ಎರಡನೇ ಅಲೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣ; ಸಾವಿನ ಸಂಖ್ಯೆ ಅರ್ಧದಷ್ಟು ಕಡಿಮೆ
Team Udayavani, Jun 1, 2021, 10:38 AM IST
ಮುಂಬಯಿ: ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದ್ದರೂ ಸಾವಿನ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ಎರಡನೇ ಅಲೆ ತೀವ್ರವಾಗಿದ್ದರೂ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.08ರಷ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
2020ನೇ ಮಾ. 9ರಂದು ರಾಜ್ಯದಲ್ಲಿ ಮೊದಲ ಕೊರೊನಾ ರೋಗಿಯನ್ನು ಪತ್ತೆ ಮಾಡಲಾಯಿತು. 2020ರ ಡಿಸೆಂಬರ್‌ನಲ್ಲಿ ಮೊದಲ ಅಲೆ ಅಪ್ಪಳಿಸಿತು. ಆದಾಗ್ಯೂ 2021ರ ಜನವರಿ ಬಳಿಕ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಲು ಪ್ರಾರಂಭಿಸಿತು. 2021ರ ಮಾರ್ಚ್‌ನಿಂದ ಎರಡನೇ ಅಲೆ ಅಪ್ಪಳಿಸಿ ಜನಜೀವನ ಅಸ್ತವ್ಯಸ್ತಗೊಂಡಿತು. ಧಾರಾವಿ ಮೊದಲಾದ ಕೊಳೆಗೇರಿ ಪ್ರದೇಶಗಳಲ್ಲಿ ಕೊರೊನಾ ವೈರಸ್ ಅನ್ನು ಕಟ್ಟಿಹಾಕುವಲ್ಲಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿದ್ದವು.
ಮರಣ ಪ್ರಮಾಣದಲ್ಲಿ ಪರ್ಭಾಣಿಗೆ ಎರಡನೇ ಸ್ಥಾನ :
ಮೊದಲ ಅಲೆಯಲ್ಲಿ ಡಿಸೆಂಬರ್ 2020ರ ವರೆಗೆ ರಾಜ್ಯದ ಮರಣ ಪ್ರಮಾಣವು ಶೇ. 2.56ರಷ್ಟಿತ್ತು. ಈ ಅವಧಿಯಲ್ಲಿ ಅತೀ ಹೆಚ್ಚು ಮರಣ ಪ್ರಮಾಣ ಮುಂಬಯಿಯಲ್ಲಿ ಶೇ. 3.79ರಷ್ಟಿತ್ತು. ಪರ್ಭಾಣಿಯಲ್ಲಿ ಶೇ. 3.71, ಅಕೋಲಾದಲ್ಲಿ ಶೇ. 3.28, ಸಾಂಗ್ಲಿಯಲ್ಲಿ ಶೇ. 3.53, ಕೊಲ್ಹಾಪುರದಲ್ಲಿ ಶೇ. 3.38, ಸತಾರಾದಲ್ಲಿ ಶೇ. 3.23, ರತ್ನಾಗಿರಿಯಲ್ಲಿ ಶೇ. 3.37, ಸೋಲಾಪುರದಲ್ಲಿ ಶೇ. 3.30, ಉಸ್ಮಾನಾಬಾದ್‌ನಲ್ಲಿ ಶೇ. 3.19, ನಾಂದೇಡ್‌ನಲ್ಲಿ ಶೇ. 3.11, ಬೀಡ್‌ನಲ್ಲಿ ಶೇ. 3.05ರಷ್ಟಿತ್ತು.
ಎರಡನೇ ಅಲೆಯಲ್ಲಿ ಶೇ. 1.08ರಷ್ಟು ಸಾವಿನ ಪ್ರಮಾಣ :
2021ರ ಜನವರಿಯಿಂದ ಮೇ ವರೆಗಿನ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.08ಕ್ಕೆ ಇಳಿದಿದೆ. ಎರಡನೇ ಅಲೆಯಲ್ಲಿ ಯಾವುದೇ ಜಿಲ್ಲೆಯ ಸಾವಿನ ಪ್ರಮಾಣವು ಮೇ 2020ರ ವರೆಗೆ ಶೇ. 3ಕ್ಕಿಂತ ಹೆಚ್ಚಾಗಿಲ್ಲ. ಈ ಅವಧಿಯಲ್ಲಿ ಅತೀ ಹೆಚ್ಚು ಮರಣ ಪ್ರಮಾಣ ಕೊಲ್ಹಾಪುರದಲ್ಲಿ ಶೇ. 2.89ರಷ್ಟಿತ್ತು. ಅದರ ಬಳಿಕ ಸಿಂಧುದುರ್ಗಾದಲ್ಲಿ ಶೇ. 2.51, ನಾಂದೇಡ್‌ನಲ್ಲಿ ಶೇ. 2.17, ಸೋಲಾಪುರದಲ್ಲಿ ಶೇ. 2.03 ಮತ್ತು ನಂದೂರ್ಬಾರ್‌ನಲ್ಲಿ ಶೇ. 2.05ರಷ್ಟು ಮರಣ ಪ್ರಮಾಣದೊಂದಿಗೆ ಅನಂತರದ ಸ್ಥಾನದಲ್ಲಿವೆ.
