ವೊಡಾಫೋನ್ – ಐಡಿಯಾ ನೀಡುತ್ತಿದೆ ಅಗ್ಗದ ರೀಚಾರ್ಜ್ ಪ್ಲ್ಯಾನ್ : ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Jun 1, 2021, 5:38 PM IST
ನವ ದೆಹಲಿ : ಟೆಲಿಕಾಂ ಕ್ಷೇತ್ರಗಳಲ್ಲಿ ಇತ್ತೀಚೆಗೆ ಭಾರಿ ಪೈಪೋಟಿ ಕಾಣುತ್ತಿದ್ದು, ತನ್ನ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಕಂಪೆನಿಗಳು ನಾ ಮುಂದು ತಾ ಮುಂದು ಎನ್ನುತ್ತಿವೆ. ಹೊಸ ಹಾಗೂ ಅತ್ಯಾಕರ್ಷಕ ರೀಚಾರ್ಜ್ ಆಫರ್ ಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ.
ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆಗೊಂಡಿದ್ದು, ವೊಡಾಫೋನ್ – ಐಡಿಯಾ ಅಥವಾ ವಿಐ (Vi) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ.
ಇದನ್ನೂ ಓದಿ : ಲಸಿಕೆ ಮಿಶ್ರ ಪ್ರಯೋಗವಿಲ್ಲ, ಎಲ್ಲರೂ ಎರಡು ಡೋಸ್ ಲಸಿಕೆ ಪಡೆಯಲೇಬೇಕು: ಕೇಂದ್ರದ ಸ್ಪಷ್ಟನೆ
ವೊಡಾಫೋನ್ – ಐಡಿಯಾ ನೀಡುತ್ತಿರುವ ಈ ರೀಚಾರ್ಜ್ ಪ್ಲ್ಯಾನ್ ಅಗ್ಗದ ರಿಚಾರ್ಜ್ ಪ್ಲಾನ್ ಆಗಿದೆ. ನಿಮ್ಮ ಮೊಬೈಲ್ ಅಗತ್ಯತೆಗಳು ಇಲ್ಲಿ ಲಭ್ಯವಿದೆ. ಇದರಲ್ಲಿ ದಿನಕ್ಕೆ 10 ರೂಪಾಯಿ, 13 ರೂಪಾಯಿ ಮತ್ತು 7 ರೂಪಾಯಿ ವೆಚ್ಚ ಮಾಡಬೇಕಾಗಿ ಬರುತ್ತದೆ ಅಷ್ಟೆ.
ವೊಡಾಫೋನ್ – ಐಡಿಯಾ 398 ರೂ. ಪ್ಲ್ಯಾನ್ ನ ವಿಶೇಷತೆಗಳೇನು..?
ಇದರಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. 28 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ರೀಚಾರ್ಜ್ ಪ್ಲ್ಯಾನ್ ಅನಿಯಮಿತ ಕರೆ. ದಿನಕ್ಕೆ 100 ಎಸ್ ಎಂ ಎಸ್ ಉಚಿತವಿದೆ. ಹಾಗೂ ವಿಐ ಮೂವಿಸ್ ಮತ್ತು ಟೀವಿ ನೋಡಬಹುದು. ಈ ಪ್ಲಾನ್ ಪ್ರಕಾರ ನಿಮಗೆ ದಿನಕ್ಕೆ 14.21 ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತದೆ.
ವೊಡಾಫೋನ್ – ಐಡಿಯಾ 401 ರೂಪಾಯಿ ಪ್ಲ್ಯಾನ್ ನ ವಿಶೇಷತೆಗಳೇನು..?
ವೊಡಾಫೋನ್ – ಐಡಿಯಾ ಈ ಪ್ಲಾನ್ ಕೂಡ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ರೀಚಾರ್ಜ್ ಪ್ಲ್ಯಾನ್ ನಲ್ಲಿ ಪ್ರತಿದಿನ 3 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ 16 ಜಿಬಿ ಎಕ್ಸ್ಟ್ರಾ ಡಾಟಾ ಸಿಗುತ್ತದೆ. ಹಾಗೂ ದಿನಕ್ಕೆ 100 ಎಸ್ ಎಮ್ ಎಸ್ ಸಿಗುತ್ತದೆ. ಅನಿಯಮಿತ ಕರೆ ಕೂಡ ಇದೆ. ಮಾತ್ರವಲ್ಲದೇ, ಡಿಸ್ನಿ ಪ್ಲಸ್, ಹಾಟ್ ಸ್ಟಾರ್ , ವಿಐ ಮೂವಿಸ್ ನೋಡಬಹುದಾಗಿದ್ದು, ಈ ಪ್ಲಾನ್ ಗೆ ನೀವು ದಿನಕ್ಕೆ 14.31 ರೂ. ಖರ್ಚು ಮಾಡಬೇಕಾಗುತ್ತದೆ.
ವೊಡಾಫೋನ್ – ಐಡಿಯಾ 249 ರೂ. ಪ್ಲ್ಯಾನ್ ನ ವಿಶೇಷತೆಗಳೇನು..?
ವೊಡಾಫೋನ್ ಐಡಿಯಾ 249 ರೂ. ಪ್ಲಾನ್ ನಲ್ಲಿ ದಿನವೂ 1.5 ಜಿಬಿ ಡಾಟಾ ಸಿಗುತ್ತದೆ. ಇದಕ್ಕೆ ನೀವು ದಿನಕ್ಕೆ 8.89 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅನಿಯಮಿತ ಕರೆಯೊಂದಿಗೆ ಉಚಿತ ನೂರು ಎಸ್ ಎಮ್ ಎಸ್ ಒಳಗೊಂಡಿದ್ದು, 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಇದನ್ನೂ ಓದಿ : ವಿಡಿಯೋ ವೈರಲ್ : ಮದುವೆ ಸಮಾರಂಭದಲ್ಲಿಯೇ ಗುಂಡು ಹಾರಿಸಿದ ವಧು : FIR ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.