ಸೋಂಕಿತರಿಗೆ ಸೂಕ್ತ ಚಿಕಿತ್ಸೆ , ಮೂರು ಹೊತ್ತು ಊಟ
Team Udayavani, May 31, 2021, 7:14 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲೇ ತೀರಾ ಹಿಂದುಳಿದತಾಲೂಕಾಗಿರುವ ಬಾಗೇಪಲ್ಲಿ ಕ್ಷೇತ್ರದ ಅಭಿವೃದ್ಧಿಗೆವಿಶೇಷ ಒತ್ತು ನೀಡುತ್ತಿರುವ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ, ತಮ್ಮದೇ ಚಾರಿಟಬಲ್ ಟ್ರಸ್ಟ್ ಮೂಲಕಸಮಾಜ ಸೇವೆ ಮಾಡಿ ಜನಮನ ಗೆದ್ದಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಕ್ಷೇತ್ರದ ಜನರಿಗಾಗಿ ಅವರು ಕೈಗೊಂಡಿರುವ ಕ್ರಮಗಳು?
ಸೋಂಕುನಿಯಂತ್ರಿಸಲು ಅವರ ಕೊಡಗೆ ಬಗ್ಗೆ ಉದಯವಾಣಿಯೊಂದಿಗೆ ಮುಕ್ತವಾಗಿ ತಮ್ಮಅಭಿಪ್ರಾಯ ಹಂಚಿಕೊಂಡಿದ್ದಾರೆ.ಬಾಗೇಪಲ್ಲಿ ತಾಲೂಕಿನಲ್ಲಿ ಕೊರೊನಾಸೋಂಕಿನ ಪರಿಸ್ಥಿತಿ ಹೇಗಿದೆ?ಬಾಗೇಪಲ್ಲಿ ತಾಲೂಕಿನಲ್ಲಿ ಕೊರೊನಾ ಸೋಂಕುಸದ್ಯಕ್ಕೆ ನಿಯಂತ್ರಣದಲ್ಲಿದೆ. ಇತ್ತೀಚಿಗೆ ಕಾರ್ಯಪಡೆಸದಸ್ಯರು, ತಾಲೂಕು ಮಟ್ಟದ ಅ ಧಿಕಾರಿಗಳೊಂದಿಗೆಸಭೆ ನಡೆಸಿ ಕೋವಿಡ್ ನಿಯಂತ್ರಿಸಲು ಎಸಿಗೆಸೂಚಿಸಿದ್ದೇನೆ. ಈ ವಾರದಲ್ಲಿ ಟೆಸ್ಟ್ ಜಾಸ್ತಿಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸಲು ತಮ್ಮವೈಯಕ್ತಿಕ ಕೊಡುಗೆ ಏನು?
ತಮ್ಮ ಎಸ್.ಎನ್.ಸುಬ್ಟಾರೆಡ್ಡಿ ಚಾರಿಟಬಲ್ ಟ್ರಸ್ಟ್‌ಮೂಲಕ ನಿತ್ಯ 1200 ಜನರಿಗೆ ಬೆಳಗ್ಗೆ 8 ರಿಂದ 10ಗಂಟೆಯವರೆಗೆ ಊಟ ವಿತರಿಸುತ್ತಿದ್ದೇವೆ ಜೊತೆಗೆಬಾಗೇಪಲ್ಲಿಯಲ್ಲಿ ಇಂದಿರಾ ಕ್ಯಾಂಟೀನ್ ಇರಲಿಲ್ಲ.ಗೂಳೂರು ಸರ್ಕಲ್‌ನಲ್ಲಿ ತಾತ್ಕಾಲಿಕವಾಗಿ ಆರಂಭಿಸಿಮೂರು ಹೊತ್ತು ಊಟದ ವ್ಯವಸ್ಥೆ ಮಾಡಿಸಿದ್ದೇನೆ. ತುಂಬಾ ಕಷ್ಟದಲ್ಲಿರುವವರಿಗೆ ಟ್ರಸ್ಟ್ ಮೂಲಕಆಹಾರ ಕಿಟ್ ವಿತರಿಸುತ್ತಿದ್ದೇನೆ.
ಕ್ಷೇತ್ರದ ಜನರ ಆರೋಗ್ಯ ಸುಧಾರಣೆಗೆ ಒತ್ತು ಕೊಟ್ಟಿದ್ದೀರಿಯೇ?
