ವಿದೇಶಿ ಆಟಗಾರರ ಅನುಪಸ್ಥಿತಿ ಇದ್ದರೂ ಐಪಿಎಲ್ ನ ಉಳಿದ ಪಂದ್ಯಗಳು ನಡೆಯುತ್ತವೆ : ಶುಕ್ಲಾ
ವಿದೇಶಿ ಆಟಗಾರರ ಅಲಭ್ಯತೆ ಇದ್ದರೇ, ಫ್ರಾಂಚೈಸಿಗಳು ಬದಲಿ ಆಟಗಾರರನ್ನು ನೋಡಬಹುದು : ರಾಜೀವ್ ಶುಕ್ಲಾ
Team Udayavani, May 31, 2021, 7:55 PM IST
ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆಯ ಹಠಾತ್ ಏರಿಕೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉಳಿದ ಪಂದ್ಯಗಳು ವಿದೇಶಿ ಆಟಗಾರರ ಅಲಭ್ಯತೆಯಿದ್ದರೂ ನಡೆದೇ ನಡೆಯುತ್ತದೆ ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಐಪಿಎಲ್ 2021 ನ ಉಳಿದ ಪಂದ್ಯಗಳು ಬರುವ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಯುಎಇಯಲ್ಲಿ ನಡೆಸಲಾಗುತ್ತದೆ ಎಂದು ಕ್ರಿಕೆಟ್ ಮಂಡಳಿ ಈಗಾಗಲೇ ನಿರ್ಧರಿಸಿದೆ. ಅಧಿಕೃತ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಕಳೆದ ವರ್ಷ ಯುಎಇ ನಲ್ಲಿ ಅತ್ಯಂತ ಸುರಕ್ಷಿತ ಸುರಕ್ಷಿತ ಬಯೋ ಬಬಲ್ಸ್ ಅಥವಾ ಜೈವಿಕ ಗುಳ್ಳೆಯೊಂದಿಗೆ ಯಶಸ್ವಿ ಐಪಿಎಲ್ ನನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 44473 ಜನ ಗುಣಮುಖ; 16604 ಹೊಸ ಪ್ರಕರಣ ಪತ್ತೆ
ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಒಳಗೊಂಡು ಕೆಲವು ಆಟಗಾರರು ಅಂತಾರಾಷ್ಟ್ರೀಯ ಸರಣಿಗಳು ಇರುವ ಕಾರಣದಿಂದ ಐಪಿಎಲ್ ನ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯತೆ ಇಲ್ಲ ಎಂಬ ಸುದ್ದಿಗಖು ಬಂದ ಬೆನ್ನಿಗೆ ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.
ಖಲೀಜ್ ಟೈಮ್ಸ್ ಗೆ ಪ್ರತಿಕ್ರಿಯಿಸಿದ ಶುಕ್ಲಾ, “ನಾವು ವಿದೇಶಿ ಆಟಗಾರರ ಸಮಸ್ಯೆಯನ್ನು ಚರ್ಚಿಸಿದ್ದೇವೆ. ಐಪಿಎಲ್ ನ 2021ರ ಆವೃತ್ತಿಯನ್ನು ಪೂರ್ಣಗೊಳಿಸುವುದರ ಮೇಲೆ ನಮ್ಮ ಮುಖ್ಯ ಗಮನವಿದೆ. ಅದನ್ನು ಅರ್ಧದಾರಿಯಲ್ಲೇ ಬಿಡಬಾರದು. ಎಲ್ಲಾ ಆಟಗಾರರ ಲಭ್ಯತೆಯನ್ನು ನಾವು ಭಯಸುತ್ತೇವೆ ಆದರೇ, ಅವರ ಅನುಪಸ್ಥಿತಿ ಇದ್ದರೂ ಐಪಿಎಲ್ ನ ಉಳಿದ ಪಂದ್ಯಗಳು ನಡೆದೇ ನಡೆಯುತ್ತವೆ ಎಂದು ಹೇಳಿದ್ದಾರೆ.
ಭಾರತೀಯ ಆಟಗಾರರು ಇದ್ದಾರೆ, ಕೆಲವು ವಿದೇಶಿ ಆಟಗಾರರ ಅನುಪಸ್ಥಿತಿ ಸಾಧ್ಯತೆ ಇರಬಹದು. ಐಪಿಲ್ ನ ಈ ಆವೃತ್ತಿ ಪೂರ್ಣಗೊಳ್ಳುತ್ತದೆ. ವಿದೇಶಿ ಆಟಗಾರರ ಅಲಭ್ಯತೆ ಇದ್ದರೇ, ಫ್ರಾಂಚೈಸಿಗಳು ಬದಲಿ ಆಟಗಾರರನ್ನು ನೋಡಬಹುದು ಎಂದು ಅವರು ತಿಳಿಸಿದ್ದಾರೆ.
ವಿದೇಶಿ ಆಟಗಾರರ ಅಲಭ್ಯತೆ ಇದ್ದರೇ ಪ್ರಾಂಚೈಸಿಗಳು ಖಂಡಿತವಾಗಿಯೂ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಐಪಿಎಲ್ ನ ಉಳಿದ ಪಂದ್ಯಗಳು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಕ್ರಿಕೆಟ್ ಮಂಡಳಿ ನಿರ್ಧರಿಸಿದಂತೆಯೇ ಪಂದ್ಯ ನಡೆಯುತ್ತದೆ.
ಬಿಸಿಸಿಐ ಸದಸ್ಯರು ಯುಎಇಗೆ ಬಂದಾಗ ಶೀಘ್ರದಲ್ಲೇ ವೇಳಾಪಟ್ಟಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. “ನಾನು ಈಗಾಗಲೇ ಯುಎಇ ಅಲ್ಲಿದ್ದೇನೆ. ಬಿಸಿಸಿಐ ಪದಾಧಿಕಾರಿಗಳು, ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹಾಗೂ ಅವರ ತಂಡ ಒಂದೆರಡು ದಿನಗಳಲ್ಲಿ ಇಲ್ಲಿಗೆ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾವು ಇಲ್ಲಿ ಕ್ರಿಕೆಟ್ ಮಂಡಳಿ ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆ. ಮತ್ತು ಅದರ ಪ್ರಕಾರ, ವೇಳಾಪಟ್ಟಿಯನ್ನು ಮಾಡಲಾಗುವುದು, ಆದ್ದರಿಂದ ಪಂದ್ಯಾವಳಿ ಕಳೆದ ವರ್ಷ ಇಲ್ಲಿ ನಡೆದಂತೆ ಅತ್ಯಂತ ಸುಗಮವಾಗಿ ನಡೆಯುತ್ತದೆ.
ಏನೇ ಇರಲಿ, ಭಾರತೀಯ ಕೋವಿಡ್ ನ ಮಾರ್ಗಸೂಚಿಗಳು ಮತ್ತು ಯುಎಇ ಮಾರ್ಗಸೂಚಿಗಳು ಅನುಸರಿಸಿ ಉಳಿದ ಪಂದ್ಯಗಳನ್ನು ಆಯೋಜಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಜೂನ್ ಅಂತ್ಯದ ವರೆಗೆ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ವಿನಾಯಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.