![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 31, 2021, 4:35 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಜತೆಗೆ ಸೋಂಕಿತರ ಸಾವು ಇಳಿಮುಖವಾಗಿದೆ.ಮೈಸೂರು, ಹಾಸನ, ಬೆಳಗಾವಿ ಹೊರತು ಪಡಿಸಿಬಹುತೇಕ ಕಡೆಗಳಲ್ಲಿ ಸೋಂಕು ಇಳಿಮುಖವಾಗುತ್ತಿದೆ.
ಭಾನುವಾರ ಹೊಸದಾಗಿ 20,378ಮಂದಿಗೆ ಸೋಂಕು ತಗುಲಿದ್ದು, 382ಸೋಂಕಿತರ ಸಾವಾಗಿದೆ. 28,053ಮಂದಿ ಗುಣಮುಖರಾಗಿದ್ದಾರೆ. ಈಪೈಕಿ ಬೆಂಗಳೂರಿನಲ್ಲಿ 4,734 ಸೋಂಕಿತರುಪತ್ತೆ ಯಾಗಿದ್ದು, 213 ಸೋಂಕಿತರು ಮೃತಪಟ್ಟಿ ದ್ದಾರೆ.ರಾಜ್ಯದಲ್ಲಿ ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳುಒಂದು ಸಾವಿರ (1.38 ಲಕ್ಷಕ್ಕೆ) ಹೆಚ್ಚಳವಾಗಿವೆ.
ಹೊಸಪ್ರಕರಣಗಳು 250, ಸೋಂಕಿತರ ಸಾವು 110,ಗುಣಮುಖರ ಸಂಖ್ಯೆ 14 ಸಾವಿರ ಕಡಿಮೆಯಾಗಿದೆ.ಸೋಂಕು ಪರೀಕ್ಷೆಗಳು ಕಡಿಮೆಯಾಗ ದಿದ್ದರೂ ಸತತನಾಲ್ಕನೇ ದಿನ ಹೊಸ ಪ್ರಕರಣಗಳು ಇಳಿಮುಖವಾಗಿವೆ.
500 ಆಸುಪಾಸಿನಲ್ಲಿದ್ದ ಸೋಂಕಿತರ ಸಾವು 400ಆಸುಪಾಸಿಗೆ ಕುಗ್ಗಿದೆ. ಇನ್ನು ಸೋಂಕು ಪರೀಕ್ಷೆಗಳಪಾಸಿಟಿವಿಟಿ ದರ ಶೇ.14.5 ದಾಖಲಾಗಿದ್ದು, ಗರಿಷ್ಠಪ್ರಮಾಣಕ್ಕೆ ಹೋಲಿಸಿದರೆ ಶೇ.20 ತಗ್ಗಿದೆ.ಭಾನುವಾರ ಹಾಸನದಲ್ಲಿ 2227, ಮೈಸೂರು 1559,ಬೆಳಗಾವಿ 1171 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದೆ.ಬೀದರ್, ಕಲಬುರಗಿ ಹಾಗೂ ಯಾದಗಿರಿಯಲ್ಲಿ 100ಆಸುಪಾಸಿನಲ್ಲಿ, ಕೊಡಗು, ಹಾವೇರಿ, ಬಾಗಲಕೋಟೆ,ರಾಯಚೂರು, ರಾಮನಗರ ದಲ್ಲಿ 200 ಆಸುಪಾಸಿನಲ್ಲಿಹೊಸ ಪ್ರಕರಣ ಗಳು ಪತ್ತೆಯಾಗಿವೆ. ಹಾವೇರಿ, ಹಾಸನ,ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಶಿವಮೊ ಗ್ಗ ದಲ್ಲಿ10ಕ್ಕೂ ಹೆಚ್ಚು ಸೋಂಕಿತರ ಸಾವಾಗಿದೆ.
You seem to have an Ad Blocker on.
To continue reading, please turn it off or whitelist Udayavani.