‘ನಾನಲ್ಲ, ಸೋನು ಸೂದ್ ಸೂಪರ್ ಹೀರೋ’ : ತೆಲಂಗಾಣ ಸಚಿವ ಕೆಟಿಆರ್
Team Udayavani, Jun 1, 2021, 1:49 PM IST
ಬಾಲಿವುಡ್ ನಟ ಸೋನು ಸೂದ್ ಅವರು ಸೂಪರ್ ಹೀರೋ ಎಂದು ತೆಲಂಗಾಣ ಸಚಿವ ಕೆ.ಟಿ ರಾಮ್ ರಾವ್ ಅವರು ಕೊಂಡಾಡಿದ್ದಾರೆ. ಅಭಿಮಾನಿಗಳು ತಮಗೆ ನೀಡಿದ ಪಟ್ಟವನ್ನು ಪ್ರೀತಿಯಿಂದಲೆ ಸೋನು ಸೂದ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.
ವ್ಯಕ್ತಿಯೊಬ್ಬರ ಸಂಕಷ್ಟಕ್ಕೆ ತಕ್ಷಣವೆ ಸ್ಪಂದಿಸಿದ ಸಚಿವ ಕೆಟಿಆರ್ ಕೇವಲ 10 ಗಂಟೆಯಲ್ಲಿ ಆಕ್ಸಿಜನ್ ಸಾಂಧ್ರಕವನ್ನು ತಲುಪಿಸಿದ್ದರು. ಇದರಿಂದ ಖುಷಿಗೊಂಡ ಆತ, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ನಮ್ಮ ಕಷ್ಟಕ್ಕೆ ಕೂಡಲೇ ಸ್ಪಂಧಿಸಿದ ನೀವು ನಿಜವಾಗಿಯೂ ಸೂಪರ್ ಹೀರೋ ಎಂದು ಟ್ವೀಟ್ ಮಾಡಿದ್ದ.
ತಮ್ಮನ್ನು ಸೂಪರ್ ಹೀರೋ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ನಿಮ್ಮಿಂದ ಆಯ್ಕೆಗೊಂಡ ಜನಪ್ರತಿನಿಧಿ ಮಾತ್ರ. ನನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದೇನೆ. ನೀವು ಸೋನು ಸೂದ್ ಅವರನ್ನು ಸೂಪರ್ ಹೀರೋ ಎಂದು ಕರೆಯಿರಿ ಎಂದು ಹೇಳಿದ್ದಾರೆ.
ಇನ್ನು ಕೆಟಿಆರ್ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್ ಅವರು, ನಿಮ್ಮ ಈ ಮಾತಿಗೆ ಧನ್ಯವಾದಗಳು. ಆದರೆ, ತೆಲಂಗಾಣದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನೀವು ನಿಜವಾದ ಹೀರೋ. ನಿಮ್ಮ ನಾಯಕತ್ವದಡಿ ತೆಲಂಗಾಣ ರಾಜ್ಯ ತುಂಬಾ ಅಭವೃದ್ಧಿಗೆ ಹೊಂದಿದೆ. ಈ ರಾಜ್ಯ ನನ್ನ ಎರಡನೆ ಮನೆಯಿದ್ದಂತೆ. ಅಲ್ಲಿಯ ಜನರು ನನಗೆ ತುಂಬ ಪ್ರೀತಿ ನೀಡಿದ್ದಾರೆ ಎಂದು ಸೋನು ಹೇಳಿಕೊಂಡಿದ್ದಾರೆ.
ಇನ್ನು ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ಅವರು ಸಾಕಷ್ಟು ಪರೋಪಕಾರಿ ಕೆಲಸ ಮಾಡುತ್ತಿದ್ದಾರೆ.
Thank you so much sir for your kind words! But you are truly a hero who has done so much for Telengana. The state has developed so much under your leadership. I consider Telengana as my second Home as its my place of work & the people have shown me so much love over the years?? https://t.co/8LG65I0G01
— sonu sood (@SonuSood) June 1, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.