ಅರಣ್ಯ ಸಿಬ್ಬಂದಿಗೆ ಲಸಿಕೆ ನೀಡಿದ್ದಕ್ಕೆ ನೋಟಿಸ್ ಜಾರಿಗೊಳಿಸಿದ್ದು ಸರಿನಾ?
Team Udayavani, Jun 1, 2021, 12:40 PM IST
ಹುಣಸೂರು: ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ತಾಲೂಕು ಆರೋಗ್ಯಾಧಿಕಾರಿಗಳಿಗೆ (ಟಿಎಚ್‌ಒ) ಜಿಲ್ಲಾ ಆರೋಗ್ಯಾಧಿಕಾರಿಗಳು ನೋಟಿಸ್ ಜಾರಿಗೊಳಿಸಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಮೂರು ತಾಲೂಕುಗಳ ಆರೋಗ್ಯಾಧಿಕಾರಿಗಳು ಹಾಗೂ ಅರಣ್ಯಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ನೀಡಿರುವುದಕ್ಕೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಚ್.ಡಿ.ಕೋಟೆ ಮತ್ತು ನಂಜನಗೂಡುತಾಲೂಕುಆರೋಗ್ಯಾಧಿಕಾರಿಗಳಿಗೆ ತಕ್ಷಣವೇ ಸಮಜಾಯಿಷಿ ನೀಡುವಂತೆ ಸೂಚಿಸಿ ಮೇ 28ರಂದು ನೋಟಿಸ್ ನೀಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ನೀಡಿರುವುದನ್ನು ಪ್ರಶ್ನಿಸಿ ಜಾರಿಗೊಳಿಸಿರುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆಪತ್ರಿಕೆಯೊಂದಿಗೆಮಾತನಾಡಿದನಾಗರಹೊಳೆ ಹುಲಿಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್,”ಕಳೆದಒಂದುವರ್ಷದಿಂದ ಕೋವಿಡ್ ಮೈಸೂರು ಜಿಲ್ಲೆಯಲ್ಲಿ ಹೆಚ್ಚಿದ್ದು, ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆಯೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಂಚಿನ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಅರಣ್ಯ ಸಿಬ್ಬಂದಿಗಳನ್ನು ಕೋವಿಡ್ ವಾರಿಯರ್ಸ್ ಗಳೆಂದು ಪರಿಗಣಿಸಿದೆ. ಹೀಗಾಗಿ ಸಿಬ್ಬಂದಿ ಆಯಾ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲೇ ಲಸಿಕೆ ಪಡೆದಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಳೆದ 15 ತಿಂಗಳಿನಿಂದ ಅರಣ್ಯ ಸಿಬ್ಬಂದಿಗಳು ಸಂರಕ್ಷಿತಾರಣ್ಯದಲ್ಲಿಅಕ್ರಮ ಪ್ರವೇಶ, ಕಳ್ಳಬೇಟೆ ತಡೆ ಸೇರಿದಂತೆ ಉದ್ಯಾನದಂಚಿನ ಗ್ರಾಮಗಳಲ್ಲಿ ಎದುರಾದ ವನ್ಯಪ್ರಾಣಿ ಮಾನವನ ನಡುವಿನ ಸಂಘರ್ಷ ತಡೆಗಟ್ಟಲು ಕಾಡಂಚಿನ ಜನರೊಂದಿಗೆ ಸೇರಿ ಅವಿರತವಾಗಿ ಶ್ರಮ ಹಾಕುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಸೋಂಕು ತಗುಲಿದಲ್ಲಿ ವನ್ಯಪ್ರಾಣಿಗಳಿಗೂ ಸರಾಗವಾಗಿ ಹರಡಲಿದ್ದು. ಸಿಬ್ಬಂದಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಬೇಕಿತ್ತು. ಹೀಗಿರುವ ವೇಳೆಯೇ ಕಾಡಂಚಿನ ತಾಲೂಕುಗಳಆರೋಗ್ಯಾಧಿಕಾರಿಗಳಿಗೆ ಲಸಿಕೆ ನೀಡಿರುವ ಬಗ್ಗೆ ನೋಟಿಸ್ ನೀಡಿರುವುದು ಬೇಸರ ಮೂಡಿಸಿದೆ ಎಂದರು.
