ಕೋವಿಡ್ ನಿಂದ ಗುಣಮುಖನಾದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ
Team Udayavani, Jun 1, 2021, 2:17 PM IST
ಚಿತ್ರದುರ್ಗ: ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದ ಚಿತ್ರದುರ್ಗದ 50 ವರ್ಷದ ವ್ಯಕ್ತಿಯೊಬ್ಬರ ಕಿವಿ ಭಾಗದ ಚರ್ಮದ ಬಳಿ ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಚಿತ್ರದುರ್ಗದಲ್ಲಿ ಪತ್ತೆಯಾಗಿರುವ ಈ ಚರ್ಮದ ಫಂಗಸ್ ಪ್ರಕರಣ ದೇಶದಲ್ಲೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
ಚಿತ್ರದುರ್ಗದ ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ|ಎನ್.ಬಿ. ಪ್ರಹ್ಲಾದ್ ಅವರ ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಪ್ರಕರಣ ಪತ್ತೆಯಾಗಿದೆ.
54 ವರ್ಷದ ರೋಗಿಯು ಒಂದು ತಿಂಗಳ ಹಿಂದೆ ತೀವ್ರವಾದ ಕೋವಿಡ್-19 ರೋಗದಿಂದ ಬಳಲಿದ್ದು , ಈಗ ತಾನೇ ಚೇತರಿಸಿಕೊಂಡಿದ್ದರು. ಅನಿಯಂತ್ರಿತ ಮಧುಮೇಹ ರೋಗದಿಂದ ಕೂಡ ಬಳಲುತ್ತಿದ್ದರು. ಇದೇ ಸಂದಂರ್ಭದಲ್ಲಿ ಬಲ ಭಾಗದ ಕಿವಿಯ ಮೇಲ್ಬಾಗ ಹಾಗೂ ಕಿವಿಯ ಪಕ್ಕದ ಚರ್ಮವು ಕಪ್ಪಾಗಿ ನಶಿಸಿಹೋಗಿತ್ತು. ಇದರಿಂದ ವಿಪರೀತ ನೋವು ಬಾಧಿಸುತ್ತಿತ್ತು.
ಇದನ್ನೂ ಓದಿ:ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ ಕೆ ಶಿವಕುಮಾರ್
ಡಾ| ಪ್ರಹ್ಲಾದ್ ಬಳಿ ತಪಾಸಣೆಗೆಂದು ಬಂದಾಗ ಇದನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಕಿರು ಶಸ್ತ್ರಕ್ರಿಯೆಯ ಮೂಲಕ ಕಪ್ಪಾಗಿ ನಶಿಸಿಹೋದ ಕಿವಿಯ ಮೇಲ್ಬಾಗ ಹಾಗೂ ಕಿವಿಯ ಪಕ್ಕದ ಚರ್ಮದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದರು. ಈ ಸಮಯದಲ್ಲಿ ರೋಗಿಯಲ್ಲಿನ ಕಪ್ಪು ಫಂಗಸ್ ಸೋಂಕು ಕಿವಿಯ ಸುತ್ತಲಿನ ಮತ್ತು ತಲೆಯ ಮೇಲ್ಬಾಗದ ಚರ್ಮಕ್ಕೆ ಇನ್ನೂ ಹೆಚ್ಚಾಗಿ ಹರಡಿರುವುದನ್ನು, ತಜ್ಞ ಡಾ|| ಪ್ರಹ್ಲಾದ್ ಗುರುತಿಸಿದ್ದಾರೆ.
ಚಿತ್ರದುರ್ಗದ ವಾಸವಿ ಲ್ಯಾಬರೇಟರಿಯ ಡಾ|. ನಾರಾಯಣ ಮೂರ್ತಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ, ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಸುಧೀಂದ್ರರವರು ಸಹ ಚರ್ಮದ ಕಪ್ಪು ಫಂಗಸ್ ಸೋಂಕನ್ನು ದೃಢಪಡಿಸಿದ್ದಾರೆ.
ಪ್ರಸ್ತುತ ರೋಗಿಗೆ ಕಪ್ಪು ಫಂಗಸ್ ಸೋಂಕಿನಿಂದ ಹಾನಿಗೊಂಡಿರುವ ಚರ್ಮವನ್ನು ಸಂಪೂರ್ಣವಾಗಿ ತೆಗೆದುಹಾಕಿ ಆಂಪೋಟೆರಿಸಿನ್-ಬಿ ಚುಚ್ಚುಮದ್ದನ್ನು ನೀಡಿ ಮೊದಲ ಹಂತದ ಚಿಕಿತ್ಸೆಯನ್ನು ಮಾಡಬೇಕಾಗಿದೆ. ಎರಡನೇಯ ಹಂತದಲ್ಲಿ ಕಪ್ಪು ಫಂಗಸ್ ಸೋಂಕಿನಿಂದ ಸಂಪೂರ್ಣವಾಗಿ ರೋಗಿಯು ಗುಣಮುಕ್ತರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡು ಚರ್ಮದ ಕಸಿಯನ್ನು ಮಾಡಬೇಕಾಗಿರುತ್ತದೆ. ಇಲ್ಲಿಯವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 18 ಕಪ್ಪು ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ, ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಚಿತ್ರದುರ್ಗದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಲಾಗಿರುತ್ತದೆ. ಸಂಪೂರ್ಣ ಚಿಕಿತ್ಸೆಗೆ ಇವರೆಲ್ಲರಿಗೂ ಆಂಪೋಟೆರಿಸಿನ್-ಬಿ ಚುಚ್ಚುಮದ್ದು ಅತ್ಯಗತ್ಯವಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆವಿಗೆ 48 ಕಪ್ಪು ಫಂಗಸ್ ಕೇಸುಗಳು ವರದಿಯಾಗಿದ್ದು ಜಿಲ್ಲಾಧಿಕಾರಿಗಳು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿತ್ಸಕರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಈ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUDA CASE: ರಾಜಕೀಯ ಸುದ್ದಿಗಾಗಿ ಇ.ಡಿ. ಯತ್ನ : ಹರಿಪ್ರಸಾದ್ ಆರೋಪ
ಪ್ರೀತಿಸುವಂತೆ ಸಹಪಾಠಿಯ ಒತ್ತಡ: ಕಾಲೇಜಿನ 3ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.