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆಗುಡಿಬಂಡೆ, ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ತಮ್ಮಎಸ್.ಎನ್.ಸುಬ್ಟಾರೆಡ್ಡಿ ಚಾರಿಟಬಲ್ ಟ್ರಸ್ಟ್‌ನಮೂಲಕ ಎರಡು ತುರ್ತು ವಾಹನ ಒದಗಿಸಿದ್ದೇನೆ.ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲುಅಗತ್ಯ ಸಲಕರಣೆ ನೀಡಲು ಬದ್ಧನಾಗಿದ್ದೇನೆ. ಎರಡೂಆಸ್ಪತ್ರೆಗೆ ಶಾಸಕರ ಕ್ಷೇತ್ರಾಭಿವೃದ್ಧಿ ನಿ ಧಿಯಿಂದ ತಲಾ25 ಲಕ್ಷ ರೂ. ನೆರವು, ಸೋಂಕು ನಿಯಂತ್ರಣಕ್ಕೆ ಎಲ್ಲಾಸೌಲಭ್ಯ ನೀಡಲು ತಯಾರಾಗಿದ್ದೇನೆ. ಕ್ಷೇತ್ರದ ಜನರಆರೋಗ್ಯ ನನಗೆ ಮುಖ್ಯ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಸಮರ್ಪಕ ಕಾರ್ಯನಿರ್ವಹಿಸುತ್ತಿದ್ದಿಯೇ?
ಕ್ಷೇತ್ರದ ಗುಡಿಬಂಡೆ ಮತ್ತು ಬಾಗೇಪಲ್ಲಿಸಾರ್ವಜನಿಕ ಆಸ್ಪತ್ರೆಗೆ ಐದು ವೆಂಟಿಲೇಟರ್‌ಪೂರೈಕೆ ಮಾಡಲಾಗಿದೆ. ಅದರಲ್ಲಿ ಮೂರುಮಾತ್ರ ಅಳವಡಿಸಲಾಗಿದೆ. ಉಳಿದ ಎರಡುತಾಂತ್ರಿಕ ಸಮಸ್ಯೆ, ತಜ್ಞ ಸಿಬ್ಬಂದಿ ಕೊರತೆಯಿಂದಅಳವಡಿಸಿಲ್ಲ. ಸರ್ಕಾರ ಪ್ರಧಾನಿ ನೀಡಿರುವವೆಂಟಿಲೇಟರ್‌ಅನ್ನು ಗೋದಾಮಿನಲ್ಲಿಡುವ ಬದಲಿಗೆಕೂಡಲೇ ತಜ್ಞ ವೈದ್ಯರು, ಸಿಬ್ಬಂದಿ ನೇಮಿಸಿ ತಾಂತ್ರಿಕಸಮಸ್ಯೆ ನಿವಾರಿಸಬೇಕು.
ಬಾಗೇಪಲ್ಲಿ ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದೀಯಾ?
ಬ್ಲಾಕ್ ಫಂಗಸ್ ಕಾಣಿಸಿಕೊಂಡ ಸೋಂಕಿತನಿಗೆವಿಕ್ಟೋರಿಯ, ಪಾಸಿಟಿವ್ ರಹಿತ ವ್ಯಕ್ತಿಗೆ ಬೋರಿಂಗ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.ಬೆಂಗಳೂರಿಗೆ ಬರುವ ತಾಲೂಕಿನ ಸೋಂಕಿತರನೆರವಿಗೆ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದೇನೆ. ಜೊತೆಗೆನನ್ನ ಮೊಬೈಲ್ ನಂಬರ್‌ಗೆ ಕರೆ ಮಾಡಿದವರಿಗೆಸಹಾಯ ಮಾಡಿದ್ದೇನೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು– ಸಿಬ್ಬಂದಿ ಕೊರತೆ ಇದಿಯೇ?
ಪ್ರಾಥಮಿಕ ಆರೋಗ್ಯ ಕೇಂದ್ರಗಳು,ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವೈದ್ಯರು ಮತ್ತು ಸಿಬ್ಬಂದಿ ಕೊರತೆಮೊದಲಿನಿಂದ ಇದೆ. ಭರ್ತಿ ಮಾಡಲು ಸರ್ಕಾರಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇನೆ. ಇದಕ್ಕೆ ಸಚಿವರುಭರವಸೆ ನೀಡಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಮಾದರಿ ಮಾಡುವ ಯೋಜನೆ ಇದಿಯೇ?
ಕ್ಷೇತ್ರದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ತಾಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್ 5 ಎಕರೆಜಮೀನು ನೀಡಲಾಗಿದೆ. ಸರ್ಕಾರ 8 ಕೋಟಿ ರೂ.ಅನುದಾನ ನೀಡುತ್ತದೆ. 100 ಹಾಸಿಗೆಗಳ ಆಸ್ಪತ್ರೆನಿರ್ಮಾಣವಾಗಲಿದೆ. ಜನರ ಆರೋಗ್ಯ ಕಾಪಾಡಲುಏನು ಸಾಧ್ಯವೋ ಅವೆಲ್ಲವೋ ಮಾಡುತ್ತಿದ್ದೇನೆ.ಕ್ಷೇತ್ರದ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ.
ಕೊರೊನಾ ಸೋಂಕು ನಿಯಂತ್ರಿಸಲುಸರ್ಕಾರ ಸ್ಪಂದಿಸಿದೆಯೇ?
