ಉತ್ತಮ ಸಾಧನೆಗೆ ಕೋವಿಡ್ ಅಡ್ಡಿ: ಖಮರ್
Team Udayavani, May 31, 2021, 11:45 PM IST
ದುಬಾೖ : ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವ ವನಿತೆಯರು ಹತ್ತಕ್ಕೆ ಹತ್ತು ಪದಕ ಗೆದ್ದಿರಬಹುದು, ಆದರೆ ಕೋವಿಡ್‌ನಿಂದ ಅಭ್ಯಾಸಕ್ಕೆ ಅಡ್ಡಿಯಾಗದೇ ಇದ್ದಲ್ಲಿ ಇನ್ನೂ ಉತ್ತಮ ಫಲಿತಾಂಶ ಕಾಣಬಹುದಿತ್ತು ಎಂದು ರಾಷ್ಟ್ರೀಯ ಕೋಚ್ ಮೊಹಮ್ಮದ್ ಅಲಿ ಖಮರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕೂಟದಲ್ಲಿ ಪಾಲ್ಗೊಂಡ ಭಾರತದ 10 ವನಿತೆಯರು ಒಟ್ಟು 10 ಪದಕ ಜಯಿಸಿದ್ದಾರೆ. ಆದರೆ ಚಿನ್ನ ಮಾತ್ರ ಒಂದೇ. ಉಳಿದಂತೆ 3 ಬೆಳ್ಳಿ, 6 ಕಂಚಿನ ಪದಕಗಳಾಗಿದ್ದವು.
“ನಾವು ಇನ್ನೂ ಹೆಚ್ಚಿನ ಚಿನ್ನ ಗೆಲ್ಲಬಹುದಿತ್ತು. ಬೆಳ್ಳಿ ಗೆದ್ದವರು ಸೂಕ್ಷ್ಮ ಅಂತರದಲ್ಲಿ ಚಾಂಪಿಯನ್ ಪಟ್ಟದಿಂದ ವಂಚಿತರಾದರು. ಎಲ್ಲರೂ ಗರಿಷ್ಠ ಸಾಮರ್ಥ್ಯವನ್ನೇ ತೋರಿದರು. ಆದರೆ ಇನ್ನಷ್ಟು ಉತ್ತಮ ತರಬೇತಿ ದೊರೆತದ್ದೇ ಆದರೆ ನಮ್ಮವರಿಂದ ಇನ್ನೂ ಉತ್ತಮ ಪ್ರದರ್ಶನ ಹೊಮ್ಮುತ್ತಿತ್ತು. ಇದಕ್ಕೆ ಕೊರೊನಾ ನಿರ್ಬಂಧ ಎದುರಾಯಿತು’ ಎಂದು ಖಮರ್ ಹೇಳಿದರು.
ವನಿತೆಯರ ಕೊನೆಯ ಪದಕ ಸ್ಪರ್ಧೆಯಲ್ಲಿ ಭಾರತದ ಅನುಪಮಾ (+81 ಕೆ.ಜಿ.) ಕೂಡ ಬೆಳ್ಳಿಗೆ ತೃಪ್ತಿಪಟ್ಟರು. ಹಾಲಿ ಚಾಂಪಿಯನ್ ಪೂಜಾ ರಾಣಿ ಮಾತ್ರ ಚಿನ್ನದ ಒಡತಿ ಎನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
MUST WATCH
ಹೊಸ ಸೇರ್ಪಡೆ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.