ಮುಂಬಯಿಯ ಮರಣ ಪ್ರಮಾಣ ಇಳಿಕೆ :
ಮೊದಲ ಅಲೆಯಲ್ಲಿ ಮುಂಬಯಿಯಲ್ಲಿ 2,93,436 ರೋಗಿಗಳನ್ನು ಹೊಂದಿದ್ದು, ಸಾವಿನ ಸಂಖ್ಯೆ 11,116 ಆಗಿತ್ತು. ಒಟ್ಟಾರೆ ಮರಣ ಪ್ರಮಾಣ ಶೇ. 3.79ರಷ್ಟಿತ್ತು. ಆದರೆ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂಬಯಿ ಯಶಸ್ವಿಯಾಗಿದೆ. ಈ ಮಧ್ಯೆ ಪುಣೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗಿದ್ದರೂ ಪುರಸಭೆಯ ಸಮಯೋಚಿತ ಕಾರ್ಯಗಳಿಂದ ಕ್ರಮೇಣ ನಿಯಂತ್ರಣಕ್ಕೆ ಬಂದಿದೆ.
ಮರಣ ಪ್ರಮಾಣ ಕಡಿಮೆ :
ಎರಡನೇ ಅಲೆಯಲ್ಲಿ ಪ್ರಮಾಣವು ಕಡಿಮೆ ಇದೆ. ಮೊದಲ ಅಲೆಯಲ್ಲಿ ಗಡಿcರೋಲಿ ಅತ್ಯಂತ ಕಡಿಮೆ ಮರಣ ಪ್ರಮಾಣವನ್ನು ಅಂದರೆ ಶೇ. 1.02 ರಷ್ಟನ್ನು ಹೊಂದಿತ್ತು. ಆದರೆ ಎರಡನೇ ಅಲೆಯಲ್ಲಿ ಬುಲ್ಡಾಣದಲ್ಲಿ ಶೇ. 0.38ರಷ್ಟನ್ನು ಹೊಂದಿ ಕಡಿಮೆ ಮರಣ ಪ್ರಮಾಣ ಹೊಂದಿದೆ. 2020ರ ಮಾರ್ಚ್ ನಿಂದ ಡಿಸೆಂಬರ್‌ವರೆಗಿನ ಒಂಬತ್ತು ತಿಂಗಳಲ್ಲಿ ಸುಮಾರು 19 ಲಕ್ಷ ರೋಗಿಗಳಲ್ಲಿ ಸುಮಾರು 49,000 ರೋಗಿಗಳು ಸಾವನ್ನಪ್ಪಿದ್ದಾರೆ.
ಐದು ತಿಂಗಳಲ್ಲಿ ರೋಗಿಗಳ ಸಂಖ್ಯೆ ಸುಮಾರು 36 ಲಕ್ಷಕ್ಕೆ ಏರಿಕೆ :
ಜನವರಿಯಿಂದ ಮೇ ವರೆಗಿನ ಐದು ತಿಂಗಳ ಅವಧಿಯಲ್ಲಿ ರೋಗಿಗಳ ಸಂಖ್ಯೆ ಸುಮಾರು 36 ಲಕ್ಷಕ್ಕೆ ಏರಿತು ಮತ್ತು ಸಾವಿನ ಸಂಖ್ಯೆ ಸುಮಾರು 39,000ರಷ್ಟಿತ್ತು. ಐದು ತಿಂಗಳಲ್ಲಿ ಸಾವಿನ ಸಂಖ್ಯೆ ಒಂಬತ್ತು ತಿಂಗಳಿಗಿಂತ ಹೆಚ್ಚಾಗಿದ್ದರೂ ಈ ಅವಧಿಯಲ್ಲಿ ಸಾವಿನ ಸಂಖ್ಯೆಯು ಮೊದಲ ಅಲೆಯ ಸಾವಿನ ಸಂಖ್ಯೆಯಷ್ಟು ವೇಗವಾಗಿ ಹೆಚ್ಚಾಗದೇ ಇರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಪೂರ್ವ ತಯಾರಿ, ಚಿಕಿತ್ಸೆಯ ನಿರ್ದೇಶನ, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ವಿವಿಧ ಕ್ರಮಗಳಿಂದಾಗಿ ಸಾವನ್ನು ತಡೆಯಲಾಯಿತು. ಎರಡನೇ ಅಲೆಯಲ್ಲಿ ಆಮ್ಲಜನಕ ಲಭ್ಯತೆಯ ಬಿಕ್ಕಟ್ಟು ಇತ್ತು. ಆದರೆ ಸಾವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಸಾವಿನ ವಿಶ್ಲೇಷಣಾ ಸಮಿತಿಯ ಮುಖ್ಯಸ್ಥ ಡಾ| ಅವಿನಾಶ್ ಸುಪೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಗಿಗಳು ಚೇತರಿಕೆ :
ಎರಡನೇ ಅಲೆಯಲ್ಲಿ ವೈರಸ್ ಸ್ವರೂಪವನ್ನು ಬದಲಿಸಿದ್ದು, ಅದು ವೇಗವಾಗಿ ಹರಡುತ್ತಿದ್ದರೂ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಮರಣ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿದೆ. ಮೊದಲ ಅಲೆಗೆ ಹೋಲಿಸಿದರೆ ಈ ಬಾರಿ ಪೂರ್ವಸಿದ್ಧತೆ, ಹೆಚ್ಚಿದ ಪರೀûಾ ಸಾಮರ್ಥ್ಯ, ಸೋಂಕನ್ನು ನಿಯಂತ್ರಿಸಲು ತೆಗೆದುಕೊಂಡ ಉತ್ತಮ ಕ್ರಮಗಳು ಕಡಿಮೆ ಮರಣಕ್ಕೆ ಕಾರಣವಾಗಿವೆ.-ಡಾ| ಶಶಾಂಕ್ ಜೋಶಿ, ಮುಖ್ಯಸ್ಥರು, ಕೋವಿಡ್ ಕಾರ್ಯಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.