ಅರ್ಧದಷ್ಟು ಮಂದಿಗೆ ಮಾತ್ರ ಲಸಿಕೆ:
ನಾಗರಹೊಳೆ ಹುಲಿಯೋಜನೆಯ ಹುಣಸೂರು ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂಸಿಬ್ಬಂದಿಗಳು ಸೇರಿ 605 ಮಂದಿಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 310 ಮಂದಿ ಮಾತ್ರ ಮೊದಲ ಹಂತದ ಲಸಿಕೆ ಪಡೆದಿದ್ದರೆ, 22 ಮಂದಿಗೆ 2ನೇ ಹಂತದ ಲಸಿಕೆ ಸಿಕ್ಕಿದೆ. ಇನ್ನೂ 292 ಮಂದಿ ಲಸಿಕೆ ಪಡೆಯಬೇಕಿದೆ. ಇವರಲ್ಲಿ ಕೊಡಗು ಜಿಲ್ಲೆ ಹಾಗೂ ಕೇರಳ ಸಂಪರ್ಕ ಕಲ್ಪಿಸುವ ಆನೆಚೌಕೂರು ವಲಯದಲ್ಲಿ 151 ಮಂದಿಯಲ್ಲಿ ಮೂವರು ಮಾತ್ರ ಲಸಿಕೆ ಪಡೆದಿದ್ದಾರೆ. ಅಂತರ ಸಂತೆ ವಲಯದಲ್ಲಿ ಲಸಿಕೆಯನ್ನೇ ಪಡೆದಿಲ್ಲ. ಹುಣಸೂರು ವಲಯದಲ್ಲಿ ಕೆಲವರು ಲಸಿಕೆ ಪಡೆದಿದ್ದರೆ, ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಅರ್ಧದಷ್ಟು ಮಂದಿ ಮಾತ್ರ ಲಸಿಕೆ ಪಡೆದಿದ್ದು, ಜೀವಭಯದ ನಡುವೆಯೂ ಅರಣ್ಯ ರಕ್ಷಣೆಯಲ್ಲಿ ಮುಂಚೂಣಿಯ ಸಿಬ್ಬಂದಿಗಳಿಗೆ ಲಸಿಕೆ ನೀಡಿರುವಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ ಟಿಎಚ್‌ಒಒಗಳಿಗೆ ನೋಟಿಸ್‌ಜಾರಿಗಿಳಿಸಿರುವುದು ಆಕ್ರೋಶ ಮೂಡಿಸಿದೆ.
20 ಅರಣ್ಯ ಸಿಬ್ಬಂದಿಗೆ ಸೋಂಕು: ಕಳೆದ 10 ದಿನಗಳ ಹಿಂದೆ ಹುಲಿ ಪತ್ತೆ ಕಾರ್ಯಾಚರಣೆ ಮತ್ತಿತರ ಕಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೀರನಹೊಸಹಳ್ಳಿ-4, ಆನೆಚೌಕೂರು-7, ನಾಗರಹೊಳೆ-2, ಅಂತರಸಂತೆ, ಮೇಟಿಕುಪ್ಪೆ ತಲಾ ಒಂದು, ತಿತಿಮತಿ ಹಾಗೂ ಹ್ಯಾಂಡ್ ಪೋಸ್ಟ್‌ನ ಎಸ್‌ಟಿಪಿಎಫ್‌ನ 7 ಸೇರಿದಂತೆ 20 ಮಂದಿಗೆ ಸೋಂಕು ತಗುಲಿದೆ.
-ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.