ಕೊರೊನಾ ಸೋಂಕಿನ ಸಂಕಷ್ಟದಲ್ಲಿ ನಿರೀಕ್ಷಿತಪ್ರಮಾಣದಲ್ಲಿ ಸರ್ಕಾರ ಸ್ಪಂದಿಸುತ್ತಿಲ್ಲ.ಬೆಂಗಳೂರಿನಲ್ಲಿ ಜನ ಒಂದು ಬೆಡ್ ಕೊಡಿಸಿ ಎಂದುಕೇಳುತ್ತಾರೆ. ನಾವು ಯಾರಿಗೆ ಫೋನ್ ಮಾಡಬೇಕು?ಎಲ್ಲಾ ಸ್ವತ್ಛ ಆಫ್ ಬರುತ್ತವೆ. ಯಾವ ಅ ಧಿಕಾರಿಗೆಮಾಡಿದರೂ ಮತ್ತೆ ಮಾಡುತ್ತೇನೆ ಎಂದುಹೇಳುತ್ತಾರೆ. ಜನರು ನಮಗೆ ಒಂದು ಬೆಡ್‌ಕೊಡಿಸಿಲ್ಲ ಅಂದುಕೊಳ್ಳುತ್ತಾರೆ. ವಾಸ್ತವಾಂಶ ಅವರಿಗೆಗೊತ್ತಿಲ್ಲ. ಮನವರಿಕೆ ಮಾಡಿಕೊಡುವ ಕೆಲಸಮಾಡುತ್ತಿದ್ದೇವೆ.
ಸಾರ್ವಜನಿಕ ಅಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ನಿರ್ಮಿಸಲು ಏನು ಕ್ರಮ ಕೈಗೊಂಡಿದ್ದೀರಿ?
ಬಾಗೇಪಲ್ಲಿ ಆಸ್ಪತ್ರೆಯಲ್ಲಿ ಟೈಟಾನ್ ಕಂಪನಿಯವರು ಸಿಎಸ್‌ಆರ್ ನಿಧಿ ಯಿಂದ ಆಮ್ಲಜನಕ ಘಟಕ ನಿರ್ಮಾಣ ಮಾಡುತ್ತಿದ್ದಾರೆ.ಜೂನ್ ಅಂತ್ಯದೊಳಗೆ ಕಾಮಗಾರಿಮುಗಿಯಲಿದೆ. ಇದರಿಂದ ಸೋಂಕಿತರಿಗೆಅನುಕೂಲವಾಗಲಿದೆ. ಕೊರೊನಾ ಸೋಂಕಿನ ಬಗ್ಗೆ ಕ್ಷೇತ್ರದ ಜನರಿಗೆನಿಮ್ಮ ಸಲಹೆ ಏನು?ಕೊರೊನಾ ಸೋಂಕು ನನಗೂ ಬಂದಿತ್ತು. ಊಟನೀಡುತ್ತಿದ್ದ ಪುತ್ರಿಗೂ ಆವರಿಸಿತ್ತು. ನಾವು ಕಷ್ಟಅನುಭವಿಸಿದ್ದೇವೆ. ಜನ ಸೋಂಕು ಲಘುವಾಗಿ ಪರಿಗಣಿಸಬಾರದು. ಮನೆಯಲ್ಲಿದ್ದು ಆರೋಗ್ಯಕಾಪಾಡಿಕೊಳ್ಳಬೇಕು.
ಕಠಿಣ ಲಾಕ್ಡೌನ್ನಿಂದ ರೈತರು ಬೆಳೆದ ಬೆಳೆ ಜಮೀನಿನಲ್ಲೇ ಉಳಿದಿದೆ. ಇದಕ್ಕೆ ಏನು ಕ್ರಮಕೈಗೊಂಡಿದ್ದೀರಿ?
ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿ ಸರಿ. ಆದರೆ,ತರಕಾರಿ ಮಾರಾಟಕ್ಕೆ ರೈತರಿಗೆ ಅವಕಾಶ ಬೇಕಿದೆ.ಸರ್ಕಾರ ಕೂಡಲೇ ಎಪಿಎಂಸಿ ಮೂಲಕ ಬೆಳೆ ಖರೀದಿಮಾಡಿ ಕೋಲ್ಡ್‌ಸ್ಟೋರೇಜ್ ಮಾಡಿ, ಸೋಂಕುಕಡಿಮೆಯಾದ ಬಳಿಕ ಮಾರಾಟ ಮಾಡಲಿ ಎಂದುತೋಟಗಾರಿಕೆ ಸಚಿವರಿಗೆ ಮನವಿ ಮಾಡಿದ್ದೇವೆ.ಆದರೆ, ಏನೂ ಪ್ರಯೋಜನವಾಗಿಲ್ಲ.
ಎಂ.ಎ.ತಮೀಮ್ ಪಾಷ/ಸಿ.ವೆಂಕಟೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.