ಸಂಕಷ್ಟದಲ್ಲಿ ನೆರವು ನೀಡುವುದು ಕರ್ತವ್ಯ
Team Udayavani, May 31, 2021, 9:01 PM IST
ತುಮಕೂರು: ಕೊರೊನಾ ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಅರ್ಹರಿಗೆ ನೆರವುನೀಡುವುದು ಪ್ರತಿಯೊಬ್ಬ ನಾಗರಿಕರಕರ್ತವ್ಯವಾಗಿದೆ. ಬಡವರನ್ನುಗುರುತಿಸಿ ಅವರಿಗೆ ಆಹಾರ ಕಿಟ್‌ನೀಡುತ್ತಿರುವುದು ಉತ್ತಮ ಕಾರ್ಯಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಸಿದ್ಧರಾಮೇಶ್ವರ ಬಡಾವಣೆ ಹಾಗೂ ಬಟವಾಡಿ ದಕ್ಷಿಣದ ಬಸವ ಭವನದಲ್ಲಿ ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿಯಿಂದನಡೆದ ಸಾರ್ವಜನಿಕರು, ಪೌರಕಾರ್ಮಿಕರಿಗೆ ಆಹಾರಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿ,ಮಹಾಲಕ್ಷ್ಮೀ ಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾಸಮಿತಿ ಅವರು ಸುಮಾರು 10-12 ವರ್ಷದಿಂದಸಾಮಾಜಿಕ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯ ಸಂತಸದ ವಿಚಾರ: ಕೊರೊನಾಪರಿಸ್ಥಿತಿಯಲ್ಲಿ ಸದರಿ ಸಮಿತಿಯವರು ಈ ಭಾಗದಬಡ ಕುಟುಂಬದ ಜನರನ್ನು ಗುರುತಿಸಿ, ಜನರಿಗೆಆಹಾರ ಕಿಟ್ ನೀಡಿ, ಸಾಮಾಜಿಕ ಕಾರ್ಯಮಾಡುತ್ತಿರುವುದು ಸಂತಸದ ವಿಚಾರ. ನಗರದ ಎಲ್ಲಾವಾರ್ಡ್‌ಗಳಲ್ಲಿ ಸಮಿತಿಯವರುಸಾರ್ವಜನಿಕರಿಗೆ ಸಹಾಯಮಾಡಿದರೆ, ಸರ್ಕಾರಕ್ಕೆ ಹಾಗೂತುಮಕೂರು ಮಹಾನಗರಪಾಲಿಕೆಗೆ ಹೊರೆ ಕಮ್ಮಿಯಾಗಲಿದೆಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ಪೌರಕಾರ್ಮಿಕರುಕರ್ತವ್ಯ ನಿರ್ವಹಿಸುವುದರೊಂದಿಗೆ ತಮ್ಮ ಹಾಗೂತಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವುದುತುಂಬಾ ಮುಖ್ಯವಾಗಿದೆ. ತಮಗೆ ಯಾವುದೇ ರೀತಿಕುಂದು ಕೊರತೆ ಇದ್ದರು ನಿಮ್ಮ ಸಹಾಯಕ್ಕೆನಾವಿರುತ್ತೇವೆ ಎಂದು ನುಡಿದರು.ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆರೇಣುಕಾ, ಪಿಎಸ್‌ಐ ಶೇಷಾದ್ರಿ, ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷಸೋಮಶೇಖರ್, ಪ್ರಧಾನ ಕಾರ್ಯದರ್ಶಿಜಯಪ್ರಕಾಶ್, ಖಜಾಂಚಿ ಹಾಗೂ ಕೈಗಾರಿಕೋದ್ಯಮಿಜಿ.ಜಗದೀಶ್, ಎಚ್.ಎಂ.ಶಿವಕುಮಾರಯ್ಯ,ಶೇಖರ್ ಹಾಜರಿದ್ದರು.ವಿತರಣೆ ಮಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.