಾಗಲುಪ್ರೇರಣೆ ಆಗಲಿ ಎಂದು ಕೆಲ ಉದಾಹರಣೆ ನೀಡುತ್ತೇನೆ. ಪೊಲೀಸ್‌ ಇಲಾಖೆ ಎಲ್ಲಾ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್‌ ನೀಡಲಾಗಿದೆ. ಆರೋಗ್ಯ ಇಲಾಖೆ 40ಸಿಬ್ಬಂದಿಗೆ ನಿತ್ಯವೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ 250 ಪೊಟ್ಟಣ ಆಹಾರ ವಿತರಣೆ ಮಾಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 10 ಮಾಸ್ಕ್ ನೀಡಲಾ ಗಿದೆ. ಕೊರೊನಾಕೇರ್‌ ಕೇಂದ್ರಗಳಿಗೆ ಅಗತ್ಯ ಔಷಧಿ ಯನ್ನು ಆರೋಗ್ಯಇಲಾಖೆ ಸಹಕಾರದೊಂದಿಗೆ ಒದ ಗಿಸುತ್ತಿದ್ದೇನೆ.ಹೀಗೆ ನನ್ನ ಕೈಲಾದ ನೆರವು ನೀಡಿದ್ದೇನೆ. ಶಾಸಕನಾಗಿಇದು ನನ್ನ ಕರ್ತವ್ಯ ಎಂದು ಭಾವಿಸಿರುವೆ.

ಜಿಲ್ಲಾಡಳಿತ, ಸರ್ಕಾರಕ್ಕೆ ತಮ್ಮ ಸಲಹೆಏನು?

ಜಿಲ್ಲೆಯ ಶಾಸಕರ ನಿರಂತರ ಒತ್ತಡಗಳಿಂದಾಗಿಕಳೆದೆರಡು ವಾರಗಳಿಂದ ಚನ್ನರಾಯಪಟ್ಟಣ ತಾಲೂಕಿಗಷ್ಟೇ ಅಲ್ಲ ಜಿಲ್ಲೆಯ ಎಲ್ಲಾ ಕಡೆ ಸೋಂಕಿತರಿಗೆಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಆದರೆಬೇಡಿಕೆಯಷ್ಟು ಲಸಿಕೆ ಪೂರೈಕೆ ಮಾಡುತ್ತಿಲ್ಲ.ತಾಲೂಕಿನಲ್ಲಿ ಶೇ.20 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಸರ್ಕಾರ ಹೆಚ್ಚು ಲಸಿಕೆ ನೀಡಿದರೆ ತಾಲೂಕಿನಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯಕೇಂದ್ರದ ಮೂಲಕ ಜನರಿಗೆ ಲಸಿಕೆ ಹಾಕಿಸಲುಶ್ರಮಿಸುತ್ತೇನೆ. ಲಸಿಕೆ ಪೂರೈಕೆ ಪ್ರಮಾಣ ಹೆಚ್ಚಲಿಎಂದು ಒತ್ತಾಯಿಸುತ್ತೇನೆ. ಹಾಗೆಯೇ ಜನರೂಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಲಿ ಎಂದುಆಶಯ ವ್ಯಕ್ತಪಡಿಸುತ್ತೇನೆ.

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.