ಐಪಿಎಲ್‌ಗಾಗಿ ಕೆರಿಬಿಯನ್ ಲೀಗ್‌ನಲ್ಲಿ ಬದಲಾವಣೆ? WIC ಮಂಡಳಿಗೆ ಬಿಸಿಸಿಐ ಮನವಿ
Team Udayavani, May 31, 2021, 12:04 AM IST
ಹೊಸದಿಲ್ಲಿ: ಐಪಿಎಲ್ ಪಂದ್ಯಾವಳಿ ಯೇನೋ ಯುಎಇಯಲ್ಲಿ ಮುಂದುವರಿಯಲಿದೆ ಎಂದು ತೀರ್ಮಾನವಾಯಿತು. ಆದರೆ ಈ ಕ್ಯಾಶ್ ರಿಚ್ ಟೂರ್ನಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾದ ಅಗತ್ಯ ಕಂಡುಬಂದಿದೆ.
ಇದರಲ್ಲಿ ಮುಖ್ಯವಾದುದು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ (ಸಿಪಿಎಲ್) ದಿನಾಂಕ. ಇದು ಐಪಿಎಲ್‌ಗೆ ಕ್ಲಾಶ್ ಆಗಲಿದೆ. ಹೀಗಾಗಿ ಸಿಪಿಎಲ್ ಟೂರ್ನಿಯನ್ನು 10 ದಿನ ಬೇಗ ಆರಂಭಿಸುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮನವಿಯೊಂದನ್ನು ಸಲ್ಲಿಸಲು ನಿರ್ಧರಿಸಿದೆ.
ಐಪಿಎಲ್ ಸೆ. 18ರಿಂದ ಅ. 10ರ ತನಕ ನಡೆಯಲಿದೆ. ಇದರ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ ಸಿಪಿಎಲ್ ಆ. 28ರಿಂದ ಸೆ. 19ರ ತನಕ ನಡೆಯುವುದು ಈಗಾಗಲೇ ಅಧಿಕೃತಗೊಂಡಿದೆ. ಅಂದರೆ ಐಪಿಎಲ್ ಮುಂದುವರಿಯಲ್ಪಟ್ಟ ಮರುದಿನ ಸಿಪಿಎಲ್ ಫೈನಲ್ ನಡೆಯುತ್ತದೆ.
ಇದರಿಂದ ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಐಪಿ ಎಲ್‌ನಲ್ಲಿ ಪಾಲ್ಗೊಳ್ಳಲು ಸಮಸ್ಯೆಯಾಗಲಿದೆ. ಅಲ್ಲದೇ ಕೆರಿಬಿಯನ್ ಆಟಗಾರರನ್ನು ಬಬಲ್ ಟು ಬಬಲ್‌ಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯೂ ನಡೆಯಬೇಕಿದೆ. ಯುಎಇಗೆ ಆಗಮಿಸಿದ ಬಳಿಕ ಮೂರು ದಿನಗಳ ಕ್ವಾರಂಟೈನ್‌ನಲ್ಲೂ ಇರಬೇಕಾ ಗುತ್ತದೆ. ಇದೆಲ್ಲ ಮುಗಿಯುವಾಗ ಆರಂಭಿಕ ಸುತ್ತಿನ ಐಪಿಎಲ್ ಪಂದ್ಯಗಳೂ ಮುಗಿದಿರುತ್ತವೆ.
ಇದನ್ನೂ ಓದಿ :ಅಭಿಮಾನಿ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ವಿರಾಟ್!
ವಿಂಡೀಸ್ ಒಪ್ಪದಿದ್ದರೆ?
ಅಕಸ್ಮಾತ್ ಬಿಸಿಸಿಐ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡುವಿನ ಮಾತುಕತೆ ವಿಫಲವಾದರೆ ಆಗ ವಿಂಡೀಸ್ ಕ್ರಿಕೆಟಿಗರಿಗೆ ಮೊದಲ ಹಂತದ ಕೆಲವು ಐಪಿಎಲ್ ಪಂದ್ಯಗಳು ತಪ್ಪುವುದರಲ್ಲಿ ಅನುಮಾನವಿಲ್ಲ.
ಐಪಿಎಲ್‌ನಲ್ಲಿ ಆಡುತ್ತಿರುವ ವಿಂಡೀಸಿನ ಸ್ಟಾರ್ ಕ್ರಿಕೆಟಿಗರೆಂದರೆ ಕೈರನ್ ಪೊಲಾರ್ಡ್, ಕ್ರಿಸ್ ಗೇಲ್, ಡ್ವೇನ್ ಬ್ರಾವೊ, ಶಿಮ್ರನ್ ಹೆಟ್‌ಮೈರ್, ಜಾಸನ್ ಹೋಲ್ಡರ್, ನಿಕೋಲಸ್ ಪೂರಣ್, ಫ್ಯಾಬಿಯನ್ ಅಲನ್, ಕೀಮೊ ಪೌಲ್, ಸುನೀಲ್ ನಾರಾಯಣ್ ಮೊದಲಾದವರು.
ಹಾಗೆಯೇ 9ನೇ ಸಿಪಿಎಲ್‌ನಲ್ಲೂ ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರರನೇಕರು ಪಾಲ್ಗೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.